ಇದು ನನ್ನ ಕಲ್ಪನೆಯ ಕಥೆಯಲ್ಲ ಮಗಳೇ ನನ್ನಮ್ಮ ನನಗೆ ಹೇಳಿದ್ದು ಅವಳಮ್ಮ ನನ್ನಮ್ಮನಿಗೆ ಹೇಳಿದ್ದಂತೆ ಈಗ ನಾ ನಿನಗೆ ಹೇಳಿದಂತೆ ನಾಳೆ ನೀ ನಿನ್ನ ಮಗಳಿಗೆ ಹೇಳುವಂತೆ ಇದೊಂದು ರೀತಿ ಚಕ್ರದಂತೆ! ಇದು ಕಥೆಯ ಮೂಲರೂಪವೂ ಅಲ್ಲ ಮಗಳೇ ನನ್ನಮ್ಮ, ಅವರಮ್ಮ, ...

ನೀನು ಸಾರಿ ಸಾರಿ ಎಂದಾಗಲೆಲ್ಲಾ ನಾನು ಸರಿ ಸರಿ ಎಂದು ಸುಮ್ನಾಗ್ತೇನೆ ನಾನು ಸಾರಿ ಸಾರಿ ಎಂದಾಗ ಮಾತ್ರ ನೀನು ದೂರ ಸರಿ ಎನ್ನುವುದು ಎಷ್ಟು ಸರಿ. ಹೀಗೆ ಕೇಳಿಬಿಟ್ಟೆನೆಂದು ಮತ್ತೆ ರೇಗಬೇಡ ವೆರಿ ಸಾರಿ, ವೆರಿ ವೆರಿ ಸಾರಿ. *****...

ಕಾಲು ತಾಗಿದ ಮುಳ್ಳು ; ಮೈಯಲ್ಲ ಮುರಿಯುವದು | ಕಾಯ ತಾಗಿದ ಮುನಿಸು; ಮನವೆಲ್ಲ ಮೆಲ್ಲುವದು || ಇಂದಿಲ್ಲ ನಾಳಿಲ್ಲ ಎಂಬೊಂದು ಕುಂದಿಲ್ಲ | ಭವಹರನ ನೆನೆದೊಡೆ ಎಂದೆಂದು ಭಯವಿಲ್ಲ || ಹಾ ತಡೆ ತಡೆ ಓಡದಿರು; ನೋಡು ಮುಂದಿದೆ ತಗ್ಗು | ಓ ತಡೆ ತಡೆ ದುಡ...

೧.೬.೧೯೯೬ರಂದು ಬೆಳಗ್ಗೆ ೧೧ ಘಂಟೆಗೆ ಭಾರತದ ಪ್ರಪ್ರಥಮ ಕನ್ನಡಿಗ ಪ್ರಧಾನಮಂತ್ರಿಯಾಗಿ ಶ್ರೀ ದೇವೇಗೌಡರು ಅಧಿಕಾರವಹಿಸಿಕೊಂಡ ಎಲ್ಲ ಕನ್ನಡಿಗರಿಗೂ ಮಹತ್ತ್ವದ ಕ್ಷಣ. ಕೇಂದ್ರದಲ್ಲಿ ಹಿರಿಯ ಕನ್ನಡಿಗ ಮಂತ್ರಿಗಳ ಅಭಾವವು ದೀರ್ಘಕಾಲ ಇದ್ದದ್ದರಿಂದ ಕರ್...

ರಾತ್ರಿಯ ಆರೆಂಟು ತಾಸಿನ ವಿಮಾನ ಪ್ರಯಾಣ ಕಿಟಕಿಯಾಚೆ ನೋಡಲೇನಿದ್ದಿತು! ಯಾವಾಗಲೋ ಅಲ್ಲೊಂದು ಇಲ್ಲೊಂದು ಕಾಣುವ ಸಮುದ್ರದ ಹಡಗಿನ ದೀಪಗಳು, ಮರುಭೂಮಿಯಲಿ ಹೊತ್ತಿ ಉರಿಯುವ ಕಚ್ಚಾತೈಲ ಬೆಳಕು ದೊಡ್ಡ ನಗರಗಳಾಗಿದ್ದರೆ ಒಂದಷ್ಟು ರಸ್ತೆ ದೀಪಗಳೋ ಏನೋ! ನ...

ಮುಕ್ತನು ನೀನೆ ಶಕ್ತನು ನೀನೆ ಓ ಚಿರ ಚೇತನವೇ….. ನೀನೇ ಜೀವನ ನೀನೇ ಮೃತ್ಯುವು ನೀನೇ ನಾಕ-ನರಕವು….. ಮೂರ್ತವು ನೀನೆ ಅಮೂರ್ತವು ನೀನೆ ಅವರವರಾ ದರುಶನ ಭಾವವೂ….. ಮಾಯೆ ನಿರ್ಮಾಯೆಯು ತಮಸಕಮೃತವು ನಿನ್ನಯ ಲೀಲಾ ಮಾಲೆ…....

ಅಮ್ಮ ಪ್ರತಿದಿವಸ ಒಲೆಸಾರಿಸಿ ರಂಗೋಲಿ ಇಡುತ್ತಿದ್ದಳು ಎದೆಯ ಒಲೆಯ ಉರಿ ಎಂದೂ ಆಗಲೇ ಇಲ್ಲ. ಅವರಿವರ ದೊಡ್ಡವರು ಮಾತುಗಳು ಅವಳ ಒಲೆಯ ಗೂಡು ಕಣ್ಣುಗಳು ಯಾವಾಗಲೂ ಊದಿಕೊಂಡಂತೆ ಉಸಿರುಗಳು ಗಾಳಿಯಲಿ ತೇಲಿ ಅವಳು ಮತ್ತೆ ಒಲೆ ಊದುತ್ತಿದ್ದಾಳೆ. ಸತ್ತ ಕ್...

ನೋಡು ಉಷೆ! ಸುತ್ತೆಲ್ಲ ಬೆಡಗು ಸೂಸಿದೆ ತುಂಬಿ, ಚಂದ್ರಮನ ಎಳಗಿರಣಗಳ ತೋಳತೆಕ್ಕೆಯಲಿ ಮುದ್ದು ಮೋಡವು ನಕ್ಕು ನಲಿಯುತಿರೆ, ಮರಿದುಂಬಿ ಹೂಹೃದಯದೊಲವಿನಲಿ ಕುಣಿದಾಡುವಂದದಲಿ! ತಂಗಾಳಿ ಮರದೆಲೆಯ ಮುಟ್ಟಿಯೂ ಮುಟ್ಟದೊಲು, ಮೃದುವಾಗಿ ಮುತ್ತಿಟ್ಟು, ಮುಂದ...

1...2223242526...73

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....