Month: April 2021

#ಹನಿಗವನ

ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೬

0

ತನಗೆ ಬೇಕೆಂದಂತೆ ತಾನೇ ಕಂಡುಕೊಳ್ಳುವ ಸತ್ಯದ ಹುಡುಕಾಟದಲ್ಲಿ ಹಸಿವು ನೀಡುತ್ತದೆ ಏಕಪಕ್ಷೀಯ ತೀರ್ಪು ರೊಟ್ಟಿಯ ಜೀವಕಾರುಣ್ಯ ಬೀದಿಗೆ ಬಿದ್ದ ಬೆಪ್ಪು. *****

#ಕವಿತೆ

ದೇವರು ವರವನು ಕೊಟ್ಟರೂ

0
ಕವಿ, ಸಾಹಿತ್ಯ ಕೃಷಿಕ, ವೃತ್ತಿಯಲ್ಲಿ ಸಾಪ್ಟ್‍ವೇರ್ ಇಂಜಿನೀಯರ್ ಆಗಿ
ಅಮೋಘ ಸಾಧನೆ ಮಾಡಿರುವ ಆನಂದ ಹೆಬ್ಬಾಳು ಎಂದು ಗುರುತಿಸಿಕೊಂಡಿರುವ ಇವರ ಹೆಸರು ಆನಂದಾಚಾರ್.ಟಿ. ಇವರ ಕಾವ್ಯನಾಮ "ಜಾನಕಿತನಯಾನಂದ". ತಮ್ಮ ಬಿಡುವಿನ ವೇಳೆಯಲ್ಲಿ ಕನ್ನಡ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಅನೇಕ ಕವನಗಳನ್ನು ರಚಿಸಿ, ಸುಗಮಸಂಗೀತ ಕ್ಷೇತ್ರದ ದಿಗ್ಗಜರಾಗಿದ್ದ ಶ್ರೀಯುತ ಮೈಸೂರು ಅನಂತಸ್ವಾಮಿಯವರ ಸಲಹೆಯಂತೆ ಹೆಚ್ಚಿನ ವಿದ್ಯಾಭ್ಯಾಸಮಾಡಿ, ಜೀವನ ತರಂಗಗಳು, ಮಂಥನ, ಚಕ್ಷು ಹಾಗು ಅಕ್ಷಯ ಎಂಬ ಕವನ ಸಂಕಲನ ರಚಿಸಿದ್ದಾರೆ.
ಜಾನಕಿತನಯಾನಂದ
Latest posts by ಜಾನಕಿತನಯಾನಂದ (see all)

ದೇವರು ವರವನು ಕೊಟ್ಟರೂ ನಾನು ಬೇಡೆನು ಎನನೂ ಸಾಕು ನೀ ನನಗಿನ್ನು| ಬೇಡುವುದಾದರೆ ಬೇಡುವೆ ದೇವರ ಸೃಷ್ಟಿಸದಿರುವಂತೆ ನಿನಗಿಂತ ಬೇರೆ ಯಾವ ಚೆಲುವೆಯನು|| ದೇವರ ವರವನು ಬೇಡುವೆ ನಾನು ನಿನ್ನಂದವ ನೋಡುತ ಕಾಲ ಕಳೆಯಲು ಹಗಲು ಸಮಯವ ಹೆಚ್ಚಿಸು ಎಂದು| ನೀನಿರದ ಇರುಳ ಸಮಯವ ತಗ್ಗಿಸು ಎಂದು ನೀ ಜೊತೆ ಇರುವ ಒಂದು ದಿನವ ಒಂದು […]

#ವಿಜ್ಞಾನ

ವಿಟ್ಯಾಮಿನ್ ಭರಿತ ಚಹಾ!

0

ದಿನನಿತ್ಯ ಸೇವಿಸುವ ಪಾನಿಯಗಳಲ್ಲಿ ವಿಟ್ಯಾಮಿನ್‌ಗಳು ಸಮೃದ್ಧವಾಗಿ ಸಿಗುತ್ತವೆ ಎಂದರೆ ಬೇಡವೆನ್ನುವರಾರು? ಕೋಟ್ಯಾಂತರ ಜನರಿಗೆ ಅಗತ್ಯವಿರುವ ಪೌಷ್ಟಿಕತೆಯನ್ನು ಒದಗಿಸುವ ಅತ್ಯಾಧುನಿಕ ತಾಂತ್ರಿಕ ಶೋಧನೆಯೊಂದು ಈ ರೀತಿ ‘ಚಹಾಪೇಯ’ವನ್ನು ತಯಾರಿಸುತ್ತಲಿದೆ. ದೇಶದ ಅತಿದೊಡ್ಡ ಪ್ಯಾಕೆಟ್ ಟೀ ಕಂಪನಿ ಹಿಂದುಸ್ಥಾನ್ ಲಿವರ್ ಲಿಮಿಟೆಡ್ (H.L.L.) ಇದೀಗ ವಿಟಮಿನ್ ಎ, ಬಿ2 ಮತ್ತು ನಿಯಾಸಿನ್‌ಗಳನ್ನು ಸೇರಿಸಿ ಸಮೃಧಿಗೊಳಿಸಿದ (ಫೋರ್ಟಿಫೈಡ್) ಬ್ರೂಕ್‌ಬಾಂಡ್, ಎ1, […]

#ವಚನ

ಪರಿಪರಿಯೊಳನ್ನ ಜಾರುವನ್ನಾತಂಕ ತರವಲ್ಲವೆನ್ನುವಿರಾ ?

0

ಆರನೋ ನೋಯಿಸಲೆಂದಾನು ಬರೆದಿಲ್ಲ ಪ್ರಕೃತಿಯೊಳನ್ನ ಬೆಳೆಯುವ ಕೃಷಿಯೊಂದೆ ಪಿರಿದೆನ್ನುವೂಡಮಿತ ಕಾರಣಗಳಿರುತಿರಲದ ನೊರೆಯೆ ಬರೆದಿಹೆನು, ವಿಪರೀತದೇರು ಪೇರಿನೊಳನ್ನ ಕೈ ಜಾರುವಾತಂಕವೆನಗೆ – ವಿಜ್ಞಾನೇಶ್ವರಾ *****

#ಕವಿತೆ

ಮಲ್ಲಿಗೆ

0
ವೆಂಕಟಪ್ಪ ಜಿ
Latest posts by ವೆಂಕಟಪ್ಪ ಜಿ (see all)

ಮಲ್ಲಿಗೆ! ಮಲ್ಲಿಗೆ! ನಿನಗೆ ನಮಗೆ ಎಲ್ಲಿಗೆಲ್ಲಿಗೆ ? ಸಸ್ಯದೆದೆಯ ಸುಧಾರಸವೆ ಹೂವಾಗಿ ಹಾಲು ಬಣ್ಣ ರೂಪದಲ್ಲಿ ಪ್ರಕಟವಾಗುವಂತೆ ಅರಳಿ ನಿಲ್ಲುವೆ. ಸಸ್ಯಮಾತೆ, ಪ್ರೇಮ ಭಾವವೇ ಪುಟ್ಟ ಪುಟ್ಟ ಸರಳ ಸುಂದರ ನವಿರು ನವಿರು ದಳಗಳಾಗಿ ಮೈದಾಳಿ ನಿಲ್ಲುವೆ. ಸರಸ ಮನದ ಮಧುಕರ ಸುತ್ತ ಮುತ್ತ ಹಾರುತ್ತ, ಹಾಡುತ್ತ ಪ್ರೇಮಮುದ್ರೆಯೊತ್ತುವ ಜೀವ ಕ್ರಿಯೆ ಸಾಗಿಸುವ ದೃಶ್ಯ ಬಹು […]

#ಸಣ್ಣ ಕಥೆ

ಕುಂಬಳೆ

0
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್‌ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್‌ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)

ಪಕ್ಕದ ಪೇಟೆ ಕುಂಬಳೆ – ಅದು ಪೇಟೆಯ ಹೆಸರೂ ಹೌದು, ಕೆಲವು ಶತಮಾನಗಳ ಹಿಂದಿದ್ದು ಈಗಿಲ್ಲದ ಒಂದು ಸಣ್ಣ ಅರಸುಮನೆತನದ ಹೆಸರೂ ಹೌದು, ಈಚೆಗೆ ಮಂಗಳೂರಿಗೂ ಆಚೆಗೆ ಕೊಚ್ಚಿ ತಿರುವನಂತಪುರ ಮದರಾಸುಗಳಿಗೂ ಹೋಗುವ ಅತ್ಯಂತ ಹಳೆಯ ದಕ್ಷಿಣ ರೈಲ್ವೆ ಲೈನಿನ ರೈಲು ನಿಲ್ದಾಣದ ಹೆಸರೂ ಹೌದು. ಪಕ್ಕದಲ್ಲೇ ಹರಿಯುವ ಹೊಳೆಯ ಹೆಸರೂ ಹೌದು. ಕುಂಬಳೆ ಯಾರಿಗಾದರೂ […]

#ಹನಿಗವನ

ಗಂಡ

0
ಶ್ರೀವಿಜಯ ಹಾಸನ
Latest posts by ಶ್ರೀವಿಜಯ ಹಾಸನ (see all)

ನೀನೆನ್ನ ಭಾವನ ನೀನೆನ್ನ ಕಲ್ಪನಾ ನೀನೆನ್ನ ಜೀವನ ನಿನ್ನೊಂದಿಗೆ ಸಹಗಮನ ಎಂದಿದ್ದ ಗೆಳತಿಯ ಗಂಡ ಗೆಳತಿ ಸತ್ತವಾರದೊಳಗೆ ಮತ್ತೊಬ್ಬಳ ಗಂಡ *****

#ಕವಿತೆ

ಬುದ್ಧ ಮತ್ತು ಹೂವು

0
ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)

ಗರ್‍ವವೆಂಬುದು ಹೂವಿನ ಬಳಿ ಸುಳಿಯದು ಎಷ್ಟೊಂದು ಚೆಲುವು ಘನವಾದ ಒಲವು ನಿರಂತರ ಧ್ಯಾನದ ಫಲವು ಮೈತ್ರಿ-ಕರುಣೆ ಎಂದು ಬುದ್ಧ ಬೋಧಿಸಿದ್ದ ಪೂರ್‍ವಜನ್ಮದ ಸ್ಮರಣೆ ಅವನು ಹೂವಾಗಿದ್ದ. *****

#ಕಾದಂಬರಿ

ಮುಸ್ಸಂಜೆಯ ಮಿಂಚು – ೧೬

0

ಅಧ್ಯಾಯ ೧೬ ವೃದ್ದಾಪ್ಯ ಶಾಪವೇ? ಭಾನುವಾರ ರಜಾ ಆದ್ದರಿಂದ ನಿಧಾನವಾಗಿ ಎದ್ದು ಪತ್ರಿಕೆಯತ್ತ ಕಣ್ಣಾಡಿಸುತ್ತ ಇದ್ದವಳಿಗೆ ‘ಅಸಹಾಯಕರಿಗೊಂದು ಆಸರೆ ವೃದ್ಧಾಶ್ರಮಗಳು’ ಎಂಬ ಲೇಖನ ಗಮನ ಸೆಳೆಯಿತು. ವೃದ್ದಾಪ್ಯ ಶಾಪವೇ ಎಂಬ ಅನುಮಾನ ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಕಾಡತೊಡಗಿದೆ. ವೃದ್ದರಿಗೆ ಅಸಹಾಯಕತೆಯೇ ಶಾಪವಾದರೆ ಅವರನ್ನು ನೋಡಿಕೊಳ್ಳುವ ಸಮಸ್ಯೆಯಿಂದಾಗಿ ಮಕ್ಕಳಿಗೆ ವೃದ್ದರೇ ಶಾಪವಾಗುತ್ತಿದ್ದಾರೆ. ಹಿಂದೆಲ್ಲ ಒಟ್ಟು ಕುಟುಂಬಗಳಿದ್ದವು. ಅಜ್ಜ-ಅಜ್ಜಂದಿರು […]

#ಕವಿತೆ

ಯುಗಾದಿ ಹರವು

0
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು:ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.
ನಾಗರೇಖಾ ಗಾಂವಕರ
Latest posts by ನಾಗರೇಖಾ ಗಾಂವಕರ (see all)

ಹರವು ಹೆಚ್ಚಲು ಮುಗಿಲ ನೆಲದಲಿ ಬೆಳಕು ಚಿಮ್ಮಿತು ಕೊಸರು ಕರಗಲು ಹಸೆಯು ಹರಡಲು ಎದೆಯ ಬನದಲಿ ತನ್ನಿಂತಾನೇ ಚೆಲುವು ಮೂಡಿತು. ಯುಗವು ಕಳೆಯಲು ಯುಗವು ಮರಳಲು ಜಗದ ನಿಯಮ ಸಹಜವಾಗಲು ವಿಳಂಬಿ ವಿಳಂಬವೆನ್ನದೇ ದಾಪುಗಾಲು ಹಾಕಿ ಬರುತಿರೆ ಹೇಮಲಂಬಿ ಹಳೆಯ ಬಿಂಬಿ ದೂರ ಸರಿಯಿತು. ಕೆಂದಳಿರಿಗೂ ಮೀಗಿ ಕೆಂದೂಳು ಹುಡಿಯೆದ್ದು ಜಗವು ಸುಗ್ಗಿಯ ಸೊಬಗ ಹೊದೆದು […]