ಕಣ್ಣೀರು ಬತ್ತಿಹೋದ ನನ್ನ ಗುಳಿಬಿದ್ದ ಕಣ್ಣುಗಳಲ್ಲಿ ನೋವಿನ ಸೆಳಕು ಏಕೆಂದರೆ ಮೊಗ್ಗಗಳು ಬಿರಿವಾಗ ಹಸಿರುಟ್ಟು ನಲಿವಾಗ ನನ್ನ ಸುಕ್ಕುಗಟ್ಟಿದ ಕಪ್ಪು ಮುತ್ತಿದ ಕಣ್ಣುಗಳು ಯಾತನೆಯಿಂದ ಹನಿಗೂಡುತ್ತಿದ್ದವು. ಎಣ್ಣಿಗಟ್ಟಿ ಮಸುಕಾದ ಭಾರವಾಗಿ ಜೋತುಬಿದ...

ಏನ ಪೇಳಲಿಯಮ್ಮನ್ನದಾತನ ಸಿದ್ಧಿಯನು? ದಾನ ಸುದ್ದಿಯನು! ತಾನೇನ ಬೆಳೆದರು ಘನನು ತಾನೆಲ್ಲವನು ಬಗೆಬಗೆಯ ಕಂಪೆನಿಗಿಕ್ಕಿ ಕೊನೆಯೊಳೆತ್ತುವ ನೋಡಾ ರಿಕ್ತ ಹಸ್ತವನು ಶೂನ್ಯ ಸಂಪಾದನೆಯಾಧ್ಯಾತ್ಮ ಪ್ರತಿನಿಧಿ ಇವನು – ವಿಜ್ಞಾನೇಶ್ವರಾ *****...

ಹಾಳು ಬೀದಿ ಬಸದಿಯಲಿ ಗೋಳು ಕ್ಷಯ ಹಿಡಿದ ಬಾಳಿಗೆ ದೊಂಗಾಲು ಬಿದ್ದು ಕ್ರಿಮಿಗಳೋಪಾದಿ ಕೊಳೆವ ನರ ನಾರಾಯಣರ ಬಾಳು ಬಾಳೆ? ನೋಡಿರೈ ಅವರ ಜೀವಂತ ಮರಣ ಗುರಿರಹಿತ ಪಯಣ ಉದಾಸೀನ ನಯನ, ನಿಶ್ಯಕ್ತ ಹರಣ ಜೀವನದ ಅಲೆದಾಟ ರೇಗಾಟ, ಕೂಗಾಟ, ನಿಜವನ್ನೆ ಸುಳಿವಾಟ...

ಬೆಳಗಿಸು ಬಾ ಶುಭ ಆರತಿ ಓ ಮಂಗಳ ದೀವಿಗೆ ಜಗದ ತಮವು ಹರಿದು ಅಲ್ಲಿ ಬೆಳಕು ಮೂಡಲೊಮ್ಮೆಗೆ || ನವರಾತ್ರಿಯ ನವ ಬೆಳಗದು ಹರುಷ ತರಲು ಬಾಳಿಗೆ ಹರಿಸಿ ಅವರ ನಗು ಮೊಗವ ಅರಳಿಸು ಬಾ ದೀವಿಗೆ || ಸುಳ್ಳು ಕಪಟ ಮೋಸವೆಂಬ ಮನದ ಬಾಳ ಕತ್ತಲೆ ತೊಡೆದು ಅಲ್ಲಿ ಬ...

“ನಿಶ್ಚಯಾಚೆ ಬಲ, ತುಕಾಮಣೆ ಹೇಚಿ ಸರ್‍ವಾಚೆ ಫಲ” ಸಾಧುಶ್ರೇಷ್ಠರಾದ ತುಕಾರಾಮಬುವಾನವರ ಈ ವಾಕ್ಯವು ದೃಢನಿಶ್ಚಯದ ಮಹತಿಯನ್ನು ವ್ಯಕ್ತಗೊಳಿಸುತ್ತದೆ. ದೃಢನಿಶ್ಚಯದಿಂದ ಜಗತ್ತಿನಲ್ಲಿ ಬೇಕಾದಂಥ ಪದನಿಗೇರಬಹುದಾಗಿದೆ. ಪೂರ್ವದಲ್ಲಿ ಆರ್ಯ...

ಎನ್ನ ಮನ ಪಾತಾಳಕ್ಕೆ ಜಾರುತ್ತಿದೆ ಕಾಮ ಕ್ರೋಧ ಮೈಲಿಗೆಯಿಂದ ಸೋರುತ್ತಿದೆ ಮನದ ಅಂಬರ ಪಾಪ‌ಅಂಟಿ ಹರಕಾಗಿದೆ ಆಧಾರವಿಲ್ಲದೆ ಮನಮಂದಿರ ಮುರಕಾಗಿದೆ ಯಾವದೋ ಕ್ಷಣಗಳವು ರಕ್ಕಸದಂತೆ ಬಾಚುತ್ತಿವೆ ಮೇಲಿಂದ ಮೇಲೆ ನುಂಗಲು ಜೀವ್ಹೆ ಚಾಚುತ್ತಿವೆ ಅನನ್ಯ ಜನು...

ನೀ ಮನಸು ಮಾಡೆನ್ನ ಕ್ಷಮಿಸೋ ದೇವಾ ಅರಿತೋ ಅರಿಯದಲೋ ತಪ್ಪಮಾಡ್ಡಿದ್ದರೆ ನಾನು| ಸಕಲರ ರಕ್ಷಕ ಆರಕ್ಷಕ ಮೂಜಗದೊಡೆಯನೇ ಪಾಲಿಸೋ ಎನ್ನ ನೀನು|| ವಿದ್ಯೆ ವಿಜ್ಞಾನ ಅರಿಯೇ ನಾನು ತರ್ಕ ವಿತರ್ಕಗಳ ತಿಳಿಯೇ ನಾನು| ಅಂಕ ಸಂಖ್ಯಾದಿ ವಿವರಗಳ ಬರೆಯಲು ಬಾರದವ ...

ಅವರು ಸಲಹಾ ಕೇಂದ್ರದಲ್ಲಿ ಮಾನಸಿಕ ರೋಗಿಗಳಿಗೆ ಆಪ್ತ ಸಲಹೆ ನೀಡುತ್ತಿದ್ದರು. ಇವರು ಎಷ್ಟು ನನ್ನ ಹತ್ತಿರದವರಾಗಿ ಮನದಾಳದಲ್ಲಿ ಹೊಕ್ಕು ಸಲಹೆ ನೀಡುತ್ತಾರೆ ಎಂದು ಅನಿಸುತಿತ್ತು. ರೋಗಿಯನ್ನು ರಸ್ತೆಯಲ್ಲೋ, ಮಾರುಕಟ್ಟೆಯಲ್ಲೋ ಎದುರಾದಾಗ ಅಪರಿಚಿತರಂ...

೧ ಕಣ್ತೆರೆಯುತ್ತಲೆ ಕಣ್ಮುಚ್ಚಿದ ಕಂದಮ್ಮಗಳೇ ಅರಳುತ್ತಲೆ ಉರಿದುಹೋದ ಅಕ್ಕಂದಿರೆ, ತಂಗಿಯರೇ ಬದುಕುತ್ತಲೆ ಬೀದಿಪಾಲು-ತಾಯಂದಿರೆ, ತಂದೆಯರೇ ಕರೆಯುತ್ತಲೆ ಕಮರಿಹೋದ ಗೋರಿ ಗೆಳೆಯರೇ ನಡುವೆ ನಿಂತವನ ಮನಸು ಚಿಂತೆವನ ಉರಿಯುತ್ತಿದೆ ಕಾಡು ಮುರಿಯುತ್ತಿದ...

* ಒಡಲಾಳದ ಚಿತ್ರ ಹೆಳವನಕಟ್ಟೆ ಗಿರಿಯಮ್ಮನ ‘ಚಂದ್ರಹಾಸ ಕಥೆ’, ‘ಸೀತಾ ಕಲ್ಯಾಣ’, ‘ಉದ್ಧಾಲಕನ ಕತೆ’ ಮುಂತಾದ ಕತನಕಾವ್ಯಗಳಲ್ಲೇ ಕಥನ ಪರಂಪರೆಯ ಕುರುಹುಗಳಿವೆ. ಇಂತಹ ಪರಂಪರೆಯನ್ನು ಪೋಷಿಸಿಕೊಂಡು ಬಂದ ದಾವಣಗೆರೆ ಜಿಲ್ಲೆಯಲ್ಲಿ ಶಕ್ತವಾಗಿ ಕಥೆ ಹೇಳಬ...

1...89101112

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....