ಆರು ವರ್ಷದ ಹುಡುಗ, ಕಲ್ಲು ಮುಳ್ಳಿನ ಏರುತಗ್ಗಿನ ಊರ ದಾರಿ ನಡೆದು ಸೋತಿದ್ದಾನೆ. ಆತನ ತಲೆಯ ಮೇಲೊಂದು ಬಾಳೆಯ ಕಂದು ಹೊರಲಾರದ ಹೊರೆಯದು ಅವನಿಗೆ. ಹೊತ್ತು ಕುತ್ತಿಗೆ ಸೋತಾಗ ಅದನ್ನು ಬಲ ಹೆಗಲ ಮಲೇರಿಸುವನು. ಅನಂತರ ಎಡ ಹೆಗಲ ಮೇಲೆ. ಅಲ್ಲಿಯೂ ನೋವಾ...

ಗಂಗ ತುಂಗ ಯಮುನಾ ಗೋದಾವರಿ ನದಿಗಳೆಲ್ಲವನ್ನು ನಾನು ಪ್ರೀತಿಸುತ್ತೇನೆ ಬಿಯಾಸ್ ನದಿಯೆ ನಿನ್ನನ್ನು ಹೆಚ್ಚು ಪ್ರೀತಿಸುತ್ತೇನೆ ನಾನು ಹಡೆದ ಧರ್‍ಮಗಳನ್ನೂ ಸಾಕಿ ಸಲಹಿದ ದೇವರುಗಳನ್ನೂ ಗೌರವಿಸಿದ್ದೇನೆ. ಸಿಖ್ ಧರ್‍ಮವೇ ಗುರುಗ್ರಂಥ ಸಾಹೇಬನೇ ನಿನಗೂ ...

ಅಂದು ಚಂದ್ರನೊಂದಿಗೆ ಮದುವೆ. ಗೆಣಕಾತಿ ಗೌರಿಗೆ ಮತ್ತು ಹುಚ್ಚೀರನಿಗೆ ಎಲ್ಲೆಯಿಲ್ಲದ ಆನಂದ. ಶಬರಿಯ ಅಂತರಂಗವನ್ನು ಬಲ್ಲ ಗೌರಿ ಒಂದು ಕಡೆ, ಮೂಕನಾಗಿದ್ದೂ ಮೌನದಲ್ಲೇ ಮಾತು ಮೀಟುವ ಹುಚ್ಚೀರ ಇನ್ನೂಂದು ಕಡೆ. ಹಟ್ಟಿಯಲ್ಲಿ ಹುಚ್ಚೀರನದೊಂದು ಮುರುಕಲು...

ಸುತ್ತದಿರಿ ಸಂಕೋಲೆ ಅಂಗಾಂಗಗಳ ಮೇಲೆ ಹಾರಲಿ ಅವಳು ನಿಮ್ಮಂತೆ ಮುಗುದೆ. ಸ್ವಚ್ಛಂದತೆಯ ಆನಂದ ಪಡೆಯಲಿ ಬಿಡಿ ಇರಲಿ ಅವಳಿಗೂ ಕೊಂಚ ಎಡೆ ನತ್ತಿನಲಿ ಮೂಗುತಿ ಕಾಲಲ್ಲಿ ಉಂಗುರ ಖಡುಗ ಕೈಯಲ್ಲಿ ಬಳೆ ತಲೆಗೆ ಮಲ್ಲಿಗೆಯ ದಂಡೆ ತಾಲೀಮು ತಂಗಿಗೆ ಹುಟ್ಟುತ್ತಲ...

ಗುರಿ ಮಸ್ಸೂರಿ ಮಹತ್ವಾಕಾಂಕ್ಷೆ ಗರಿ ಕೆದರಿ ಎತ್ತರಕೆ ನಿಂತಿತ್ತು ನೋಡಿದರೆ ಕತ್ತು ನೋಯುತ್ತಿತ್ತು ಕೆಳಗೆ ಸುಣ್ಣದಕಲ್ಲು ಮೇಲೆ ಹುಲ್ಲಿನ ಮಖಮಲ್ಲು ಎರಡು ಜಗತ್ತುಗಳ ನಡುವೆ ಇಷ್ಟು ವ್ಯತ್ಯಾಸವೆ! ರಸ್ತೆಯೋ ಬಹಳ ಕಡಿದು ಜೀವ ಕೈಯಲ್ಲಿ ಹಿಡಿದು ಕುಳಿ...

ಯಾಕೆ ಓದಬೇಕು? ಶಿಕ್ಷಣವೇ ಶಕ್ತಿ ಎಂಬ ಜನಪ್ರಿಯ ಘೋಷಣೆಯನ್ನು ಶಿಕ್ಷಣವೇ ವಿಶ್ಶಕ್ತಿ ಎಂದು ಬದಲಾಯಿಸಬೇಕು. ಸುಮ್ಮನೆ ನೆನಪು ಮಾಡಿಕೊಳ್ಳಿ. ಕನ್ನಡದ ಯಾವುದಾದರೂ ಗಾದೆ ಓದುವಿಕೆಯನ್ನು ಮೆಚ್ಚಿ ಶಿಫಾರಸು ಮಾಡುವಂಥದಿದೆಯೇ? ಓದಿ ಓದಿ ಮರುಳಾದ…...

ಮರೆತು ಹೋಗಬೇಕು ಅಂದುಕೊಳ್ಳುತ್ತೇನೆ-ಆಗಲ್ಲ. ಹೊರಟು ಹೋಗಬೇಕು ಅಂದುಕೊಳ್ಳುತ್ತೇನೆ-ದಾರಿ ಸಿಗಲ್ಲ. ನನ್ನ ಕಾಲಿಗೆ ರೆಕ್ಕೆ ಇಲ್ಲ- ಆದರೆ ತಲೆಯ ತುಂಬ ಬಿಳಿಯ ಕೂದಲಿದೆ. ಸುಮ್ಮನೆ ಕುಳಿತು ಎಲೆ ಉದುರುತ್ತಿರುವುದು ನೋಡುತ್ತೇನೆ, ಇಲ್ಲವೆ ಗೋಪುರ ಹತ್...

ಏನ ಹಾಡಲಿ ಏನ ಹೇಳಲಿ ಬನವು ಬಿಸಿಲಿಗೆ ಬೆಂದಿದೆ. ಹೊತ್ತಿ ಬತ್ತಿದ ಕೆರೆಯ ಮಣ್ಣಲಿ ಹಕ್ಕಿ ಹವ್ವನೆ ಅತ್ತಿದೆ ಮುಗಿಲ ನೀಲಿಮೆ ಕೆಂಡ ಕುಲಿಮೆಯೆ ಕಾಸಿ ಕಬ್ಬಿಣ ಬಡಿದಿದೆ ಗುಡ್ಡ ಬಡಿದಿದೆ ಬೆಟ್ಟ ಬಡಿದಿದೆ ಮನುಜ ಲೋಕವ ಜಡಿದಿದೆ ದೇವ ದೇವಾ ಶಾಂತಿ ರೂಹ...

ನಿಂತ ನೆಲವೆ ದ್ವೀಪವಾಗಿ ಕೂಪದಾಳದಲ್ಲಿ ತೂಗಿ ಕಂದಕವನು ಕಾವಲಾಗಿ ತೋಡಿದಂತೆ ನನ್ನ ಸುತ್ತ ಒಂದು ಕಲ್ಲ ವೃತ್ತ. ಹೃದಯ ಮಿದುಳು ಕಣ್ಣು ಕಿವಿ ಉಂಡ ಸವಿ, ಮನದ ಗವಿಯ ತಳದಲೆಲ್ಲೊ ಪಿಸುಗುಟ್ಟುವ ಪಿತಾಮಹರ ಚಿತ್ತ- ಕೊರೆದುದಂತೆ ಈ ವಲಯ ಇದೇ ನನ್ನ ಎಲ್ಲ ...

1...7677787980...110

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....