ಬೇಸಿಗೆಯ ಬಿಸಿಲಿನಂಥ
ಅವಳ ನೆನಪಿನಲ್ಲಿ
ಹೃದಯದ ತಂತುಗಳೆಲ್ಲಾ
ಸುಟ್ಟೂ ಸುಟ್ಟೂ
ಕ್ಷಣ ಕ್ಷಣಕೂ ಸಾಯುತಿವೆ
ಆದರೂ
ಅವಳು ಚಂದ್ರನ ಶೀತಲದಂತಾದರೆ
ಎಂದು ಈಗಲೂ ಕಾಯ್ದಿದ್ದೇನೆ.
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)