ಕೊರೆವ ನೆನಪುಗಳೆಲ್ಲಾ
ನುಗ್ಗಿ ಕ್ಯಾಸಂಡ್ರಾಳಂತೆ ಅಪ್ಪುತ್ತವೆ
ನರ್ತಿಸುತ್ತವೆ, ಬೇಸರುಸಿರು ಓಡಿಸಿ
ಅಪ್ಪುಗೆಯ ಹಿತ ನೀಡುವ ಕನಸು
ತೋರಿಸಿ, ನಗಿಸಿ ಕೊನೆಗೊಮ್ಮೆ
ಸೋಲಿಸಿ ದೂರ ಸರಿಯುತ್ತಾಳೆ
ಶಾರ್ಕ್ ಮೀನಿನಂತೆ.
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)