ಊದ್ಸೊರು ಬಂದಾರ ಬಾರ್‍ಸೋರು ಬಂದಾರ ಬೆಂಗ್ಳೂರ ಹುಡಿಗಿ ಬರಲಿಲ್ಲೋ ಹುಬ್ಬಳ್ಳಿ ಹುಡುಗಾ ಕಂಚೀನ ಕಡಗಾ ತಲವಾರ ಬೆಡಗಾ ಸಜ್ಜಾದೋ ||೧|| ಸೋಗ್ಲಾಡಿ ಮೂಲಂಗಿ ಹುಳಕ್ಲಾಡಿ ಹುಚಗಿಂಡಿ ಹಿಂಗ್ಯಾಕ ಮಾಡ್ತಾಳ ಸುಸ್ತಸುಸ್ತಾ ದೀಡ್ ಪೈಯಿ ಧೀಮಾಕಿ ಥೈಯ್‍ಥೈಯಿ ...

ಕಣ್ಣೀರ ಹನಿ ಹನಿಹನಿಸಿ ಬರೆಯುತ್ತಿತ್ತು ಗಲ್ಲದ ಪುಟದ ತುಂಬ ಕರುಳು ಕಲುಕುವ ಕಾವ್ಯ, ಕತೆ, ಕಾದಂಬರಿ. “ಇದನ್ನು ಓದಿಕೋ ಜಗತ್ತೇ?” ಎಂದು ಬೇಡಿಕೊಳ್ಳುತ್ತಿತ್ತು. ಜಗತ್ತು ಮೌನದಲ್ಲಿ ಹೆಪ್ಪುಗಟ್ಟಿತ್ತು. ಕಣ್ಣೀರ ಹನಿ ದ್ರವಿಸಿ ಹರಿದ...

ಹಳ್ಳಿ ಹಾದಿಯ ತುಂಬ ನೆತ್ತರಿನ ಹೂವು ತುಳಿದೀಯ ಗೆಳೆಯ ಅದು ನಮ್ಮ ನೋವು ಭೂತ ಬಿತ್ತಿದ ಬೀಜ ನರಳಿತ್ತು ಜೀವ ನೆತ್ತರಿನ ಚಿತ್ತಾರ ಬೆಳಗಿನ ಜಾವ ಊರೊಳಗೆ ಹರಿಯುತ್ತಿವೆ ಹತ್ತಾರು ಕತೆಗಳು ನೀರೊಳಗೆ ತೇಲುತಿವೆ ನೂರಾರು ವ್ಯಥೆಗಳು ಮುರುಕು ಮನೆಯೊಳಗೆ ಹ...

ಗೆಳೆತಿ ನನ್ನ ಪ್ರೀತಿಯ ನಿನ್ನ ಗೆಳೆತಿಗೆ ಪರಿಚಯಿಸುವೆಯಾ?| ನನ್ನ ಹೃದಯದ ಮಾತುಗಳ ಅವಳ ಹೃದಯಕೆ ನೀ ಮುಟ್ಟಿಸುವೆಯಾ|| ಸದಾ ನನ್ನ ಜೊತೆಗಿರುವೆ ನನ್ನೆಲ್ಲಾ ಆಸೆಗಳ ಅರಿತಿರುವೆ| ಅವಳ ನಾನೆಷ್ಟು ಪ್ರೀತಿಸುವೆ ಎಂದು ನೀ ತಿಳಿದಿರುವೆ| ಆದರೂ ಅದೇಕಿಷ್...

ಹಸಿರು ಸೂರ್ಯಕಾಂತಿ ಹೂಗಳು ಸಂತೃಪ್ತವಾಗಿ ಮತ್ತಷ್ಟು ಪೋಶಕಾಂಶಗಳಿಂದ ಕಂಗೊಳಿಸಲು ಹಸುವಿನ ಹಾಲು, ರಂಗುರಂಗಿನ ಹೂವಿನ ಪಕಳೆಗಳು ನಿಮಗೆ ದೊರೆಯಲು ಇನ್ನೂ ೫೦ ವರ್ಷಗಳಷ್ಟೇ ಸಾಕು. ಆಹಾರ ಸತ್ವ ಸಮೃದ್ಧ ಟೊಮ್ಯಾಟೊ ಹೊಸ ತಳಿ ಈಗಾಗಲೇ ಅಮೇರಿಕಾದ ಮಾರುಕಟ...

ಕೃಷಿಯೆಂದರೊಂದೇ ಹೆಸರಿತ್ತಂದು ರಾಶಿ ಹೇಳುವರಿಂದು ಹೆಸರ ನೂರೊಂದು ಹುಸಿ ಹೆಸರುಗಳಲ್ಲಲ್ಲೇ ಹಿಂದು ಮುಂದು ಕಾಸಿನವಸರವೆಂದು, ಅಧಿಕ ಇಳುವರಿಗೆಂದು ಹೊಸ ಘಾಸಿ ತಂತ್ರದೊಳೆಲ್ಲ ಜಗ ಬರಿದಿಂದು – ವಿಜ್ಞಾನೇಶ್ವರಾ *****...

ಮರ ಸರ್ವೋಪಯೋಗಿ ನಿಸರ್ಗದ ವರ ಹಾದಿ ಬದಿಯಲಿ ನಿಂತು ಕೊರಗುತಿದೆ. ನಾನು ಜೀವ ವಿರೋಧಿಯಲ್ಲ ಅಲ್ಲಗಳೆಯರು ಯಾರೂ ಇದನು! ಆದರೂ… ಕೆಲವರು ನನ್ನ ಮರೆಗೆ ಬರುವರು ಮಾಡ ಬಾರದುದ ಮಾಡುವರು ಸ್ವಯಂ ಸೊಂಪಾಗಿ ಬೆಳೆದುದ ತಪ್ಪುಮಾಡಿ ಕೊಂಬೆ ರೆಂಬೆಗಳ ಎಳ...

ಪಡು ಬೈಲಲ್ಲಿ ಒಮ್ಮಿಂದೊಮ್ಮೆ ದೊಡ್ಡ ಬೊಬ್ಬೆ ಎದ್ದಿತು. ‘ಪಿಜಿನ ಪೂಜಾರಿ ಬಿದ್ದ! ಮರದಿಂದ ಬಿದ್ದ!’ ಎಂದು. ಉಳುತ್ತಿದ್ದ ಬೊಗ್ಗು ಕೋಣಗಳನ್ನು ನಿಲ್ಲಿಸದೆ ಓಡಿದ; ನೀರು ಮೊಗೆಯುತ್ತಿದ ಜಾರು ಮುಳುಗಿಸಿದ ಮರಿಗೆಯನ್ನು ಅಲ್ಲೇ ಬಿಟ್ಟೋಡಿದ; ಗದ್ದೆಯ ...

ಶ್ರೀಕೃಷ್ಣನಿಗೆ ಮುತ್ತುರತ್ನಹೊನ್ನಿನ ಕವಚ ಪ್ರಾಣದೇವರಿಗೆ ವಜ್ರವೈಡೂರ್‍ಯದ ಕವಚ ಭಕ್ತ ಕನಕನಿಗಿಲ್ಲ ಬೆಳ್ಳಿ ತಾಮ್ರದ ಕವಚ ದೀನದುರ್‍ಬಲರಿಗಿಲ್ಲ ಕರುಣೆಯ ಕವಚ *****...

1...45678...111

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...