ವಸಂತ ಬಾ ಹಸಿರೆಲ್ಲವೂ ಒಂದಾಗಿ ಜೀವದ ಫಲ ಆರಿಸುತಲಿದೆ ನಿನ್ನ ಮಾಂತ್ರಿಕ ಸ್ಪರ್ಶ ಛಂದದ ಪರಾಕ್ರಮ ಹುಟ್ಟುತ್ತಲಿವೆ ಹೊಸ ಹೊಸ ಚಿಗುರುಗಳು ಹೊಸ ಜಾತ್ರೆ ಹೊಸ ತೇರುಗಳು ಬೇಸಿಗೆ ಹರಡಿ ಬಿರು ಬಿಸಿಲು ಅರಳಿವೆ| ಒಂದಾಗುವ ಪಿಂಡ ಮರು ಹುಟ್ಟು ಪಡೆದ ಗಳಿಗ...

ಮುರುಕು ಮಂಟಪದಲ್ಲಿ ಅಳಿದುಳಿದ ಎಡೆಯಲ್ಲಿ ನಿನ್ನ ರೂಪವು ಬಂದು, ಕಳೆದ ಕಾಲದ ನನಸ ಕೂಡ ಆಡುತಲಿಹುದು ಕಣ್ಣ ಮುಚ್ಚಾಲೆ! ಬೇಡ ಬೇಡೆಂದರೂ, ಕೇಳದೆಯೆ, ತಾಳದೆಯೆ, ಓಡುತಿದೆ ನಿನ್ನೆಡೆಗೆ ಮನಸು, ಕನಸಿನ ನನಸು, ಮರೆಯಾದ ನಿನಗಾಗಿ ತವಕಪಡುತೆ! ಅಂದೊಮ್ಮೆ,...

ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ ನೋಡುತ್ತಿರುತ್ತೇನೆ. ನನ್ನ ಲಕ್ಷ್ಯ ಎಷ್ಟೋ ಸಲ ಆ ಕಡೆಗೇ ಇರುತ್ತದೆ. ಆದರೆ ಆ ಮನೆ...

ಓ ಗೆಳತಿ ಓ ಪ್ರಿಯ ಗೆಳತಿಯೇ ನಿನ್ನ ಆ ಮಧುರ ನಗುವೆ ನನಗೆ ತುಂಬಾ ಸವಿ ನೆನಪಾಗುತ್ತದೆ ಗೆಳತಿ ನಿನ್ನ ನೆನಪು ನನಗಾದರೇ ಆ ನಿನ್ನ ಸುಂದರ ಸೌಂದರ್ಯ ಸ್ವಭಾವದ ಭಾವಚಿತ್ರ ಎದುರು ಥಟನೆ ಬಂದು ನಿಲ್ಲುವಳು ನೀನು ಓ ಗೆಳತಿ ನಿನ್ನ ನೆನಪಾದರೆ ನಾನು ಎಲ್ಲವ...

ಇಳಿದೆ ಇಳಿದು ಜನಸ್ತೋಮದಲ್ಲಿ ಸೇರಿ ಸೇರಿ ನುಗ್ಗಿದೆ ನುಗ್ಗಿ ಸ್ಟೇಶನಿನ ಹೊರಬಂದೆ ಬಂದು ಈ ಅಗಾಧ ಜನಸ್ತೋಮದಲ್ಲಿ ನುಗ್ಗಿದೆ ನುಗ್ಗಿ ಲಗ್ಗೇಜು ಹೆಗಲಿಗೇರಿಸಿಕೊಂಡು ಬಗ್ಗಿ ಸಾಗಿದೆ ಪ್ರವಾಹದಲ್ಲಿ ಸಾಗಿ ನಗರಕ್ಕೆ ಬಂದು ಎದ್ದೆ ಎದ್ದು ಇಳಿದುಕೊಳ್ಳು...

ನನ್ನ ಎದೆಯ ಮೀಟಿಮೀಟಿ ಏನ ಹುಡುಕತಲಿರುವೆ ಅಲ್ಲಿಲ್ಲ ಯಾವ ಲೋಹದದಿರು ಹೊನ್ನ ಹೊಂಗನಸು, ಬೆಳ್ಳಿನವಿರು ಪಚ್ಚೆ ಹವಳದ ಭಾವಗಳು ಬರಿದು ಬರಿದು, ಈಗಿನ್ನೇನು ಅಲ್ಲಿಹುದು ನೀನಿದ್ದೆ ಅಂದು ಅಲ್ಲಿ ಬರಿ ಛಾಯೆ ಇಂದು ಇಲ್ಲಿ ಈ ಮನವ ಬಗೆದು ಬಗೆದು ನೆತ್ತರವ...

ಇದು ನನ್ನ ಕಲ್ಪನೆಯ ಕಥೆಯಲ್ಲ ಮಗಳೇ ನನ್ನಮ್ಮ ನನಗೆ ಹೇಳಿದ್ದು ಅವಳಮ್ಮ ನನ್ನಮ್ಮನಿಗೆ ಹೇಳಿದ್ದಂತೆ ಈಗ ನಾ ನಿನಗೆ ಹೇಳಿದಂತೆ ನಾಳೆ ನೀ ನಿನ್ನ ಮಗಳಿಗೆ ಹೇಳುವಂತೆ ಇದೊಂದು ರೀತಿ ಚಕ್ರದಂತೆ! ಇದು ಕಥೆಯ ಮೂಲರೂಪವೂ ಅಲ್ಲ ಮಗಳೇ ನನ್ನಮ್ಮ, ಅವರಮ್ಮ, ...

ನೀನು ಸಾರಿ ಸಾರಿ ಎಂದಾಗಲೆಲ್ಲಾ ನಾನು ಸರಿ ಸರಿ ಎಂದು ಸುಮ್ನಾಗ್ತೇನೆ ನಾನು ಸಾರಿ ಸಾರಿ ಎಂದಾಗ ಮಾತ್ರ ನೀನು ದೂರ ಸರಿ ಎನ್ನುವುದು ಎಷ್ಟು ಸರಿ. ಹೀಗೆ ಕೇಳಿಬಿಟ್ಟೆನೆಂದು ಮತ್ತೆ ರೇಗಬೇಡ ವೆರಿ ಸಾರಿ, ವೆರಿ ವೆರಿ ಸಾರಿ. *****...

ಕಾಲು ತಾಗಿದ ಮುಳ್ಳು ; ಮೈಯಲ್ಲ ಮುರಿಯುವದು | ಕಾಯ ತಾಗಿದ ಮುನಿಸು; ಮನವೆಲ್ಲ ಮೆಲ್ಲುವದು || ಇಂದಿಲ್ಲ ನಾಳಿಲ್ಲ ಎಂಬೊಂದು ಕುಂದಿಲ್ಲ | ಭವಹರನ ನೆನೆದೊಡೆ ಎಂದೆಂದು ಭಯವಿಲ್ಲ || ಹಾ ತಡೆ ತಡೆ ಓಡದಿರು; ನೋಡು ಮುಂದಿದೆ ತಗ್ಗು | ಓ ತಡೆ ತಡೆ ದುಡ...

1...3456

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....