ಕರಿ ಇರುಳ ಬದುಕು ದೀಪಽದ ಮಿಣಿಕು ಒಳ ಉರಿಯ ಹಿರಿಯಾಸೆ ಬಿರಿದೋಯಿತೊ ನರನರದ ಸರದಾಗೆ ಉರಿ‌ಉರಿಯ ದಳ ಅರಳಿ ಹೂವಾಯಿತೊ-ಬೆಂಕಿ-ಹೆಡೆಯಾಯಿತೊ. ಆಲದಾ ಬಿಳಲು ಕರಿಬಾಳ ಸರಳು- ನೆಲದ ನಗೆ ನುಂಗುವ ಹಗೆಯಾಯಿತೊ ಬೇರುಗಳು ಬರಸೆಳೆದು ಕಾರಿರುಳ ವಿಷ ಸುರಿದು ಬ...

ಕಿರಿಯ ವಯಸ್ಸಿನಲ್ಲಿಯೇ ‘ಭೂಗೋಳ’ವನ್ನು ಹೊಕ್ಕಿರುವ ಮತ್ತು ‘ಚರಿತ್ರೆ’ಯಲ್ಲಿಯೂ ಉಳಿದಿರುವ ಡಿ.ಆರ್. ನಾಗರಾಜ ಅವರದು ದೈತ್ಯ ವಿಮರ್ಶಾ ಪ್ರತಿಭೆ. ಇವರ ಕೃತಿಗಳಲ್ಲಿ ಹಠ ಮತ್ತು ಪ್ರೀತಿಯಿಂದ ಮಾಡಿದ ಅಪಾರ ಅಧ್ಯಯನ, ಸದಾ ಜಾಗೃತವಾಗಿರಿಸಿಕೊಂಡ ಸೂಕ್ಷ...

ಮೊದಲು ತಾಯ ಹಾಲ ಕುಡಿದು, ಲಲ್ಲೆಯಿಂದ ತೊದಲಿ ನುಡಿದು, ಕೆಳೆಯರೊಡನೆ ಬೆಳೆದು ಬಂದ ಮಾತದಾವುದು- ನಲ್ಲೆಯೊಲವ ತೆರೆದು ತಂದ ಮಾತದಾವುದು- ಸವಿಯ ಹಾಡ, ಕತೆಯ, ಕಟ್ಟಿ, ಕಿವಿಯಲೆರೆದು, ಕರುಳ ತಟ್ಟಿ, ನಮ್ಮ ಜನರು, ನಮ್ಮ ನಾಡು, ಎನಿಸಿತಾವುದು- ನಮ್ಮ ಕ...

ಕಾಣದ ಕೈಯೆಂದು ಕಾಣದಕೆ ಹಂಬಲಿಸಿ ಹುಡುಕುವಿಯೇತಕೆ ಕಾಣುವ ಕೈ ಕೈಯಲ್ಲವೇ? ತೊಟ್ಟಿಲು ತೂಗಿದ ಕೈ ಅಟ್ಟುಣಿಸಿದ ಕೈ ಮೀಯಿಸಿದ ಕೈ ಬಟ್ಟೆಯುಡಿಸಿದ ಕೈ ತೊಡೆ ಮೇಲೆ ಕೂಡಿಸಿದ ಕೈ ಹಾಲೂಡಿದ ಕೈ ಒರೆಸಿದ ಕೈ ಬರೆಸಿದ ಕೈ ಕರೆದ ಕೈ ಚಾಚಿದ ಕೈ ಅಕ್ಕರೆಯಿಂದ ...

ವಾಗ್ದೇವಿಯ ಮನೆಯಿಂದ ಚಂಚಲನೇತ್ರರ ಮಠಕ್ಕೆ ಹೆಚ್ಚು ದೂರ ವಿರಲಿಲ್ಲ. ಹೆಚ್ಚು ಕಡಿಮೆ ಒಂದುವರೆ ಹರದಾರಿಯೆನ್ನಬಹುದು. ಚಂಚಲ ನೇತ್ರರು ವಾಗ್ದೇವಿಯ ಬರುವಿಕೆಯನ್ನು ಕಾಯುತ್ತಾ, ಒಮ್ಮೆ ಆ ಗವಾಕ್ಷದಿಂದ ಒಮ್ಮೆ ಈ ಗವಾಕ್ಷದಿಂದ ಬೀದಿಕಡೆಗೆ ನೋಡುತ್ತಾ, ...

ಬೆಟ್ಟದಿಂದ ಹೆಬ್ಬೆಟ್ಟು ಗಾತ್ರದ ಕಲ್ಲ ತಂದು ಕೊರಳಿಗೆ ಕಟ್ಟಿ ಲಿಂಗ ಎನ್ನುವರು ಗಿಡದಿಂದ ಹಿಡಿ ಹತ್ತಿಯ ತಂದು ಹೊಸೆದು ಒಡಲಿಗೆ ಹಾಕಿ ಜನಿವಾರ ಎನ್ನುವರು ಬೆಟ್ಟ ಎಷ್ಟು ಲಿಂಗಗಳ ಗಿಡ ಎಷ್ಟು ಜನಿವಾರಗಳ ತಮ್ಮೊಳಗೆ ಇರಿಸಿಕೊಂಡಿವೆ ನೋಡ *****...

ಪಡ್ಡೆ ಕರುವಂತೆ ಎಗ್ಗಿಲ್ಲದೆ ತಿಂದು, ತಿರುಗಿ ಕೊಂಡಿದ್ದೆನೆಗೆ ಮದುವೆಯೆಂಬ ಮೂಗುದಾಣ ಬಿಗಿದು ಸಂಸಾರ ದಾರಂಭಕ್ಕಿಳಿಸಿದರು. ಮುಂದರಿಯದ ನನಗೆ ಮದುವೆ ಯಾತನೆ ಯಾಯಿತು ಗಿಳಿಬಾಳು ಕರಗಿ ಹೋಯಿತು ಮೈ ಮನಸೆಲ್ಲಾ ಜರ್ಜರಿತವಾಯಿತು. ಪರಿಸರ ರೂಪಾಂತರ ಹೊಂ...

ಮದುವೆಯ ಆಟವೆ ತಿಳಿಯದ ಮಗುವಿಗೆ ಮದುವೆ ಮಾಡಿದರೆ ಹೇಗಮ್ಮ ಅಮ್ಮನಾಗುವ ದಿನಗಳು ಬಂದರೆ; ತಾನಮ್ಮನಾಗುವ ದಿನಗಳು ಬಂದರೆ ಗುಮ್ಮನಾರು ನೀ ಹೇಳಮ್ಮ? //ಪ// ಅಕ್ಷರವನ್ನು ಕಲಿಯಬೇಡವೆ ಚಿಣ್ಣರೊಡನೆ ಕುಣಿದಾಡಬೇಡವೆ ಬಳ್ಳಿ ತಾನು ಗಿಡವಾಗುವ ಮುನ್ನವೆ ಫಲ ...

ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ ಸಂದರ್ಭಗಳು ಬರುತ್ತಿದ್ದದ್ದು ತೀರಾ ಅಪರೂಪ. ...

1...678910...12

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....