ಮುಕ್ತನು ನೀನೆ
ಶಕ್ತನು ನೀನೆ
ಓ ಚಿರ ಚೇತನವೇ…..

ನೀನೇ ಜೀವನ
ನೀನೇ ಮೃತ್ಯುವು
ನೀನೇ ನಾಕ-ನರಕವು…..

ಮೂರ್ತವು ನೀನೆ
ಅಮೂರ್ತವು ನೀನೆ
ಅವರವರಾ ದರುಶನ ಭಾವವೂ…..
ಮಾಯೆ ನಿರ್ಮಾಯೆಯು
ತಮಸಕಮೃತವು
ನಿನ್ನಯ ಲೀಲಾ ಮಾಲೆ…..

ವ್ಯೋಮದಾ ಭೌಮವೊ
ಶ್ಯಾಮಲ ಧಾಮವು
ದ್ವೈತಾದ್ವೈತದ ಸಾಲೆ…..

ಮತಿತನು ಪತಿತನೊ
ಅತೀತಾತ್ಮಜನೋ…
ನಿನ್ನೊಳಗೊಳ್ಳುವಗೆ ನೋಟ…

ಕಂಡರೆ ಕಾಂಬೆಯೊ
ಕರೆದೊಡೆ ಬರುವೆಯೋ
ಬಲ್ಲಿದರೆಲ್ಲೆಯ ಮಾಟ…

ನೀ ಚಿರಂತನ
ಸತ್ಯಾತ್ಮನ ಚೇತನ
ನಿತ್ಯ ಮುಕ್ತ ನೀ… ಮುಕ್ತ… |
*****

ಗಿರಿಜಾಪತಿ ಎಂ ಎನ್
Latest posts by ಗಿರಿಜಾಪತಿ ಎಂ ಎನ್ (see all)