ಉಷೆಗೆ

ಯುಗ ಯುಗಗಳೇಕಾಂತಗೀತ ಹಾಡುತನಂತ
ನೋವಿನಲಿ ಕಾತರಿಸಿ ನನ್ನ ಉಷೆ ಬಂದೆ.
ನಿನ್ನ ಬೆಳಕಲಿ ನಿನಗೆ ನನ್ನೆದೆಯ ಕಿರು ಹಣತೆ
ಅರ್ಪಿಸಿದೆ; ನೀನೂಪ್ಪಿ ಒಲವ ಬಾಳಿಸಿದೆ.

ನಾನು ಕವಿ, ನೀ ಕಾವ್ಯ ! – ನಾ ಬರೆದ ಗೀತಗಳು
ನಿನ್ನ ಒಲವಿನ ನೂರು ಸೊಗಸು ನೆರಳು !
ನೀ ಬೆಳಸಿ ಬಾಳಿಟ್ಟ ನನ್ನ ಕಾವ್ಯದ ಬಳ್ಳಿ
ಹೂವಿಡುವ ಮುನ್ನವೇ ನೀ ಬಾಡಿಹೋದೆ !

ಅಂದು, ನೀನಿದ್ದಾಗ, ಈ ಕವಿತೆಗಳ ಮಾಲೆ
ಒಲವ ಮಂಗಳಸೂತ್ರ ನಿನ್ನ ಕೊರಳಲ್ಲಿ-
ಆ ಆಸೆ ಇಂದೆಲ್ಲಿ ? – ಇವು ನಿನ್ನ ನೆನಪಿನಲಿ
ಹೃದಯ ಅರ್ಪಿಸುತ್ತಿರುವ ಭಾವದಶ್ರುಗಳು !
*****

ಕೀಲಿಕರಣ : ಎಂ ಎನ್ ಎಸ್ ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತನ್ನೊಳಗಣ ಕಿಚ್ಚು
Next post ಮಾಂತ್ರಿಕ

ಸಣ್ಣ ಕತೆ