ಮುಗಿದ ಅಧ್ಯಾಯ

ನನ್ನ ಎದೆಯ ಮೀಟಿಮೀಟಿ
ಏನ ಹುಡುಕತಲಿರುವೆ
ಅಲ್ಲಿಲ್ಲ ಯಾವ ಲೋಹದದಿರು
ಹೊನ್ನ ಹೊಂಗನಸು, ಬೆಳ್ಳಿನವಿರು
ಪಚ್ಚೆ ಹವಳದ ಭಾವಗಳು
ಬರಿದು ಬರಿದು, ಈಗಿನ್ನೇನು
ಅಲ್ಲಿಹುದು

ನೀನಿದ್ದೆ ಅಂದು ಅಲ್ಲಿ
ಬರಿ ಛಾಯೆ ಇಂದು ಇಲ್ಲಿ
ಈ ಮನವ ಬಗೆದು ಬಗೆದು
ನೆತ್ತರವ ಹರಿಸಿ
ಏನ ಪಡೆದುಕೊಂಡೆನೇ
ನೀ ಮೊಗೆದಷ್ಟು ಉಕ್ಕಲು
ನಾನೇನು ಶರಧಿಯೇ

ನೀನೇ ಅಳಿಸಿದ ನಿನ್ನ ಚಿತ್ರವ
ಮತ್ತೇ ಬರೆಯುವ ಹುಂಬತನವೇ
ಈ ಹೃದಯವೀಗ
ಬಿಳಿ ಹಾಳೆಯಲ್ಲ

ಯಾಕಿನ್ನು ವ್ಯರ್ಥ ಪ್ರತಾಪ
ಸುಮ್ಮನಿರು ಸಾಕಿನ್ನು
ಗೊಸುಂಬೆಯಂತಹ ಮನಕೆ
ಬೆರಗಾಗಲಾರೆ

ಮುಗಿದ ಅಧ್ಯಾಯವ
ತೆರೆಯಲಾರೆ
ತೊಟ್ಟ ಬಾಣತೊಡದ
ಅವನಂತೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮ್ಮ ಹೇಳಿದ್ದು
Next post ತಿರುವನಂತಪುರ ೭೧

ಸಣ್ಣ ಕತೆ