ನಗುವಿನಲಿ ನೋವಿದೆ ನೋವಿನಲಿ ನಗುವಿದೆ ಅತ್ತರಾಫಾತ ನಗುವೇ ಚೇತನ || ಅಳುವೇ ಜನನ ಮರಣ ನಗುವೆ ಜೀವನ ಭಾವನ ಬದುಕಿನಾಟವೆ ಈ ಸ್ಪಂದನ || ನಗುಮೊಗ್ಗಿನ ಬಾಲ್ಯ ಒಲವು ಬಿರಿದ ಯೌವನ ಒಲವಿನಾಟಕೇ ಬೆಸದ ಹೂರಣ || ನಗೆ ಚಿಮ್ಮಿದಾಟ ತೊಟ್ಟಿಲು ತೊಟ್ಟಿಲಾಟ ಒಡ...

ಎಲ್ಲಾ ಜಾತಿಯವರೂ ಸಲೀಸಾಗಿ ಕೋಳಿ ತಿನ್ನೋಕೆ ಶುರು ಮಾಡಿದ್ದು ನೋಡಿ, ಅರ್ಜೆಂಟಾಗಿ ಆಂಟಿ ಬಿರಿಯಾನಿ ಕಾನ್ಫರೆನ್ಸ್ ಕರೆದು, ಹೀಗೆ ಆದರೆ ಒಂದಲ್ಲ ಒಂದು ದಿನ ಕೂಗೋದಕ್ಕೆ ಕೋಳಿ ಇಲ್ದೇ ಬೆಳಗೇ ಆಗದೆ ಜಗತ್ತನ್ನು ಕತ್ತಲೆ ಆವರಿಸಬಹುದೂಂತ ನಿರ್ಣಯ ಮಾಡಿ...

ಹೃದಯ ಕಾಡಿನಲಿಹ ಹುಲಿಯ ನಾಡಿ ಮಿಡಿಸುತಲಿ ಅಂತರಂಗದ ವೀಣೆ ನುಡಿಸ ಬಾ ಬಸವಣ್ಣ ಕಾಡು ಈ ದೇಹದಲಿ ನಾಡ ಮೂಡಿಸುತ ತೀಡುತಲಿ ಬೀಡು ಮಾಡ ಬಾ ಬೇಗ ಓ ನಮ್ಮೆಲ್ಲರಣ್ಣ ! ಹುಲಿತನದ ಛಲವಿದ್ದು ಇಲಿಯಾಗಿ ಇದ್ದಿಹೆವು ಭಯದಿ ಮರೆತಿಹೆವು ನೈಜ ತೇಜವನ್ನು ಮಿನುಗು...

ದೇಶದಲ್ಲಿ ಮೂರನೆಯ ಮಹಾಚುನಾವಣೆ. ವರ್ಷ ೧೯೬೨. ದೇಶದ ಒಳಹೊರಗೆಲ್ಲಾ ಜವರಹರಲಾಲ್ ನೆಹರೂ ವಿರುದ್ಧ ಡಾ. ಲೋಹಿಯಾ ಲೋಕಸಭೆಗೆ ಸ್ಪರ್ಧಿಸುತ್ತಾರೆಂಬ ಸುದ್ದಿಯ ಗದ್ದಲ. ನೆಹರೂವನ್ನು ಪರಾಜಯಗೊಳಿಸಲು ಅಸಾಧ್ಯ ಎಂಬುದು ವಿಶ್ವ ನಂಬುಗೆ. ಇದುವರೆವಿಗೆ ಚುನಾ...

ಹಾಡುವ ಹಕ್ಕಿಗೆ ಹೂವಿನ ರೆಂಬೆ ಕಂದನ ಕೈಗೆ ಬಣ್ಣದ ಗೊಂಬೆ ಆಶೀರ್ವದಿಸಲಿ ಈ ಹೊಸ ವರ್ಷ ಪ್ರಾಯದ ಗಂಡಿಗೆ ಪ್ರೀತಿಯ ರಂಭೆ ಖಾಲಿ ಆಗಸಕೆ ಕಪ್ಪನೆ ಮೋಡ ಬೆಂದ ಜೀವಕೆ ಬೆಚ್ಚನೆ ಗೂಡ ಬಾಗಿನ ನೀಡಲಿ ಈ ಹೊಸ ವರ್ಷ ಕವಿ ಕಲ್ಪನೆಗೆ ಹೊಸ ಹೊಸ ಹಾಡ ನಲ್ಲಿಯ ಬಾ...

ಸೂರ್ಯ ದಿನಾಲೂ ಉದಯಿಸಿ ಮುಳುಗುತ್ತಾನೆ ಇದು ಎಲ್ಲಿಗೆ ಹೋಗಿ ನಿಲ್ಲಬಹುದು ಇಲ್ಲಾ ಇಲ್ಲೇ ಇರುವುದು ಜಗದ ಪ್ರೀತಿ. ಒಂದು ಕಾಣುತ್ತದೆ ಒಂದು ಕಾಣುವುದಿಲ್ಲ ಮರದಲ್ಲಿ ಮೌನವಾಗಿ ಚಿಗುರುವ ಹಸಿರು ಹಣ್ಣು ಅಲ್ಲಿ ಮಾತು ಭಾಷೆ ಜಗದ ದಾಹ. ಪಡೆದುಕೊಂಡ ಸಿಹಿ...

ಸುಂದರತೆಯಾನಂದ ಅಮರವೆಂದನು ಅಂದು ಕವಿ ಕೀಟ್ಸು ಕಲ್ಪನೆಯ ಕನಸಿನಲಿ ಮೈಮರೆತು; ನನಸಿನಲಿ ತಾನೊಲಿದ ಸೌಂದರ್ಯದಲಿ ಬೆಂದು, ಅದು ತನಗೆ ದೊರಕದೆಯೆ ಸಾಗಿಹೋಗುವುದರಿತು ಸಾವ ಸುಖ ಬಯಸಿದನು ! ತಂಗಾಳಿ ಬೀಸುತಲಿ ಹೊತ್ತು ತರುವಂದದಲಿ ಹೊಸ ಹೂವ ಪರಿಮಳವ, ಸೌ...

1...6768697071...73

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....