ಲೇಸರ್ ಕಿರಣಗಳ ಅದ್ಭುತ ಶಕ್ತಿ(ವಿರಾಟ ಸ್ವರೂಪ)

‘ಲೇಸರ್ ಕಿರಣ’ವು ಇಂದು ಅತ್ಯಂತ ಮಹತ್ವದ ಪರಿಣಾಮಕಾರಿಯಾದ ಒಂದು ಬೆಳಕಿನ ಪುಂಜ. 1958ರಲ್ಲಿ ಡಾ|| ಟೌನ್ಸ್ ಕಂಡು ಹಿಡಿದಿದ್ದರೂ ಇತ್ತೀಚಿನ ವೈಜ್ಞಾನಿಕ ಅವಿಷ್ಕಾರಗಳ ದಸೆಯಿಂದಾಗಿ ಈ ಲೇಸರ್ ವಿರಾಟ ಸ್ವರೂಪಗಳ ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಳ್ಳುವಲ್ಲಿ ವಿಜ್ಞಾನಿಗಳು ಶ್ರಮವಹಿಸಿದ್ದಾರೆ. ಇದರಿಂದಾಗಿ ಈಗಾಗಲೇ ಇದರ
ಕ್ರಾಂತಿಕಾರಕ ಬಳಕೆಗಳು ನಡೆಯುತ್ತಲಿವೆ. ವಿಕಿರಣವನ್ನು ಉದ್ದೀಪನಗೊಳಿಸಿ ಉತ್ಕರ್ಷನ ಮೂಲಕ ಬೆಳಕನ್ನು ಹೆಚ್ಚಿಸುವುದು ಇದರ ತತ್ವವಾಗಿದೆ. ವಿಜ್ಞಾನ ವಿಷಯಗಳಲ್ಲಿನ, ಖಗೋಳ, ಭೂಗೋಳ, ವೈದ್ಯಕೀಯ ಶಾಸ್ತ್ರದಲ್ಲಿ ಅಪರಿಮಿತ ಉಪಯೋಗಗೊಳ್ಳುವ ಇದು ಮುಂದುವರಿದ ಜಗತ್ತಿಗೊಂದು ವರದಾನವೆಂದೇ ಹೇಳಬಹುದು.

ಈ ಲೇಸರ್ ಪ್ರಕಾಶವನ್ನು ತೀಕ್ಷ್ಣಗೊಳಿಸಿದರೆ ಒಂದು ಚದರ ಸೆಂಟಿಮೀಟರ್ ಸ್ಥಳದಲ್ಲಿ 50 ಕೋಟಿ ವ್ಯಾಟ್ ಶಕ್ತಿ ಸಂಗ್ರಹಿಸುತ್ತದೆಂದು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಇದರಿಂದಾಗಿ ಕಠಿಣವಾದ ಲೋಹವನ್ನು ಕರಗಿಸುವ, ಕತ್ತರಿಸುವ ಕೆಲಸವನ್ನು ಸಲೀಸಾಗಿ ಮಾಡಬಹುದು.

ಬಾಹ್ಯಾಕಾಶ : ಚಂದ್ರಗ್ರಹಕ್ಕೆ ಲೇಸರ್ ಕಿರಣವನ್ನು ರವಾನಿಸಿ ಅದು ಮರಳಿ ಬರಲು ತಗಲುವ ವೇಳೆಯನ್ನು ಚಂದ್ರ, ಭೂಮಿಯ ನಡುವಿನ ಅಂತರವೆಂದು ಕಂಡು ಹಿಡಿಯಬಹುದು.  ಬಲು ದೂರದ ನಕ್ಷತ್ರವನ್ನು ಬರಿಗಣ್ಣಿನಿಂದ ಕಾಯುವ ಆಕಾಶ ವೀಕ್ಷಕರಿಗೆ ವರದಾನವಾಗಿದೆ. ಕೃತಕ ಉಪಗ್ರಹಗಳ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಇದು  ನೆರವಾಗುತ್ತದೆ. ಮುಂದೊಂದು ದಿನ ಮಂಗಳನಲ್ಲಿ ಮನೆ ಮಾಡಿಕೊಂಡು ಟಿ. ವಿ. ಮೂಲಕ ಭೂಮಿಯ ಸ್ಲಿತಿಗತಿ- ಗಳನ್ನು ಲೇಸರ್’ ಸಹಾಯದಿಂದ ಮಾಡಬಹುದು. ವಾಯುಮಂಡಲದ ಅಧ್ಯಯನ, ಹವಾಮುನ್ಸೂಚನೆಯಿಂದ ತೊಡಗಿ ಮಾರುಕಟ್ಟೆಯ ವಿವಿಧ ದರಗಳವರೆಗೂ ಈ ಲೇಸರ್ ಸಹಕರಿಸುತ್ತದೆ.

ಭೂಗೋಳ : ಇದರಿಂದ ಭೂಮಿಯಲ್ಲಿ ಅಡಗಿದ ನಿಧಿ ನಿಕ್ಷೇಪಗಳನ್ನು ಪತ್ತೇಹಚ್ಚ ಬಹುದು. ಹೀಲಿಯಂ, ನಿಯೋನ್ ಗ್ಯಾಸಿನಿಂದ ಉತ್ಪಾದಿಸುವ ಲೇಸರ್ ಕಿರಣಗಳು ಪೃಥ್ವಿಯ ಅಳವನ್ನು ಇಂಚುಬಿಡದೇ ಪರೀಕ್ಷಿಸಿ ನಿಖರ ಫಲಿತಾಂಶ ನೀಡುತ್ತದೆ.

ವೈದ್ಯಕೀಯ : ಈ ಲೇಸರ್ ನೆರವಿನಿಂದ ಮಿದುಳು ಮತ್ತು ಸ್ನಾಯುಮಂಡಲಗಳು ದೇಹದ ಸೂಕ್ಷ್ಮ ಅಂಗಗಳು ಸಾಮಾನ್ಯಶಾಸ್ತ್ರ ಚಿಕಿತ್ಸೆಯಲ್ಲಿ ಸ್ವಲ್ಪ ಕೈತಪ್ಪಿದರೂ ರೋಗಿಯ ಮರಣ ನಿಶ್ಚಿತ. ಈ ಸಂದರ್ಭದಲ್ಲಿ ಲೇಸರ್ ಕಿರಣಗಳ ಸಹಾಯದಿಂದ ಯಾವುದೇ ಹಾನಿ ಆಗದಂತೆ ಸ್ನಾಯುಮಂಡಲದ, ಮಿದುಳಿನ ಸೂಕ್ಷ್ಮ ರೋಗಪೀಡಿತ ಸ್ಥಳಗಳ ಕಾಯಿಲೆಗಳನ್ನು ಗುಣಪಡಿಸಬಹುದು. ಮಿದುಳು ಹುಣ್ಣು ಮತ್ತು ಕ್ಯಾನ್ಸರ್ ಗಡ್ಡೆಯನ್ನು ಯಾವ ನೋವಿಲ್ಲದೇ
ಕತ್ತರಿಸಬಹುದು. ಕಣ್ಣಿನ ಚಿಕಿತ್ಸೆ ಮಾಡಿದಾಗ ರಟಿನಾವನ್ನು ಅದರ ಸ್ಥಾನದಲ್ಲಿರಿಸಲು ಲೀಸರ್‌ನಿಂದಷ್ಟೆ ಸಾಧ್ಯವೆಂದು ಖಚಿತವಾಗಿದೆ. ಮೂತ್ರಕೋಶದಲ್ಲಿನ ಕಲ್ಲುಗಳನ್ನು ಶಸ್ತ್ರಚಿಕಿತ್ಸೆ ಇಲ್ಲದೇ ಲೇಸರ್ ಪ್ರಯೋಗದಿಂದ ಅದನ್ನು ಅಲ್ಲಿಯೇ ಕರಗಿಸಿ ಮೂತ್ರದ ಮೂಲಕ ಹೊರಹೋಗುವಂತೆ ಮಾಡಬಹುದು.

ಹೀಗೆ ಎಲ್ಲರಂಗಗಳಲ್ಲಿಯೂ ಯಶಸ್ವಿಯಾಗಿ ಪ್ರಯೋಗಿಸಲ್ಬಡುವ ಈ ಲೇಸರ್ ಮುಂದೊಂದು ದಿನ ವಿಜ್ಞಾನದ ಯಾವೊಂದು ಸಂತೋಧನೆಗೂ ಅಗತ್ಯವಾಗಬಹುದು ಮತ್ತು ಮನೆಮನೆಗಳ ಯಂತ್ರಗಳ ಅಂತರಂಗದಲ್ಲಿ ಈ ಲೇಸರ್ ಕುಳಿತು ಏನೆಲ್ಲ ಚಮತ್ಕಾರವನ್ನು ಮಾಡಬಹುದು.
*****

ಕೀಲಿಕರಣ : ಎಮ್.ಎನ್.ಎಸ್.ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏನೋ ಗಾನ ಚಿಮ್ಮುತಿದೆ
Next post ಯಕ್ಷಗಾನದ ಜಾಗತೀಕರಣ

ಸಣ್ಣ ಕತೆ