ಗೆಳೆತಿ ನನ್ನ ಪ್ರೀತಿಯ…

ಗೆಳೆತಿ ನನ್ನ ಪ್ರೀತಿಯ
ನಿನ್ನ ಗೆಳೆತಿಗೆ ಪರಿಚಯಿಸುವೆಯಾ?|
ನನ್ನ ಹೃದಯದ ಮಾತುಗಳ ಅವಳ
ಹೃದಯಕೆ ನೀ ಮುಟ್ಟಿಸುವೆಯಾ||

ಸದಾ ನನ್ನ ಜೊತೆಗಿರುವೆ
ನನ್ನೆಲ್ಲಾ ಆಸೆಗಳ ಅರಿತಿರುವೆ|
ಅವಳ ನಾನೆಷ್ಟು ಪ್ರೀತಿಸುವೆ
ಎಂದು ನೀ ತಿಳಿದಿರುವೆ|
ಆದರೂ ಅದೇಕಿಷ್ಟು ಹೆದರುತ್ತಿರುವೆ
ನೀ ಹೇಳದಿದ್ದರೆ ನಾ ವಂಚಿತನಾಗುವೆ||

ಓ ಮನಸೆಂಬ ಗೆಳತಿಯೆ
ಸಮಯನೋಡಿ ಸಮೀಕರಿಸು |
ನಮ್ಮಿಬ್ಬರ ಒಂದುಗೂಡಿಸೆ
ನೀ ಮನಸುಮಾಡು|
ಕಾಲ ಹರಣವ ಮಾಡದಿರು
ಸಮಯ ಯಾರಿಗೂ ಕಾಯುವುದಿಲ್ಲ|
ಮಿಂಚಿಹೋದ ಮೇಲೆ ಪ್ರಯತ್ನಿಸಿ ಫಲವಿಲ್ಲ
ಭಗ್ನ ಪ್ರೇಮಿಯಾಗೆನ್ನ ಜೊತೆ
ನೀ ಬದುಕುವುದು ಸರಿ‌ಎನಿಸುವುದಿಲ್ಲ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊಸ ತಳಿಯ ಜಾಮ್! ಜೆಲ್ಲಿ!!
Next post ನಿರೀಕ್ಷೆ

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…