ಸಾಗರದ ಆಚೆಗಿನ ಕೂಗೊಂದು ಕೇಳುತಿದೆ ಆರದೋ ಏನೊ? ಯಾರಕರೆಯುತಿಹುದೇನೊ ? ತೆರೆಯ ಮೇಲೇರಿ ಬೀಸುಗಾಳಿಯಲಿ ಈಸುತಿದೆ ಬರುತಿದೆ; ಬಿಡದೆ ಬರುತಿದೆ; ಮುಗಿಯಲಿಲ್ಲವೇನೋ ? ಆರಕೂಗಾರ ಕರೆಗಾಗಿರಬಹುದೀ ಕಾರಿರುಳಿನಲಿ ? ಮುಗಿಲ ಮಾಳಿಗೆಯಲಿ ಮಿನುಗು ಚುಕ್ಕೆಗಳ...

ಇತಿಹಾಸಕು ಹಿಂದೆಯೇ ಹೊತ್ತಿ ಉರಿದ ಜ್ಯೋತಿಯೇ ಹಸಿದ ವರ್ತಮಾನಕೆ ಹಾಲುಣಿಸುವ ಮಾತೆಯೇ ಬರಲಿರುವ ನಾಳೆಗೂ ಭರವಸೆಯಾ ಹಸಿರೇ ರಾಮನು ಬರೀ ಹೆಸರೇ, ಅಲ್ಲವೆ ನಮ್ಮುಸಿರೇ? ಬೆಳೆವ ಮರದ ಸತ್ವ ಮೊಳಕೆಯಲ್ಲೆ ಕಾಣದೆ? ಋಷಿ ಯಜ್ಞವ ಬಾಲಕ ರಕ್ಷಿಸುವುದು ಸಾಲದೆ?...

ಮಾನವ ಜನ್ಮ ದೊಡ್ಡದು ಸಾರಿದರು ಪುರಂದರ ದಾಸರು ಮಾವನ ಜನ್ಮ ದೊಡ್ಡದು ಅಂದರು ಅಳಿಯರಾಯರು ಮಗಳನಿತ್ತರು, ಮನೆಯತೆತ್ತರು ನಾ ಕೇಳೆ ಕೊಟ್ಟಾರು ಬಿಸಿ ನೆತ್ತರು, ಸೇರಿಸಿ ಅತ್ತರು! *****...

ಸಿನೇಮಗಳಲಿ ನೋಡಿದಂತೆಯೇ ಪುಸ್ತಕಗಳಲಿ ಓದಿದಂತೆಯೇ ಅಷ್ಟೇ ಏಕೆ ನಿನ್ನೆಯೇ ಸ್ಟಾರ್ ಹೊಟೆಲೊಂದರಲಿ ಆ ಗುಲಾಬಿ ಹುಡುಗಿಯರು ಕೋಟು ತೊಟ್ಟು ಅದರ ಬಾಲ ಕೊರಳಿಗೆ ಸುತ್ತಿಕೊಂಡಂತೆಯೇ ಕಂಡೆ ನಾನೊಂದು ಅಚ್ಚ ಬಿಳಿಯ ಫ್ಹರ್ ಕೋಟು ಗಡಗಡ ಚಳಿಯ ಒಂದು ಸಂಜೆ ಪ್...

ಪಡುವಲದೊಡೆಯ ಪೂರ್ಣಿಮೆಯಿನಿಯ ಬೆಳಗಽನ್ನು ಸುಯ್ದಾ, ಬೆಳ್ಳಿಯ ಬೆಳಗನ್ನು ಸುಯ್ದಾ, ಬಾನಲಿ ಮೊಳೆದು ಮೆಲ್ಲಗೆ ಬೆಳೆದು ಇಳೆಯಲ್ಲಾ ಕಾಣ್ದಾಽ ಪೂರ್ಣಿ ಇಳೆಯಲ್ಲಾ ಕಾಣ್ದಾ ಅಮೃತದ ರಸದಾ ಚಿಲುಮೆಯಿಂದಽ ಭರಭರನೇ ಸುರಿದು ತಾನೇ ಭರ ಭರನೇ ಸುರಿದು ಧಗ ಧಗಿಸ...

ಬಯಲಲಿ ಮಕ್ಕಳು ಹಾರಿಸಿದ ಗಾಳಿಪಟ ಮನೆಯ ಒಳಗೆ ಬಿದಿರು ಗೋಂದು ಬಣ್ಣದ ಹಾಳೆ ತುಂಡು. ತಿಳಿಗಣ್ಣ ತುಂಬ ಮಿಂಚು ಸುಳಿದಾಡಿ ಗಂಗೆ ಹರಿದಳು ಎದೆಯ ಬಯಲಲಿ. ದಿಕ್ಕು ದಿಕ್ಕಿನ ಚಲನೆ ಬದಲಿಸಿ ಮದು ಹದಗೊಂಡ ಮನಸ್ಸು ಬಯಲು ಆಲಯದೊಳಗಿರಿಸಿ ಎಲ್ಲಿರುವೆ ನೀನು ...

ಯುಗ ಯುಗಗಳೇಕಾಂತಗೀತ ಹಾಡುತನಂತ ನೋವಿನಲಿ ಕಾತರಿಸಿ ನನ್ನ ಉಷೆ ಬಂದೆ. ನಿನ್ನ ಬೆಳಕಲಿ ನಿನಗೆ ನನ್ನೆದೆಯ ಕಿರು ಹಣತೆ ಅರ್ಪಿಸಿದೆ; ನೀನೂಪ್ಪಿ ಒಲವ ಬಾಳಿಸಿದೆ. ನಾನು ಕವಿ, ನೀ ಕಾವ್ಯ ! – ನಾ ಬರೆದ ಗೀತಗಳು ನಿನ್ನ ಒಲವಿನ ನೂರು ಸೊಗಸು ನೆರ...

ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ ಕರ್ಫ್ಯೂ ತೆಗೆದವರೆ. ಆದ್ರೂವೆ ಎಲ್ಲೆಡೆ ಸದ್ದಡಗೈತೆ. ಯಾರ ಮನೆಬಾಗಿಲುಗಳ...

ಬೇಸಿಗೆಯ ಬಿಸಿಲಿನಂಥ ಅವಳ ನೆನಪಿನಲ್ಲಿ ಹೃದಯದ ತಂತುಗಳೆಲ್ಲಾ ಸುಟ್ಟೂ ಸುಟ್ಟೂ ಕ್ಷಣ ಕ್ಷಣಕೂ ಸಾಯುತಿವೆ ಆದರೂ ಅವಳು ಚಂದ್ರನ ಶೀತಲದಂತಾದರೆ ಎಂದು ಈಗಲೂ ಕಾಯ್ದಿದ್ದೇನೆ. *****...

1...4647484950...73

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...