ಅಲ್ಲಿ, ಮುರುಕು ಗೋಡೆಯ ಪಕ್ಕದಲ್ಲಿ ನಿಂತ ಕುರುಡ,
ಹೆಸರಿಲ್ಲದ ಸಾಮ್ರಾಜ್ಯದ ಗಡಿಕಲ್ಲಿನಂಥ ಮುದುಕ,
ಗ್ರಹಗಳ ಗಡಿಯಾರದ ಮುಳ್ಳು ತೋರಿಸುವ ಗೊತಿಲ್ಲದ ಅಂಕಿ,
ಅವನನ್ನು ಸುತ್ತಿ, ಬಳಸಿ, ಅಡ್ಡಹಾಯ್ದು ಹೋಗುವ
ನಕ್ಷತ್ರ ಪಥಗಳ ನಿಶ್ಯಬ್ದ ಕೇಂದ್ರ.
ಗೊಂದಲದ ಅಸಂಖ್ಯ ಬೀದಿಗಳು
ಬಂದು ಸೇರಿ ಬೇರೆಯಾಗುವ ಬಿಂದುವಿನಲ್ಲಿ ತಪ್ಪದೆ ನಿಶ್ಚಲ ನಿಂತವನು;
ಆಳವರಿಯದೆ ಬದುಕುವ ತಲೆಮಾರು
ಕತ್ತಲ ಲೋಕದಾಳಕ್ಕಿಳಿಯಲು ಇರುವ ಮಹಾದ್ವಾರ.
*****
ಮೂಲ: ರೇನರ್ ಮಾರಿಯಾ ರಿಲ್ಕ್ / Rainer Maria Rilke