ನಾನು ಪುಣ್ಯಕ್ಷೇತ್ರಗಳ
ತೀರ್‍ಥಯಾತ್ರೆ ಮಾಡಿ
ಮುಡಿ ಕೊಡಬೇಕೆಂದು
ಹರಕೆ ಹೊತ್ತಿದ್ದೆ
ದೇವರೇ ನನ್ನ ಮನೆಗೆ ಬಂದು
ಮುಡಿ ತೆಗೆದುಕೊಂಡು ಹೋಗಿದ್ದಾನೆ
ಬೇಕಾದರೆ ನೋಡಿ
ಬೋಳಾಗಿದೆ ನನ್ನ ತಲೆ
*****