ಮುಖವ ಕನ್ನಡಿಯಲ್ಲಿ

ಮುಖವ ಕನ್ನಡಿಯಲ್ಲಿ ನೋಡುವಿರಿ
ನೋಡಿ ಬಗೆಬಗೆಯಲ್ಲಿ ತೀಡುವಿರಿ
ಮನವ ಯಾವುದರಲ್ಲಿ ನೋಡುವಿರಿ
ಮನದ ಡೊಂಕನು ಎಂತು ತಿದ್ದುವಿರಿ
ಅಂತರಾತ್ಮದ ಬೆಳಕಿಲ್ಲದೆ

ನದಿಯಲಿಳಿದು ಮೈಯ ತೊಳೆಯುವಿರಿ
ಕೆಸರು ಕೊಳೆಯನ್ನು ಅಲ್ಲಿ ಕಳೆಯುವಿರಿ
ಮನವ ಯಾವುದರಲ್ಲಿ ತೊಳೆಯುವಿರಿ
ಮನದ ಕೊಳೆಯನು ಎಂತು ಬಿಡುವಿರಿ
ಅಂತರಂಗದ ಗಂಗೆಯಿಲ್ಲದೆ

ಅವರ ಮಾತಿಗೆ ಅಲ್ಲಿ ಮರುಗುವಿರಿ
ಇವರ ಮಾತಿಗೆ ಇಲ್ಲಿ ಕೊರಗುವಿರಿ
ಮನದ ಮಾತಿಗೆ ಎಲ್ಲಿ ಮರುಗುವಿರಿ
ಮನದ ಮಾತಿಗೆ ಹೇಗೆ ಕರಗುವಿರಿ
ಅಂತಃಸಾಕ್ಷಿಯಿಲ್ಲದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಜೆಗತ್ತಲು
Next post ಬಸವಿ ಮಗಳು

ಸಣ್ಣ ಕತೆ

 • ಬೋರ್ಡು ಒರಸುವ ಬಟ್ಟೆ

  ಪ್ರಕರಣ ೬ ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ… Read more…

 • ಬೂಬೂನ ಬಾಳು

  ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

 • ತನ್ನೊಳಗಣ ಕಿಚ್ಚು

  ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

 • ಯಿದು ನಿಜದಿ ಕತೀ…

  ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

 • ತಿಥಿ

  "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…