ಏನಿದು ಭಗ್ಗೆಂದು ಕೇಕೆ? ಬೆಚ್ಚಿ ನೋಡಿದರೆ ಇಲ್ಲಿ ಕೈಕೈ ಹಿಡಿದು ಕುಣಿಯುವ ಕತ್ತಲಕುಲ ವೃತ್ತ! ನಡುವೆ ನಾಚನಿಂತ ಬಡ ಒಡಲ ನಗ್ನಮೊತ್ತ. ನಡುಗಿಸುತ್ತದೆ ಮೈ; ಕಂಪಿಸುತ್ತದೆ ಕೈ ಚಿತ್ತದಲ್ಲಿ ಕೆತ್ತಿದ ಪ್ರಶ್ನೆ ಕೆಣಕುತ್ತದೆ: ಕಟ್ಟಿದೆವೆ ನಾವು ಹೊಸ ...

ಭಾಗ -೨ ಹಿಂದಿನ ಸಂಚಿಕೆಯಲ್ಲಿ ವಿಮರ್ಶಿಸಿದ “Andrea Del Sarto” ಡ್ರೆಮ್ಯಾಟಿಕ ಮೋನೋಲಾಗ್‌ನಲ್ಲಿ ಹೆಣ್ಣಿನ ಸೋಗಲಾಡಿತನವನ್ನು ಸಮರ್ಥವಾಗಿ ಚಿತ್ರಿಸಿದ್ದ ರಾಬರ್ಟ ಬ್ರೌನಿಂಗ್ “My last Duchess” ಮೊನೋಲಾಗ ನಲ್ಲಿ...

ಮಾತೇ ಜ್ಯೋತಿರ್ಲಿಂಗ ಅನುಭವ ಮಾತೇ ಜ್ಯೋತಿರ್ಲಿಂಗ ಸತ್ಯದ ಕಿಡಿಯಿರೆ ಒಳಗೇ ನಿತ್ಯವು ಬಾಳನು ಬೆಳಗೇ || ಪ || ಮಾನವ ಪಡೆದಿಹ ಸಂಪದ ಮಾತು ಜಾಣರ ಸಾಧನೆ ಬೇರು ಮೌನದ ಗರ್ಭವು ತಳೆಯುವ ಮಗುವು ಜ್ಞಾನದ ಫಲವನು ತಂದಿಹುದು || ೧ || ಪ್ರೀತಿಯ ಪುಷ್ಪವು ಮ...

ದೇವರ ಕಾಣಲು ಹೋದವರಿದ್ದಾರೆ ಕಾಡುಬೆಟ್ಟಗಳ ಹಾದು ಕಾಡ ಕಾಣಲಿಲ್ಲ ಬೆಟ್ಟವ ಕಾಣಲಿಲ್ಲ ದೇವರ ಕಾಣಲಿಲ್ಲ ಮರವ ಕಾಣದೆ ಕಾಡ ಕಾಣುವುದು ಬಯಲ ಕಾಣದೆ ಬೆಟ್ಟವ ಕಾಣುವುದು ಎಂತೊ ಮನುಷ್ಯ ಮನುಷ್ಯರ ಕಾಣದ ದೇವರ ಕಾಣುವುದು? ಪಾಪವ ನೀಗಲು ಹೋದವರಿದ್ದಾರೆ ಪುಣ...

“ವೆಂಕಟಪತಿಯು ಮನೆಯಲ್ಲಿ ಕುಂಭಕರ್ಣ ವ್ರತಾಚರಣೆಯಲ್ಲಿ ಅಮರಿ ಕೊಂಡಿರುವುದಿಲ್ಲವಷ್ಟೆ. ಇಲ್ಲವಾದರೆ ಇಷ್ಟು ಸಣ್ಣ ಕೆಲಸಮಾಡಿಕೊಂಡು ಬರುವುದಕ್ಕೆ ಎಷ್ಟು ಸಾವಕಾಶವಪ್ಪ! ತಾನುಮಾಡಿದ್ದು ಉತ್ತಮ, ಮಗ ಮಾಡಿದ್ದು ಮಧ್ಯಮ, ಆಳುಮಾಡಿದ್ದು ಹಾಳೆಂಬ ಗ...

ನಾನು ಪುಣ್ಯಕ್ಷೇತ್ರಗಳ ತೀರ್‍ಥಯಾತ್ರೆ ಮಾಡಿ ಮುಡಿ ಕೊಡಬೇಕೆಂದು ಹರಕೆ ಹೊತ್ತಿದ್ದೆ ದೇವರೇ ನನ್ನ ಮನೆಗೆ ಬಂದು ಮುಡಿ ತೆಗೆದುಕೊಂಡು ಹೋಗಿದ್ದಾನೆ ಬೇಕಾದರೆ ನೋಡಿ ಬೋಳಾಗಿದೆ ನನ್ನ ತಲೆ *****...

ಉದಯಾಚಲದಲಿ ಮೂಡಿದ ಸೂರ್ಯ ಹಿಡಿದನು ಕನ್ನಡ ಬಾವುಟವ ಹಾರಿದ ಹಕ್ಕಿಗಳೆಲ್ಲವು ಮೊರೆದವು ಕನ್ನಡ ನಾಡ ಗೀತವ || ಓಡುವ ನದಿಗಳು ಕಲಕಲ ರವದಲಿ ನಲಿಸಲಿ ಕರುನಾಡ ಹೆಜ್ಜೆಯ ಹಾಕಿದ ಪಚ್ಚನೆ ಪಯಿರು ಮೆರೆಸಲಿ ಸಿರಿನಾಡ ಪಡುವಣ ತೀರದ ಸಹ್ಯಾದ್ರಿಯ ಸಿರಿ ಸ್ಫೂ...

ತಮಿಳು ಮೂಲ: ಕೊನಷ್ಟೈ “ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ”ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ. ಲೇಡೀಸ್ ಕ್ಲಬ್‌ನ (ಮಹಿಳಾ ಸಮಾಜ) ಉಪವನದ...

ಅರ್ಧ ಸಂಬಳಕ್ಕೆ ಎಲ್ಲಾದರೂ ಸರಿ ಕೆಲಸ ಮಾಡುವೆವು, ವಿನಮ್ರ ಕಳಕಳಿ ಕೊಟ್ಟರಾಯಿತು ವೇತನ ಏರಿಸಿರೆಂದು ಹೂಡುವರು ಉಗ್ರ ಚಳುವಳಿ ಹೇಗಿದೆ ಸರ್‍ಕಾರಿ ನೌಕರರ ನಡಾವಳಿ? *****...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....