ಜೀವನದ ಆಟದಲ್ಲಿ ಕ್ರಿಕೆಟ್ಟಿನಂತೆ
ಸೆಂಚುರಿಯೇ ಕಷ್ಟ,
೯೯ಕ್ಕೆ ನರ್ವಸ್ ಆಗಿ ಔಟಾಗಿ ಬಿಡುತ್ತಾರೆ ಕೆಲವರು
ಸೆಂಚುರಿ ಬಾರಿಸಿಯೂ ನಾಟ್‌ಔಟಾಗಿ ಉಳಿಯಬಲ್ಲವರು ಕೆಲವೇ ಶೂರರು
ಹಿಂದೆಯೇ ಮೋಕ್ಷಗೊಂಡರು ಭಾರತ ರತ್ನ ಸರ್‍. ಎಂ ವಿಶ್ವೇಶ್ವರಯ್ಯನವರು
ಪ್ರೊಫೇಸರ್‍ ಎ.ಎನ್.ಮೂರ್ತಿರಾಯರೂ ನಮ್ಮೊಡನಿದ್ದ ಅಂಥೊಬ್ಬ ಮಹನೀಯರು
ಇತ್ತೀಚಿನವರೆಗೂ ನಮ್ಮ ಮಧ್ಯೆ ಇದ್ದರು
ಎಲ್ಲ ಸಮಾರಂಭಗಳಿಗೂ ಶ್ರದ್ಧೆಯಿಂದ
ಹಾರಜರಾಗುತ್ತಿದ್ದ ಆಬಾಲವೃದ್ಧರಾದಿಯಾಗೆಲ್ಲರ ಮಿತ್ರ
ನಿಷ್ಠೂರಗಳೇ ಇರದ ಅಜಾತಶತೃ ನಿಟ್ಟೂರು ಶ್ರೀನಿವಾಸರಾಯರು
ಈಗಲೂ ಇಲ್ಲೇ ಹತ್ತಿರದಲ್ಲಿದ್ದಾರೆ ನಡೆದಾಡುವ ಶಿವ ಸಿದ್ಧಗಂಗಾ
ಮಹಾಸ್ವಾಮಿಗಳವರು.
*****