ಕೋಳಿ ಅತ್ಯುತ್ತಮ ನಿದರ್ಶನ -ಸತತವಾಗಿ ಮನುಷ್ಯರೊಡನೆ ಬದುಕಿದರೆ ಏನಾಗುತ್ತೆದೆನ್ನುವುದಕ್ಕೆ. ಹಕ್ಕಿಯ ಲಾಘವ, ಗಾಂಭೀರ್ಯ ಕಳೆದುಕೊಂಡಿದೆ ಕೋಳಿ. ಅಭಿರುಚಿ ಹೀನ ದೊಡ್ಡ ಹ್ಯಾಟಿನಂತೆ ಅದರ ಅಂಡಿನ ಮೇಲೆ ಉದ್ದೋ ಉದ್ದ ಪುಕ್ಕ. ಅಪರೂಪಕ್ಕೊಮ್ಮೆ ಭಾವೊನ್...

ಒಂದು ಹಣತೆ ಸಾಕು ಮನೆಯ ಬೆಳಗಲು ಕೋಟಿ ಕಿರಣಗಳೆ ಬೇಕು ತಾಯಿನಾಡ ಬೆಳಗಲು || ಕೋಟಿ ಕಿರಣಗಳಲಿ ಬೇಕು ಸ್ವಚ್ಛಂದ ಮನಸ್ಸು ಮನಸ್ಸುಗಳಿಗೆ ಬೇಕು ತಾಯಿ ನುಡಿ ಆರಾಧಿಸುವ ಮನಸು || ನಮ್ಮ ಮನೆ ಅಲ್ಲ ಇದು ನಿಮ್ಮ ಮನೆ ಅಲ್ಲ ಒಂದಾಗಿ ಬಾಳುವ ನಮ್ಮೆಲ್ಲರ ಮನ...

ಮಾತಲ್ಲ ಮಂತ್ರ, ಅರ್ಥದಾಚೆಗೆ ಮಾತ ಹಾರಿಸಿಬಿಡುವ ತಂತ್ರ; ಕತ್ತಿಗೆ ಗಂಟು ಬಿದ್ದ ಅರ್ಥದ ಕಣ್ಣಿ ಕಳಚಿ ಅಂತರಿಕ್ಷಕ್ಕೆ ಜಿಗಿದು ನಕ್ಷತ್ರವಾಯಿತು ಶಬ್ಧ. ನಾದಲಯಗಳ ಜೋಡು ಸಾರೋಟು ಹತ್ತಿ ರೂಪಕದ ಮೆರವಣಿಗೆ ಬರವಣಿಗೆ; ಬಡ ಪದವ ಕವಿತೆ ಮಾಡುವ ಅತಾರ್ಕಿ...

ನಿನ್ನ ಚುಂಬನದಲ್ಲಿ ಕಣ್ಣೀರ ಹನಿ ಬೆರೆತು ನನ್ನ ತುಟಿಗಳ ಮೇಲೆ ಮಾತು ಮರೆತು ಮುಗಿಯಿತಂದಿನ ಸಂಜೆ ಕತ್ತಲೆಯ ಹೊದ್ದು ಯುಗ ಯುಗದ ಗಾಢ ಮೌನದಲಿ ಬಿದ್ದು ಮತ್ತೆ ಬೆಳಕೊಡೆದು ಹುಡುಕಿದೆನು ಕಾಣಿಸದೆ ನಿನ್ನುಸಿರ ಪರಿಮಳವ ನೀನಳಿಸಿ ಹೋದೆ ಅಳಿಸುವೆನು ನಾನ...

ಹೆಂಡತಿಯನ್ನು ಅರ್ಧಾಂಗಿಯೆಂದು ಕರೆಯುತ್ತಾರೆ. ಹೆಂಡತಿಯ ಸಹೋದರ ಭಾವಮೈದುನನಾದರೋ ಪೂರ್ಣಾಂಗನೇ ಆಗಿದ್ದಾನೆ. ಹೆಂಡತಿಯನ್ನು ನಾವು ಪ್ರೀತಿಸಬಹುದು ಇಲ್ಲವೆ ಬಿಡಬಹುದು. ಆದರೆ ಭಾವಮೈದುನನನ್ನು ಪ್ರೀತಿಸದಿದ್ದರೆ ನಮಗೆ ಉಳಿಗಾಲವಿಲ್ಲ. ಆದಕ್ಕೆಂತಲೇ ಹ...

ಭಿಕ್ಷಿಕನೊಬ್ಬ ಮನೆಯೊಡತಿಗೆ ಹೇಳುತ್ತಿದ್ದ. “ನೀವು ನನಗೆ ಊಟ ಕೊಡದಿದ್ದರೆ ಹೋದೂರಿನಲ್ಲಿ ಮಾಡಿದಂತೆ ಮಾಡುವೆ?” ಮನೆಯೊಡತಿ ಗಾಬರಿಯಿಂದ ಕೇಳಿದಳು. “ಹೋದೂರಿನಲ್ಲಿ ನೀನು ಏನು ಮಾಡಿದೆ?” ಭಿಕ್ಷುಕ ಹೇಳಿದ “ಉಪವಾ...

ನಿನ್ನ ಮಿಲನ ಅದೇ ಕವನ ಶಾಂತಿ ವನದ ಕೂಜನಂ ನವಿಲು ನಾನೆ ಉಯಿಲು ನೀನೆ ರಜತರಂಗ ದಿಂಚರಂ ||೧|| ದೂರ ದೂರ ದೂರ ದಾರಿ ನೂರು ತೀರ ತೀರಿತು ಮತ್ತೆ ಮತ್ತೆ ಹತ್ತು ನೂರು ದಾರಿ ತೋರದಾಯಿತು ||೨|| ಕಾಡು ಕಂಟಿ ಕಡಲು ಇತ್ತ ಹುತ್ತ ಕುತ್ತ ನಾಗರಂ ಬೆಂಕಿ ಭು...

ತಂಟೆ ಮಾಡಿದ ಐದು ವರ್ಷದ ಮಗುವಿಗೆ ತಾಯಿ ಬೈದಳು. ಮಗು ಕೋಪದಿಂದ ಬಯಲು ಮಾಳಿಗೆಗೆ ಹೋಗಿ ಗವಾಕ್ಷಿಯಿಂದ ಕೂಗಿತು. “ಅಮ್ಮಾ! ಅಮ್ಮಾ! ಎಂದು.” “ಎಲ್ಲಿದ್ದೀ ಪುಟ್ಟಾ?” ಅಂದಳು ಅಮ್ಮ. ನಾನು ಆಕಾಶದಿಂದ ಹೇಳುತ್ತಾ ಇದ್ದೀನಿ...

1...45678...10

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...