ಹುಟ್ಟಿನಿಂದ ಕಟ್ಟಕೊನೆಗೆ ಕಾಯಬೇಕು ಕಾಯಿ || ಪ || ಗಿಡವ ಹಾಕಿ ಫಲವ ಬೇಡಿ ಕಾಯಬೇಕು ಕಾಯಿ ದುಡಿದ ಮೇಲೆ ಫಲವಕೇಳಿ ಬೇಡಿ ಬೇಡಿ ಸಾಯಿ || ೧ || ಕಾಯಿ ಮಾಗಿ ಹಣ್ಣದಾಗಿ ಬೀಳ್ವವರೆಗೆ ಕಾಯಿ ಸೋಯದಂತೆ ಗಿಡದ ಹಣ್ಣು ಸೇರಬೇಕು ಬಾಯಿ || ೨ || ಗುಡ್ಡವನು...

ಸುಮ್ಮನೆ ಚಿಟಿಕೆ ಹಾಕಿ ಕರೆದು ಕುಣಿಸಿ ಹಂಗಿಸಿ ಸುಖಪಡಲಿಲ್ಲವೇ ನೀವು ಮಲಗುವ ಮೊದಲು ಬಾಲದ ಹಿ೦ದೆ ವರ್ತುಲ ಹಾಕುವ ಪರಂಪರೆಯನ್ನು ಅರ್ಥಹೀನವೆಂದು ತಮಾಷೆ ಮಾಡಿ ನಗಲಿಲ್ಲವೇ ನೀವು ಕಚ್ಚುವ ನಾಯಿ ಬೊಗಳುವ ನಾಯಿ ಹೀಗೆ ಕೋಮು ಕಟ್ಟಲಿಲ್ಲವೇ ನೀವು ನಾಯಿ...

ಔಷಧಿಗಳು ‘ಪೀಡೆನಾಶಕಗಳು’ ಅಲಂಕಾರಕ ಸಾಮಗ್ರಿಗಳು, ಬಣ್ಣಗಳು ಇವೆಲ್ಲ ದೈನಂದಿನ ಬಳಕೆಯ ವಸ್ತುಗಳಾಗಿವೆ. ಹೊಲಗದ್ದೆಗಳಲ್ಲಿ ನೇರವಾಗಿ ಸಂಶ್ಲೇಷಿತ ಔಷಧಿಯನ್ನು, ಪ್ಲಾಸ್ಟಿಕ್‌ಗಳನ್ನು, ಪ್ಲಾಸ್ಟಿಕ್‌ನಂತಹ ಇತರೆ ಇಂಗಾಲದ ಉತ್ಪನ್ನಗಳಾದ ಪಾಲಿಹೈಡ್ರಾ ಕ...

ಅರಳಿಹುದು ನಮ್ಮ ಮಡಿಲೊಳಗೊಂದು ಮಲ್ಲಿಗೆಯ ಮುಗುಳು ತುಂಬಿಹುದು ಮನೆ, ಮಂದಿ ಮನಸೆಲ್ಲಾ ಒಮ್ಮುಖವಾಗಿ. ಮರೆಯುವೆವು ನಮ್ಮನು, ನಮ್ಮದನು ನೋಡುವುದರಲ್ಲಿ ನಿಸರ್ಗದೀ ವಿಶುದ್ಧ ಮೂರ್ತಿಯ ಒಂದೊಂದು ಚಿಗುರು ನಡೆ, ನುಡಿ, ಆಟ, ನೋಟಗಳ. ಅಂತೆಯೇ ಮಾತರಿಯದ ಕ...

ಸುಂದರ ಮನಸುಗಳು ಬಣ್ಣದ ಕನಸುಗಳು ಗರಿ ಬಿಚ್ಚಲಿ ಆಕಾಶದಲಿ ಬೆಳದಿಂಗಳು ತಾವಾಗುತಲಿ //ಪಲ್ಲವಿ// ನಿಮ್ಮಯ ಜೊತೆಗಿವೆ ಹಕ್ಕಿಗಳು ಕಾಂತಿಯ ಚಿಮ್ಮುವ ಕನಸುಗಳು ಜೊತೆಯಲಿ ಓಡುವ ಮೋಡಗಳು ಹಗುರಾಗಿರುವ ಮನಸುಗಳು ತೇಲುವ ಆಡುವ ಈ ಸೊಗಸು ತುಂಬಲಿ ನನ್ನೆಲ್ಲ...

ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ ನನಗೆ ಗೊಂದಲ ಉಂಟಾಯಿತು. ಅವನು ನನ್ನನ್ನು ನೋಡಿದ ದೃಷ್ಟಿಯು ಈ ಸಂಶಯಕ್ಕೆ ಎ...

ನಿನ್ನುಸಿರು ಬೆರೆತಿದೆ ಈ ಮನೆಯಲ್ಲಿ ಹಾಗಾಗಿ ಎದೆಯಲ್ಲಿ ಸಂತಸವಿದೆ ನೀನುಲಿದ ಶಬ್ದಗಳು ಪ್ರೀತಿಯ ಅಕ್ಷರಗಳ ಬರೆದಿವೆ ಹಾಗಾಗಿ ಹೂಗಳು ನಗುತ್ತಿವೆ ನಿಂಜೊತೆ ಹಾಕಿದ ಹೆಜ್ಜೆಗಳು ಮನೆಯಿಂದ ಕಡಲದಂಡೆತನಕ ಹರಡಿಕೊಂಡಿವೆ ಹಾಗಾಗಿ ದಾರಿಗಳಿಗೂ ನೆನಪು ಅಂಟ...

ನೃತ್ಯರೂಪಕ ಪಾತ್ರಗಳು ಸಂಪಿಗೆ ಮಲ್ಲಿಗೆ ಗುಲಾಬಿ ಸೇವಂತಿಗೆ ಇರುವಂತಿಗೆ ತುಂಬೆ ಶಿವ ಮೇಳ ಬೆಳಗಾಗುತ್ತಿರುವ ದೃಶ್ಯ ಹಾಡು : ಕೂಗುತಿದೆ ಕೋಳಿ ಮೂಡಲಲ್ಲಿ ಹೋಳಿ ಜಗ್ಗಿ ಜಗ ಜಗ್ಗಿ ಹೂವಿನ ಸುಗ್ಗಿ ಬಣ್ಣ ಬಣ್ಣದ ಬೆಡಗು ಹೊಸ ದಿನದ ಸಡಗರವು ಸುಂದರವು ಈ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...