ಮೈದಾನದೊಳಗೆಲ್ಲ
ಕುದುರೆ, ಆಮೆ, ಒಂಟೆ
ಎತ್ತು, ಆನೆ, ಮೊಲ
ಇವುಗಳಿಗೆಲ್ಲಾ ರೇಸಂತೆ
ಯಾರು ಯಾರನು ಸೋಲಿಸಿ
ಮುಂದೆ ಹೋಗುವರೋ
ಮುಂದ್ಹೋದವರ ತಳ್ಳಿ
ಕಾಲೆಳೆದು ಬೀಳಿಸಿ
ಮುಂದ್ಹೋಗುವರೋ
ಅವರೆ ಅಂತೆ, ಗೆದ್ದವರು
ಇಲ್ಲಿ ಗೆಲ್ಲುವವರಾರು
ಕಾಲಿಡಿದು ಎಳೆಯುವವರಾರು
ಸೋತು ಸುಣ್ಣವಾಗುವವರಾರು
ಅವರಿಗವರದೇ ಬಾಜಿ
ನೋಡುಗರಿಗೆಲ್ಲಿ ರಾಜಿ
ಗೆಲ್ಲುವುದೇ ಕುದುರೆ
ಅಲ್ಲಲ್ಲ ಒಂಟೆ, ಅಯ್ಯೋ
ಮೊಲವೇ, ಅಲ್ಲವೇ ಅಲ್ಲ ಬಿಡಿ
ಎಲ್ಲರ ಮೇಲೂ ಪಂದ್ಯ
ಆಹಾ ಎಂತಹ ಧನ್ಯ
ಪಾಪ ಆಮೆ ಮಾತ್ರ ಒಂಟಿ
ತೆವಳುತ್ತಿದೆ ನೆಲಕ್ಕೆ ಅಂಟಿ
*****