ಒಂದು ಹಣತೆ ಸಾಕು
ಮನೆಯ ಬೆಳಗಲು
ಕೋಟಿ ಕಿರಣಗಳೆ ಬೇಕು
ತಾಯಿನಾಡ ಬೆಳಗಲು ||

ಕೋಟಿ ಕಿರಣಗಳಲಿ ಬೇಕು
ಸ್ವಚ್ಛಂದ ಮನಸ್ಸು
ಮನಸ್ಸುಗಳಿಗೆ ಬೇಕು ತಾಯಿ
ನುಡಿ ಆರಾಧಿಸುವ ಮನಸು ||

ನಮ್ಮ ಮನೆ ಅಲ್ಲ ಇದು ನಿಮ್ಮ
ಮನೆ ಅಲ್ಲ ಒಂದಾಗಿ ಬಾಳುವ
ನಮ್ಮೆಲ್ಲರ ಮನೆ ನಮ್ಮ ತಾಯಿ ಇವಳು
ನಿಮ್ಮ ತಾಯಿ ಎಂದಲ್ಲ ತಾಯಿ ನಾಡತಾಯಿ ||

ತಾಯಿ ಕುಲದ ತಾಯಿ ನಮ್ಮ ಉಸಿರು
ಹೆತ್ತವಳು ಅವಳು ನಮ್ಮ ತಾಯಿ
ಅನ್ನ ನೀಡುವಳು ಭೂಮಿತಾಯಿ
ನಾಡನುಡಿ ತಾಯಿ ಕರುನಾಡ ತಾಯಿ ||

ಜಗದಗಲ ಭೂಮಿಯಗಲ
ಬೆಳಕು ಅನುರಣೀಯ ಅನುಸಂಧಾನ
ಹೂಗಳು ಅರಳಿದವು ನೋಡಲ್ಲಿ ಆಗಸದಲ್ಲಿ
ಚುಕ್ಕಿ ಚಂದ್ರಮರ ನಡುವೆ
ಹೂದಾನಿಗಳ ಹಾಡು
ಸಂಭ್ರಮದ ನೆಲೆಬೀಡು
ನೋಡಿಲ್ಲಿ ತುಂಟ ಮಕ್ಕಳು
ಚಟಾಕಿ ಪಟಾಕಿ ಪಾಡು ||

ಕೋಟಿ ಕೋಟಿ ಕಿರಣಗಳ
ಒಂದೊಂದು ಹಣತೆ ಹಚ್ಚಲು
ಸೃಷ್ಟಿ ಚೈತನ್ಯ ಭಾವ
ಹೊನಲು ನೋಡಲ್ಲಿ ಅದರಲ್ಲಿ
ತಾಯಿ ಸಂತಸದ ಹೊನಲು ||
*****

Latest posts by ಹಂಸಾ ಆರ್‍ (see all)