ಚಿನ್ನದ ಬೆಳ್ಳಿಯ ಕೆಸರನ್ನು ತೊಳೆದು ಕೊಂಡು ಬಟ್ಟೆ ಹಾಕಿಕೊಂಡು ಬರುವಷ್ಟು ಹೊತ್ತಿಗೆ ಸಮುದ್ರದ ನೀರೆಲ್ಲ ಖರ್‍ಚಾಗಿರುತ್ತದೆ ನಕ್ಷತ್ರ ಮುಳುಗಿ ಹೋಗಿರುತ್ತದೆ ಸೂರ್ಯ ಚಂದ್ರ ಸತ್ತು ಹೋಗಿರುತ್ತಾರೆ ಅಲ್ಲಿಯವರೆಗೆ ನೀನು ಕಾದಿರುತ್ತೀಯಾ ಪಾವನಾ&#82...

ವಿಶ್ವಶಾಂತಿಗೆ ಸತ್ಯಯಜ್ಞಕೆ ಅಜ್ಞ ತನುವಿದೊ ಅರ್ಪಣೆ || ಸೇವೆಗಾಗಿ ಸವೆದು ಹೋಗುವೆ ನಾನು ತನವನು ಒಡೆಯುವೆ ವಿಶ್ವ ಸೇವೆಗೆ ಶಾಂತಿ ಸೇವೆಗೆ ನನ್ನ ಬಲಿಯನು ನೀಡುವೆ ನನ್ನ ಕೀರ್ತಿಗೆ ನನ್ನ ವಾರ್ತೆಗೆ ಸೇವೆಗೈವುದೆ ವಿಷತನಾ ಜಗದ ಹಿತದಲಿ ಸತ್ಯ ತಪದಲಿ...

ಲಾರಿ ಆಟೋ ಕಾರು ಕೂಗಿ ಹಾಯುತ್ತಿವೆ. ರಸ್ತೆಬದಿಯ ಚರಂಡಿ ದಂಡೆಯಲ್ಲಾಡುತಿದೆ ಪುಟ್ಟ ಮಗು; ಕಪ್ಪು, ತೊಟ್ಟಿರುವ ಬಟ್ಟೆಗೆ ಹತ್ತು ಹರಕು, ಬತ್ತಿದ ಮೈಯಿ, ಎಣ್ಣೆ ಕಾಣದ ತಲೆ. ಅಲ್ಲೆ ಮಾರಾಚೆಯಲಿ ಮಣ್ಣ ಕೆದರುತ್ತಿದೆ ಪುಟ್ಟಲಂಗದ ಹುಡುಗಿ. ಅಕ್ಕನೋ ಏನ...

ಗೆಳೆಯ :- ಬಿಡು ಚಿಂತೆ ಬಿಡು ಚಿಂತೆ ನನ್ನ ಗೆಳತಿ ಕೊರಗಿ ಕೊರಗಿ ಮರುಗುವೆ ಏಕೆ? ಹಸಿರ ನೆಲದಾಗ ನೇಸರ ಬಾಳಿನಗಲ ಜೀವ ಜೀವಕೆ ಬೇಸರ ಏಕೆ? ನೀ ಯಾಕೆ ಹಿಂಗ್ಯಾಕೆ? ಗೆಳತಿ :- ಹಸಿರ ನೆಲದಾಗ ವಸುಮತಿಯ ಕೂಡಿ ನೇಸರ ಬಾಳಿನಗಲ ಪ್ರಕೃತಿ ನನ್ನೆಲ್ಲ ಅಂಗಾಂ...

ಅಂತೂ ಇವತ್ತು ಸಂಸ್ಕೃತವು ಶ್ರೀ ಸಾಮಾನ್ಯನ ಭಾಷೆಯಾಗಿಲ್ಲ. ಮೂರು ಕೋಟಿ ಕನ್ನಡಿಗರಲ್ಲಿ ಎಷ್ಟು ಜನರಿಗೆ ಸಂಸ್ಕೃತದಲ್ಲಿ ಪ್ರವೇಶ ಸಾಧ್ಯ ? ಸುಮಾರು ನೂರಕ್ಕೆ ಎಪ್ಪತ್ತು ಜನ ಕನ್ನಡಿಗರು ನಿರಕ್ಷರಿಗಳಿರುವಾಗ ಸಂಸ್ಕೃತಿಯ ಬೀಜಗಳನ್ನು ಅವರ ಮನದಲ್ಲಿ ಬ...

ಹಿತ್ತಲು ನನ್ನದು ಯಾಕೆಂದರೆ ಅಲ್ಲಿಯೇ ನನ್ನ ಕನಸುಗಳು ಚಿಗುರಿದ್ದು ಪಿಸುಮಾತು ಆಡಿದ್ದು ನಲ್ಲನ ಜೊತೆ ಕಾಮನಬಿಲ್ಲ ಏರಿದ್ದು ಗೆಳತಿಗೆ ಎಲ್ಲಾ ಉಸುರಿದ್ದು ಕಣ್ಣೀರು ಹಾಕಿದ್ದು ಮತ್ತೆ ಮತ್ತೆ ಕಣ್ಣೋರಿಸಿಕೊಂಡು ಆತನ ಮಾತು ಕೇಳಿ ಸಮಾಧಾನಿಸಿಕೊಂಡಿದ್...

ಶೀಲಾಳಿಗೆ ವನಮಹೋತ್ಸವ ಭಾಷಣ ಕೇಳಿ ಸ್ಫೂರ್ತಿಯಿಂದ ತಾನೊಂದು ಮರ ನೆಡುವ ತೀರ್ಮಾನ ಕೈಗೊಂಡು ನರ್ಸರಿಗೆ ಹೋದ್ಲು. “ನೋಡಿ ನನಗೊಂದು ಗಿಡ ಬೇಕು ಅದು ನನಗೆ ಬೇಸಿಗೆಯಲ್ಲಿ ನೆರಳು ಕೊಡಬೇಕು… ಹೆಚ್ಚಿಗೆ ಕಸವಾಗಬಾರದು” ಇವಳ ಬೇಡಿಕೆ...

ರೊಟ್ಟಿ ಹಾಡುವುದು ತಪ್ಪಲ್ಲ ಹಸಿವೆಗೆ ಅರ್ಥವಾಗದಂತೆ….. ಅಲ್ಲಲ್ಲ ಅನುಭವಿಸಲಾಗದಂತೆ ಹಾಡುವುದು ತಪ್ಪು. ಹಸಿವು ಅಸೂಕ್ಷ್ಮವಾಗಿ ಸೃಷ್ಟಿಗೊಂಡ ಆ ಕ್ಷಣದ ತಪ್ಪು. *****...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....