ಎಷ್ಟೊ ಹೇಮಂತಗಳಿಂದ
ಕಾಯುತ್ತಿದ್ದೇನೆ ಇಲ್ಲಿ
ಈ ಹೊಸ್ತಿಲಲ್ಲಿ
ನಾನೊಳಗೆ ಬರಬೇಕು
ನಿನ್ನೊಳಗೆ ಸೆಳೆ
ಎಳೆ ಎಳೆಯಾಗಿ ಸೆಳೆ
ಬೆಂಕಿಯ ಸೆಳೆಯಾಗಿ ಸುಳಿಯಾಗಿ
ಸೊನ್ನೆಯ ಮಾಡಿ ನುಂಗು ನನ್ನನು
ನಿನ್ನ ಹೊಕ್ಕುಳಿನೊಳಕ್ಕೆ
ಆ ಹರಹಿನಲ್ಲಿ
ಬಯಲಾಗಲೆ?
ಬಯಲಾಚೆಯ ಕ್ಷಿತಿಜವಾಗಲೆ?
ನನ್ನ ಬಾಗಿಲು ನೀನು
ನಿನ್ನ ತೆರೆ
ನನ್ನ ತೆರೆ
ಸೆರೆ ಹಾಕು ನನ್ನ ನಿನ್ನೊಳಗೆ.
*****