ಹಸಿರು ಪೈರು ನಗುವ ನೆಲದಲಿ
ನೇಗಿಲ ಹೊತ್ತ ರೈತನಂತೆ
ಕಚ್ಚೆ ಕಟ್ಟಿ ತಿಲಕವಿಟ್ಟು
ಧೀರ ನೀನಾಗಬೇಕು ಕನ್ನಡಿಗ ||

ಕಳೆಯ ತೆಗೆದು ಸ್ವಚ್ಛವಾದ
ಹೊಲದ ಪರಿಯು ನಿನ್ನ ಮನಸು
ತಾಯ ಸೇವೆ ಮಾಡಲೆಂದು ಹೂವಾಗಿ
ಅಣಿಯಗೊಳಿಸು ಕನ್ನಡಿಗ ||

ನಾಡ ಮಣ್ಣ ಬಸಿರಿನಲ್ಲಿ
ಹುಟ್ಟಿದ ನೀನು ಮುಂದೆ ಬೆಳೆದು
ತಾಯಿ ನುಡಿಯ ಉಳಿಸಿ ಬೆಳೆಸಿ
ಧೀರ ನೀನಾಗಬೇಕು ಕನ್ನಡಿಗ ||

ಪಂಪ ರನ್ನ ಕುಮಾರ
ವ್ಯಾಸರ | ನೆಲ ಕಣ್ಣು
ನೀನು ಅವರ ಮನದ
ದೀವಿಗೆ ನೀನಾಗಬೇಕು ಕನ್ನಡಿಗ ||

ಸಾವಿರ ಸಾವಿರ ವರ್ಷಗಳ
ಇತಿಹಾಸ ನಮ್ಮದು
ಅದರ ಕಣಕಣದಲಿ
ಬೆರೆತ ಭಾವದುಸಿರು ನೀನಾಗಬೇಕು ಕನ್ನಡಿಗ ||
*****