ಬೆಳ್ಳಿ ಗಡ್ಡದ ಸಾಮಿ

ಬೆಳ್ಳಿ ಗಡ್ಡದ ಸಾಮಿ ಬಸವ ಬೆಳಗಿನ ಯೋಗಿ
ವಿಜಯ ಮಾಂತನೆ ಬಾರ ಹೂವ ತೂರ
ತೆಂಗು ಬಾಳಿಯ ಶರಣಾ ಬಿಳಿಯ ಜೋಳದ ಕರುಣಾ
ವಿಜಯ ಮಾಂತನೆ ಬಾರ ಲಿಂಗ ತೋರ

ಬಸವ ವಚನದ ಗಂಟು ಚೆನ್ನಾಗ ಕಟಗೊಂಡು
ಮಾಂತಮ್ಮ ಜತಿಗೂಡಿ ಬಂದ ಸಾಮಿ
ಶಿವಯೋಗ ಮಂದಿರದ ಠಾವು ತೋರಿದ ತ್ಯಾಗಿ
ಆರು ಚಕ್ರದ ದಾರಿ ಬಲ್ಲ ಯೋಗಿ

ದುಡ್ಡು ದಮ್ಮಡಿ ಚಿನ್ನ ಹಂಚಿ ಬಿಲ್ಲಿಯ ಗೈದಿ
ಶರಣಽರ ಸೂಳ್ನೂಡಿ ಕೋಟಿ ಅಂದಿ
ಕೂಡಽಲ ಸಂಗಮದ ಬೆಳುವ ಭೂಮಿಯ ತುಂಬ
ಚಿತ್ತರಗಿ ಚಿಜ್ಯೋತಿ ಬೆಳಕು ತಂದಿ

ಇಳಕಲ್ಲು ಕಡಕಲ್ಲು ಹುನಗುಂದ ಲಿಂಗ್ಸೂರು
ಸರುವಕ್ಕ ಶಿವಲಿಂಗ ತುಂಬಿ ಬಂದಿ
ಭುವನಕ್ಕ ಬೆಳಕಾದಿ ಮನುಕುಲಕ ಹೂವಾದಿ
ಬಸವ ಧರ್ಮದ ಯುಗದ ಜ್ಯೋತಿಯಾದಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಸೆ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೯೫

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…