ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ… ಮಸ್ಗೆಲ್ಗೆ ಆಕಿ, ಗಸ್ಗಾಸಾ… ನುಣ್ಗೆ ತ್ವಟ್ವಟ್ಟೇ… ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆ...

ನಿರ್ಜೀವಿಯಾಗಿಹೆನು ನೋಡು ಬಂದು ಕಣ್ಣೀರು ಕಾಲುವೆಯ ಹಾಯ್ದು ನಿಂದು ಬಯಲೊಂದೆ ಉಳಿದಿಹುದು ನೋಡು ಬಂದು ಮಧುರಸದ ಬಟ್ಟಲನು ನೀಡು ತಂದು ನಾನೆಂಬ ಸೊಲ್ಲಿಲ್ಲ ಕೇಳು ಬಂದು ಜನಕಜೆಯ ಮನವಿದಕೆ ಸಾಕ್ಷಿ ಇಂದು *****...

ಲೋಟ ಮೇಲೇರುವುದು ಲೋಟ ಕೆಳಗಿಳಿಯುವುದು ಒಂದರಿಂದಿನ್ನೊಂದಕ್ಕೆ ಧುಮುಕುವುದು ಭೋರ್ಗರೆವ ಜಲಪಾತ ಪಾರದರ್ಶಕ ಗ್ಲಾಸುಗಳಲ್ಲಿ ತುಂಬಿ ಹರಿಯುವುದು ಗುಳ್ಳೆಯೆಬ್ಬಿಸಿ ಮೂಗಿನ ಹೊಳ್ಳೆಯೆಬ್ಬಿಸಿ ಆದ್ದರಿಂದಲೆ ಅವರಿಗೆ ಹೊಳ್ಳರೆಂದು ಹೆಸರು ಕಳ್ಳರಿಗೆ ಸುಳ್...

ನಿನ್ನ ತಿಳಿವುದಕಿಂತ ನನ್ನ ತಿಳಿವುದೇ ಲೇಸು ನೀನೆ ನಾನೆಂದೆಂಬ ಪದವೇ ಲೇಸು ಕಂಡವರು ಕೇಳಿದರೆ ನಗರೆ ಈ ಭಾವವನು? ಅದ್ವೈತ ಸಿದ್ಧಾಂತ ಸುಲಭವೇ ಏನು? ಉನ್ನತದ ಬ್ರಹ್ಮಾಂಡಕಾದಿಬೀಜವು ನೀನು ನಿನ್ನಿಂದ ಬಂದಿರುವ ಜೀವಿ ನಾನು ಬದಿಯೊಳಿದ್ದೂ ಎನಗೆ ಕಾಣದಿ...

ಸಂಜೆಯ ಮಂಜು ಕವಿಯು ವೇಳಗೆ ಬಂದರು ನಾಲ್ಕು ಜನ ಮುಖವೇ ಕಾಣದ ಹೆಸರೇ ಕೇಳದ ಯಾರೋ ದೀನಜನ ಜಗುಲಿಯ ಮೇಲೆ ಕೂರಿಸಿ ಹಾಕಿದೆ ಉಳಿದ ಕೊಂಚ ಅನ್ನ ಹಾಸಲು ಹೊದೆಯಲು ನಾಚದೆ ನೀಡಿದೆ ತುಂಡು ಹೊದಿಕೆಯನ್ನ ಆತುರದಿಂದಲೆ ತಿಂದರು ಅನ್ನವ ಮುಖ ಅರಳಿತು ಹಿತಕೆ, ಏ...

ಜೀವನದ ಆಟದಲ್ಲಿ ಕ್ರಿಕೆಟ್ಟಿನಂತೆ ಸೆಂಚುರಿಯೇ ಕಷ್ಟ, ೯೯ಕ್ಕೆ ನರ್ವಸ್ ಆಗಿ ಔಟಾಗಿ ಬಿಡುತ್ತಾರೆ ಕೆಲವರು ಸೆಂಚುರಿ ಬಾರಿಸಿಯೂ ನಾಟ್‌ಔಟಾಗಿ ಉಳಿಯಬಲ್ಲವರು ಕೆಲವೇ ಶೂರರು ಹಿಂದೆಯೇ ಮೋಕ್ಷಗೊಂಡರು ಭಾರತ ರತ್ನ ಸರ್‍. ಎಂ ವಿಶ್ವೇಶ್ವರಯ್ಯನವರು ಪ್ರೊ...

ಈ ದೇಶ ದೇಹದ ಶಕ್ತಿ ಕುಂದುತ್ತಿದೆ ಚೈತನ್ಯಹೀನವಾಗುತ್ತಿದೆ ರಕ್ತ ಕಡಿಮೆಯಾಗುತ್ತಿದೆ ಯುವ ಪೀಳಿಗೆ ಪೋಲು ಪೋಲಿಗಳಾದಂತೆ ಹಲ್ಲುಗಳು ಒಂದೊಂದೇ ನೋವು ನರಳಿ ಉದುರುತಿವೆ ಕೋಲಾರ ಚಿನ್ನದ ಗಣಿ ಕಿರ್ಲೊಸ್ಕರ ಕಂಪನಿ ಅಸಂಖ್ಯ ಬಟ್ಟೆ ಗಿರಣಿ ಸಿಕ್ ಇಂಡಸ್ಟ್...

ಮಳೆ ಧೋ ಧೋ ಎಂದು ಸುರಿಯುತ್ತಿತ್ತು. ನನ್ನ ಹರಕು ಕೊಡೆ ಸತ್ಯಾಗ್ರಹ ಹೂಡಿತ್ತು. ಹೇಗೋ ಒಲುಮೆ ಜುಲುಮೆಗಳಿಂದ ಅದೇ ಕೊಡೆಯ ಆಶ್ರಯದಲ್ಲಿ ಮುಂದೆ ಸಾಗಿದ್ದೆ. ನನ್ನ ಲಂಗೋಟಿ ಗೆಳೆಯನೊಬ್ಬ ತನ್ನದೇ ಆದ ಗಾಂಭೀರ್ಯದಲ್ಲಿ ಮುಂದೆ ಬರುತ್ತಿದ್ದ. ಅಪರಿಚಿತರನ...

1...6566676869...73

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....