ವಿಶ್ವಶಾಂತಿಗೆ ಸತ್ಯಯಜ್ಞಕೆ
ಅಜ್ಞ ತನುವಿದೊ ಅರ್ಪಣೆ ||

ಸೇವೆಗಾಗಿ ಸವೆದು ಹೋಗುವೆ
ನಾನು ತನವನು ಒಡೆಯುವೆ
ವಿಶ್ವ ಸೇವೆಗೆ ಶಾಂತಿ ಸೇವೆಗೆ
ನನ್ನ ಬಲಿಯನು ನೀಡುವೆ

ನನ್ನ ಕೀರ್ತಿಗೆ ನನ್ನ ವಾರ್ತೆಗೆ
ಸೇವೆಗೈವುದೆ ವಿಷತನಾ
ಜಗದ ಹಿತದಲಿ ಸತ್ಯ ತಪದಲಿ
ಸೇವೆ ಗೈದುದೆ ಶಿವತ ನಾ

ಮೌನ ಸೇವೆಗೆ ಮುಗ್ಧ ಸೇವೆಗೆ
ಕಹಳೆ ಕಾಳಿಯು ಏತಕೆ
ಮನುಜರಾತ್ಮದ ನಿಜದ ಯೋಗಕೆ
ಬ್ಯಾಂಡು ಭೋಂಗಾ ಯಾತಕೆ
*****