ಗದಲ ಗೋಜಲು ದೂಳು ದುಮ್ಮು ದುರ್ವಾಸನೆ ಸಿಡಿಮದ್ದುಗಳ ಕಟುನಾತ ಕೊಳಚೆ ಹರಿವ ಓಣಿ ಬೀದಿಗಳು ದಾರಿಯಲ್ಲಿ ಬಿಡಾಡಿ ದನ-ಜನಗಳು ಮುಂದೆ ಸಾಗಲು ಬಿಡದೆ ಅಡ್ಡಾದಿಡ್ಡಿ ನಿಂತು ಮೆಲುಕು ಹಾಕುತ್ತಿವೆ ಸರಭರ ವಾಹನಗಳು ಕಿವಿಕೊರೆಯುತ್ತಿವೆ ಧೂಳೆಬ್ಬಿಸಿ ಮೂಗಿಗ...

ಹಿರಿಯ ರಾಜಕಾರಣಿಗಳು ಮತ್ತು ಕನ್ನಡದ ಮುಂದಾಳುಗಳು ಕನ್ನಡ ಜನಸಂಖ್ಯೆ ಯನ್ನು ೫ ಕೋಟಿ, ೬ ಕೋಟಿ ಎಂದು ಗಟ್ಟಿಯಾಗಿ ಹೇಳುವುದನ್ನು ನೀವು ಕೇಳಿರಬೇಕು. ಅವರ ಹೇಳಿಕೆಗಳ ಪ್ರಕಾರ ಅಷ್ಟು ದೊಡ್ಡ ಜನಸಂಖ್ಯೆಯ ಸಮಾಜಕ್ಕೆ ತಾವು ಸೇರಿರುವುದು ಹೆಮ್ಮೆಯ ವಿಷಯ...

ಮೋಡಗಳಿಗೆಲ್ಲಿವೆಯೋ ಕಾಲು ಕುಟುಂಬವೇ ನಡೆಯುತಿಹುದಿಲ್ಲಿ ಅಪ್ಪ ಅಮ್ಮ ಮಕ್ಕಳು ಮೊಮ್ಮಕ್ಕಳು ಸಂಬಂಧಿಗಳು ಒಮ್ಮೆ ವೇಗ ಮಗದೊಮ್ಮೆ ನಿಧಾನ ಒಮ್ಮೆ ಮುನಿಸಿ ದೂರ ದೂರ ಮತ್ತೊಮ್ಮೆ ಸುತ್ತಿ ಒಬ್ಬರೊಳಗೊಬ್ಬರು ತಲೆಯ ಮೇಲೆ ಕಪ್ಪುಬುಟ್ಟಿ ಚಾಪಿ ಬಗಲಿಗೆ ಗಂಟ...

ಅಂಧಕಾರದ ಭ್ರಾಂತಿ ಕಳೆಯಿಸೊ ಪ್ರಭೆಯೆ ನಿನಗೆ ವಂದನೆ, ಅಂತರಂಗದ ಹಣತೆ ಸೊಗಯಿಸೊ ಗುರುವೆ ನಿನಗೆ ವಂದನೆ | ಧಾತ ವಿಧಾತ ನಾಥನ ತೋರೋ ಕೈಯ ದೀವಿಗೆ ಭೂತ ಭವಿಷ್ಯದ್ವರ್ತಮಾನ ನಿನ್ನ ಹಿರಿಮೆಗರಿಮೆ ಸಾಕ್ಷಿಗೆ | ಮಾತೃ ಮಮತೆ ಪಿತೃ ನಿಯತಿ ಭ್ರಾತೃನೇಹದ ಚ...

ಎಲ್ಲಿಂದಲೋ ತೇಲಿ ಮೆಲ್ಲನೆ ಹರಿದು ಬಂದ ರಾಗ, ಹೂವಿನ ಗಿಡಗಳ ಮೇಲೆ ಹಾರುವ ಚಿಟ್ಟೆ! ಎದೆ ತುಂಬ ಪರಿವೆ ಇಲ್ಲದ ನೆನಪು, ಅಂಗಳದಲಿ ಕುಪ್ಪಳಿಸುವ ನೀಲಿಹಕ್ಕಿ, ಸಾವರ ಸಂತಸದ ಮೋಡಗಳ ಸಂಚಲನ ಭಾನು! ಒಮ್ಮೆ ಹೀಗೆ ಸಂತೃಪ್ತದಲಿ ಹೊಳೆವ ಮನದ ಮಿಂಚು ಮಾಯವಾಗ...

ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ ಸಿದ್ಧತೆ ಷುರು ಆಗಿವೆ. ಬ್ಲೀಚಿಂಗ್, ಫೇಷಿಯಲ್, ಹೊಸ ಸೀರೆಗೆ ಫಾ...

ಕೊರೆವ ನೆನಪುಗಳೆಲ್ಲಾ ನುಗ್ಗಿ ಕ್ಯಾಸಂಡ್ರಾಳಂತೆ ಅಪ್ಪುತ್ತವೆ ನರ್ತಿಸುತ್ತವೆ, ಬೇಸರುಸಿರು ಓಡಿಸಿ ಅಪ್ಪುಗೆಯ ಹಿತ ನೀಡುವ ಕನಸು ತೋರಿಸಿ, ನಗಿಸಿ ಕೊನೆಗೊಮ್ಮೆ ಸೋಲಿಸಿ ದೂರ ಸರಿಯುತ್ತಾಳೆ ಶಾರ್ಕ್ ಮೀನಿನಂತೆ. *****...

1...456

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...