ಕುರುಬರು ನಿನ್ನ ಮರೆತೇಬಿಟ್ರಲ್ಲೋ ಕನಕ…!

ಗೋಕುಲಾಷ್ಟಮಿಯಂದು ಉಡುಪಿಯಲ್ಲಿ ಆಪಾಟಿ ಪೂಜೆ ಪುನಸ್ಕಾರ ಅಭಿಷೇಕಗಳನ್ನು ಮಾಡಿಸಿಕೊಂಡು ಹ್ಯಾಪಿಯಾಗಿರಬೇಕಾಗಿದ್ದ ಶ್ರೀಕೃಷ್ಣ ಪರಮಾತ್ಮನಂತ ಪರಮಾತ್ಮನೇ ಯಾಕೋ ಟೆನ್ಶನ್‌ನಲ್ಲಿದ್ದ. ಉಡುಪಿ ಯತಿಗಳು ಮತಿಗೆಟ್ಟವರಂತಾಡುತ್ತಾ ನನ್ನ ಮೂಲ ನೆಲೆಗೇ ಮೂರು ಪೈಸೆ ಬೆಲೆಯಿಲ್ಲದಂತೆ ಮಾಡುತ್ತಿರುವ ಹುನ್ನಾರಗಳನ್ನು, ನೋಡುತ್ತಲೇ ಬಂದ ಕೃಷ್ಣನ ಮೋರೆಯಲ್ಲೀಗ ಸದಾ ಇರುತ್ತಿದ್ದ ರೆಡಿಮೇಡ್ ನಗೆ ಮಾಯವಾಗಿತ್ತು. ೧೬ನೇ ಶತಮಾನದಲ್ಲಿ ತನ್ನ ಗರ್ಭದಲ್ಲಿಯೇ ನೆಲೆಸಿಹೋದ ಭಕ್ತ ಶಿರೋಮಣಿ ಕನಕ ದಾಸನನ್ನು ಮೋಡಿ ಸೀರಿಯಸ್ ಆಗಿ ಡಿಸ್ಕಸ್ ಮಾಡುವ ಉಮೇದು ಬಂದಿತ್ತು. ತಕ್ಷಣ ಆಕಳಿಸುವ ಟೈಪ್ ದೊಡ್ಡದಾಗಿ ಬಾಯಿ ತೆರೆದು ಗರ್ಭದೊಳಗೆ ಹಾಯಾಗಿದ್ದ ಕನಕನನ್ನು ಈಚೆ ಬರುವಂತೆ ಅಪ್ಪಣಿಸಿದ. ಇಷ್ಟವಿಲ್ಲದಿದ್ದರೂ ಕನಕ ಗಲಿಬಿಲಿಗೊಂಡು ಈಚೆ ಬಂದ. ಪ್ರಖರ ಬೆಳಕಿಗೆ ಕ್ಷಣಕಾಲ ಕಣ್ಣು ಬಿಡಲೂ ಆಗದೆ ಕಣ್ಣುಜ್ಜುತ್ತಾ ನಿಂತ. ಸ್ವಾಮಿಯ ದರ್ಶನವಾದೊಡನೆ ಚೇತರಿಸಿಕೊಂಡು ‘ಅಡ್ಡ ಬಿದ್ದೆ ಬುದ್ಧಿ’ ಎಂದು ಶಿರಸ್ಟಾಂಗ ಹಾಕಿದ. ‘ಹಾಯಾಗಿದ್ದ ನನ್ನನ್ನೇಕೆ ಈಚೆ ಕರೆದೆಯೋ ತಂದೆ?’ ಎಂದು ನೊಂದುಕೊಂಡ. “ಉಡುಪಿ ಸಮಾಚಾರ ತಿಳಿದಿರಬೇಕಲ್ಲ ಕನಕ?” ಕೃಷ್ಣ ಆರ್ಟಿಫಿಷಿಯಲ್ ನಗೆ ಚಲ್ಲಿದ. ಕ್ಷಣ ನಿಮೀಲ ನೇತ್ರನಾದ ಕನಕ ‘ಎಲ್ಲಾ ನಿಮ್ಮ ಅನುಗ್ರಹ’ ಎಂದವನೆ ತಿಳಿದಿದೆ ಎಂದು ಗೋಣು ಆಡಿಸಿದ. ‘ನಿನ್ನ ಗೋಪುರ ಕೆಡವಿದ್ದರಿಂದ ತುಂಬ ಫೀಲ್ ಆಗಿರಬೇಕಲ್ಲವೇ?’ ‘ಇಲ್ಲ ರಮಾರಮಣ. ಪುನಃ ಕಟ್ಟಿ ನನ್ನ ಹೆಸರನ್ನೇ ಮಡಗ್ಯವರಲ್ಲ.’ ‘ಕಳ್ಳರಂತೆ ರಾತ್ರೋರಾತ್ರಿ ತಮಗೆ ಇಷ್ಟವಾದ ಬಿಜೆಪಿಗಳನ್ನೂ ಕರೆಯದೆ ಕನಿಷ್ಠ ನಿನ್ನವರಾದ ಕುರುಬ ಮುಂದಾಳುಗಳನ್ನೂ ಕರೆಯದೆ ಕಾರ್ಯ ನಿರ್ವಹಿಸಿದ್ದು ತಪ್ಪಲ್ಲವೇನೋ?’ “ಬಾಂಬ್ರು ರಾತ್ರಿನಾಗೆ ಸುಮುಹೂರ್ತ ಬಂದೇತೆ ಅಂತ ಹಂಗ್ ಮಾಡಿದ್ರಂತೆ” ಅದು ಹೋಗಲಿ ಕನಕನ ಕಿಂಡಿನಾ ನವಗ್ರಹ ಕಿಂಡಿ ಮಾಡಲು ಹೊರಟಿದ್ದರಲ್ಲಯ್ಯ?’ ‘ತಿಳಿದಿದೆ ವಾಸಿದೇವ. ಅದವರ ಹುಟ್ಟು ಗುಣ’ ಎಷ್ಟು ಕೂಲಾಗಿ ಹೇಳ್ತಿಯಲ್ಲಪ್ಪಾ. ಬೇಸರವಾಗಲಿಲ್ಲವೇನೋ?’ ‘ನಾನು ನನ್ನದು ಅಂತೇನಿಲ್ಲ ಪ್ರಭು. ಎಲ್ಲಾ ನೀನು ನಿನ್ನದು ದೇವಾ’ ‘ಅಲ್ಲಯ್ಯಾ ನಿನ್ನನ್ನು ದೇವಾಲಯದಾಚೆ ಪಂಜರಕಟ್ಟಿ ಈಗ್ಲೂ ನಿಲ್ಲಿಸಿ ನಿನ್ನ ಅಸ್ತಿತ್ವಕ್ಕೇ ಮಸಿ ಬಳಿಯಲೆತ್ನಿಸುವ ಅಷ್ಠಮಠಗಳೆಂಬ ಅಡ್ಡೆಗಳ ಬಗ್ಗೆ ತಿಳಿದೂ ಕೋಪವಾಗುತ್ತಿಲ್ಲವೆ.’ ‘ಖಂಡಿತ ಇಲ್ಲ ಶ್ರೀಹರಿ. ನನ್ನವನಾಗಿ ಉಡುಪಿಯಲ್ಲಿ ನೀನಿರುವಾಗ ನನಗೇಕೆ ಆತಂಕ ಮುರಾರಿ?’ ‘ಅಲ್ಲಿ ನನ್ನನ್ನೆಲ್ಲಿ ಇರಲು ಬಿಟ್ಟದ್ದಾರೋ. ಪ್ರತಿ ಪರ್ಯಾಯದಲೂ, ಮಣಗಟ್ಟಲೆ ಬಂಗಾರ ವಜ್ರ ತೊಡಿಸಿ ನನ್ನ ಒರಿಜಿನಲ್ ರೂಪ ಯಾವುದೆಂಬುದೇ ನನಗೆ ತಿಳಿಯದಾಗಿದೆ. ಉಸಿರಾಡಿದಲಿ, ವಿಪ್ರರ ಬೆವರಿನ ವಾಸನೆ ಗಬ್ಬುನಾತ ಹೊಡೆಯುತ್ತೆ. ನನಗೆ ಬೇಕಿರೋದು ವಜ್ರವೈಢೂರ್ಯವಲ್ಲವೋ, ತುಳಸಿ ಹಾರ ಮಾತ್ರ. ನನಗೆ ಬೇಕಿರೋದು ದಿನವೂ ಇವರು ಕಬಳಿಸುವ ಪಂಚಭಕ್ಷ ಪರಮಾನ್ನವಲ್ಲವೋ, ಒಂದು ಮುಷ್ಟಿ ಅವಲಕ್ಕಿ ಮಾರಾಯ’ ‘ಹಾಗಂತ ಅವರಿಗೆ ಹೇಳಿಬಿಡು ತಂದೆ.’ ನನ್ನನ್ನು ದರ್ಶಿಸುವಷ್ಟು ಪರಿಶುದ್ದರು ಯಾರಿದ್ದಾರೋ ಅಲ್ಲಿ?’ ‘ಶಾಂತಂ ಪಾಪಂ. ಪೇಜವಾರ ಅಂತ ಒಬ್ಪರು ಅವರೆ ಅವರೊ ನನ್ನಂಗೆಯಾ ವೀಕ್ ಪಾರ್ಟಿ.’ ‘ಪೆದ್ದ, ಆತ ಈಗ ಭಾರತದಲ್ಲೇ ಸಂನ್ಯಾಸಿಗಳಲ್ಲಿ ಭಾರೀ ಸ್ಟ್ರಾಂಗ್ ಕಣೋ.’ ‘ಅಂತಹ ಮಹಾನ್ ಭಕ್ತರೆ ದೇವಕಿನಂದನ!?’ ‘ಭಕ್ತಿಯಲ್ಲಿ ನಿನ್ನನ್ನು ಬಿಟ್ಟರೆ ಉಡುಪಿಯಲ್ಲಿ ಮತ್ತೆ ಅನ್ಯರನ್ನು ಈವರೆಗೆ ಕಾಣಲಿಲ್ಲವೋ ಕನಕ. ಇವರೆಲ್ಲಾ ಭುಕ್ತರು. ಕಾಯಾ ವಾಚಾ ಮನಸಾ ಪೂಜಿಸದೆ ದೆಹಲಿ ಟೂರ್ ಮಾಡುತ್ತಾ ಹೆಸರಿಗೆ ಮಾತ್ರ ಕಾವಿ ತೊಟ್ಟು ಖಾದಿ ತೊಡದ ಪುಲ್ ಟೈಂ ರಾಜಕಾರಣಿ ಪಾರ್ಟೈಂ ಸನ್ಯಾಸಿಗಳು. ‘ಹಂಗಾರೆ ಆವಯ್ಯ ಅದ್ಭುತ ಮನುಷ್ಯನೇ ತಂದೆ!| ‘ಆತನ ಚೆಡ್ಡಿ ಭಕ್ತರು ಮಸೀದಿಯನ್ನು ಕಡವಿದಾಗ ಚಪ್ಪಾಳೆ ತಟ್ಟದ ಆತ ಆದ್ಭುತನೋ ಭೂತನೋ…. ನೀನೇ ಡಿಸೈಡ್ ಮಾಡ್ಕೋ. ಈಗ ನೋಡಲಾಗಿ ಆತನ ಪಳೆಯುಳಿಕೆಯಂತಿರುವ ವಿಶ್ವಪ್ರಿಯ ತೀರ್ಥನೆಂಬ ಎಳೆನಿಂಬೆ ಗೋಪುರವನ್ನೇ ಕೆಡವಿ ನಿಮ್ಮವರು ಗದ್ದಲ ಮಾಡಿದಾಗ ಅಂಜಿ ಹೊಸ ಗೋಪುರ ಕಟ್ಟಿಸಿದ. ರಾದ್ಧಾಂತವಾದೀತೆಂದು ನಿನ್ನ ಹೆಸರನ್ನೇ ಇಟ್ಟವನೆ ಅನ್ನು. “ಕೆಡವುವ ಸಂಸ್ಕೃತಿಯಲ್ಲಿ ಹುಟ್ಟಿದೋರಲ್ವೆ ಅವರು. ಏಕಲವ್ಯನ ಬೆರಳನ್ನೇ ಗುರುದಕ್ಷಿಣೆ ನೆಪದಲ್ಲಿ ಕತ್ತರಿಸಿ ಕೆಡವಿದರು. ಕರ್ಣ ಕಲಿತ ವಿದ್ಯೆಯನ್ನು ಮರೆಯುವಂತೆ ಶಪಿಸಿ ರಣರಂಗದಲ್ಲಿ ಸಾವಿಗೆಡವಿದರು. ಸ್ವಾತಂತ್ರ್ಯ ತಂದುಕೊಟ್ಟ ಗಾಂಧಿಯನ್ನೇ ಗುಂಡಿಟ್ಟು ಕೆಡವಿದರು. ಭಾರತದ ಧ್ವಜವನ್ನು ನಾಗಪುರದ ತಮ್ಮ ಕಛೇರಿಯ ಮೇಲೆ ಹಾರಿಸಿದ ಈ ಜನ ಹುಬ್ಬಳ್ಳಿ ಈದ್ಗಾದಲ್ಲಿ ಕಾನೂನು ಉಲ್ಲಂಘಿಸಿದ ಧ್ವಜ ಹಾರಿಸಿ ನಾಲ್ವರು ಅಮಾಯಕರನ್ನು ಉರುಳಗೆಡವಿದರು. ಭಾರತದಲ್ಲಿ ಅಸ್ಪೃಶ್ಯತೆಯನ್ನು ಹುಟ್ಟುಹಾಕಿ ಸಂಸ್ಕೃತಿಯ ಮತೀಯ ದಿಕ್ಕನ್ನೆ ತಪ್ಪಿಸಿದ ವಿಪ್ರೋತ್ತಮರಲ್ಲವೆ’ ‘ಭಲೆ ಭಲೆ, ಹೊಟ್ಟೆಯಲ್ಲಿದ್ದುಕೊಂಡೇ ಎಷ್ಟಲ್ಲಾ ಅಬ್ಸರ್ವ್ ಮಾಡಿದ್ದೀಯಲ್ಲೋ…! ನಿನ್ನ ತಿಳಿವಳಿಕೆ ನಿಮ್ಮವರಿಗಿಲ್ಲದೆ ಹೋಯಿತೆ. ಗುಂಪು ಕಟ್ಟಿಕೊಂಡು ಬಂದು ಗದ್ದಲ ಮಾಡಿ ಮಠದ ಪುಳಿಚಾರ್ ತಿಂದು ನಿದ್ದೆ ಹೊಡೆದು ಎದ್ದು ಹೋದವರು ನಿನ್ನನ್ನೇ ಪೂರಾ ಮರೆತೇಬಿಟ್ಟರಲ್ಲೋ ಕನಕ! ಈಶ್ವರಪ್ಪ, ರೇವಣ್ದ, ಇಸ್ಪನಾತ ರಂತಹ ಕೇಸ್ ಗಳು ನಿಮ್ಮಲ್ಲಿರೋವಾಗ ನಿಮಗೆಲ್ಲಿಯ ಪೀಸೋ ಕನಕ? ಮೊನ್ನೆ ಸಿದ್ರಾಮ್ರನಾ ಪಟ್ಟ ಪದವಿಯಿಂದ ಉಲ್ಟುಗೆಡವಿದ ಮೇಲೆ ಅಹಿಂದ ಅಂತ ಜನ ಜಾತ್ರೆ ಸೇರಿಸ್ತಾ ಅಧಿಕಾರದ ಡ್ರೀಮ್ ಕಾಣ್ತಾ ಬಾಡೂಟಕ್ಕೆ ಕುಂತುಬಿಟ್ಟವರೆ, ಆ ಪೇಜಾವರ ಸಾಬರ ಸಹವಾಸ ಬಿಟ್ಟರೆ ನನ್ನ ಬೆಂಬಲ ಅಂತಾರೆ. ನೀನೊಮ್ಮೆ ಉಡುಪಿಗೆ ಹೋಗಿ ಹಳೆ ಬ್ರಾಂಬ್ರಿಗೆ ಮತ್ತೆ ಯಾಕೆ ಹೊಸ ಪಾಠ ಹೇಳಿ ಬರಬಾರದಯ್ಯ?’

‘ವೆರಿ ಸಾರಿ ಮುಕುಂದ. ನೀನೇ ಅಲ್ಲಿಲ್ಲ ಅಂದ್ಮೇಲೆ ನಾ ಯಾಕ ಹೋಗ್ಲಿ ಹೇಳು ಪ್ರಭು’

’ನಿಜ ನಾನಿರೋದು ಭಕ್ತರ ಮನದಲ್ಲಯ್ಯ. ಹೋಗ್ಲಿ ಯತಿಗಳಿಗೇನಾದ್ರೂ ಸಂದೇಶ ಹೇಳಬಾರದೇನೋ ಕನಕ’. ಹೇಳೋದೇನಿದೆ ಗೋವಿಂದ, ‘ನಾನು’ ಹೋದರೆ ನೀನು ಅದಮಾರು ವಿಶ್ವಪ್ರಿಯ ತೀರ್ಥ. ಇಲ್ಲದಿದ್ದೊಡೆ ಅಧಮ ವಿಪ್ರ ತೀರ್ಥ… ‘ನಾನು’ ಹೋದರೆ ನೀನು ಅಜರಾಮರ….. ಹೋಗದಿದ್ದೊಡೆ ಬರಿ ಪ್ರೇತಾ(ಜಾ )ವರ’ ಚಿನ್ನದಂಥಾ ಮಾತು ಅಡಿದೆ ಕಣೋ. ನಿನ್ನಿಂದ ಉಡುಪಿಯಲ್ಲಿದ್ದ ಒಂಟಿ ಮಠವು ಎಂಟು ಮಠಗಳಾಯ್ತು. ಕನಕನ ಕಿಂಡಿಯಿಂದಾಗಿ ಮಠಗಳಲ್ಲಿ ಕನಕ ವರ್ಷವೇ ಆಯಿತು. ಕಾವಿ ತೊಟ್ಟವರು ಕೋಟ್ಯಾಧಿಪತಿಗಳಾದರು. ಉಡುಪಿ ಪುಣ್ಯಕ್ಷೇತ್ರವಾಗಿದ್ದು ನಿನ್ನಿಂದ ಕಣೋ’ ‘ನನ್ನಿಂದಲ್ಲ ದೇವಾ. ನನ್ನಂತಪ ಹುಲುಮಾನವನಿಗೆ ನೀನು ಕಂಡಿದ್ದರಿಂದ.’ ‘ಅದ್ಸರಿ, ಜಾತಿವಾದಿ ಕರ್ಮಠರು ನಿನ್ನನ್ನು ಪೂಜೆ ಮಾಡ್ತಾರಲ್ಲಾ. ಇವರ ಗುಟ್ಟೇನು ಪರಮಾತ್ಮ!?’ ಕನಕ ಅಚ್ಚರಿಪಟ್ಟ,. ‘ಇದರಲ್ಲಿ ಗುಟ್ಟು ಏನು ಬಂತೋ. ವೇದ ಅವರದ್ದಲ್ಲ, ಗೀತೆ ಅವರದ್ದಲ್ಲ, ಮಹಾಭಾರತವಾಗಲಿ ಅವರು ಬರೆದದ್ದಲ್ಲ. ಗಾಯಿತ್ರಿ ಮಂತ್ರವೂ ಎರವಲು ಅಸಲು ಅವರು ಪೂಜಿಸೋ ನಾನಾಗಲಿ, ಶ್ರೀರಾಮನಾಗಲಿ ಅವರವನಲ್ಲ…. ‘ನಕ್ಕ ಪರಮಾತ್ಮ .’ ‘ಆವರ ಔದಾರ್ಯ ಪ್ರಶಂಸಾರ್ಹ ದೇವಾ’ ‘ಇದು ಔದಾರ್ಯವಲ್ಲ ಸ್ವಸೌಕರ್ಯ ಕಣೋ ಹಂಡೆ. ಮನುಷ್ಯ ಮಾತ್ರರಾದ ಮಧ್ವಚಾರಿ ಶಂಕರಾಚಾರಿಯಿಂದ ಅವರಿಗೆಂತ ಲಾಭವಿಲ್ಲವೋ ಮಾರಾಯ. ಕನಕನಿಂದ ಉಡುಪಿಗೆ ಮಧ್ವರಿಗೊಂದು ಬೆಲೆ ಇದೆ. ಶೃಂಗೇರಿಯಿಂದ ಶಂಕ್ರಾಚಾರಿಗೊಂದು ನೆಲೆ. ಇವರುಗಳ ವಿಗ್ರಹ ಇರಿಸಿದ್ದರೆ ಅಲ್ಲಿಗ್ಯಾವ ಗ್ರಹಗಳೂ ಕಾಲಿಡ್ತಾ ಇರಲಿಲ್ಲ. ಇವರ ಬೆಲೆ ಹೆಚ್ಚಿರೋದೇ ಶೂದ್ರ ದೇವರುಗಳಿಂದ ಕಣೋ.’ ‘ನಿನ್ನ ಮಾತಿಗೆ ಎದುರಾಡಲುಂಟೆ ದೇವ. ಇದನ್ನೆಲ್ಲಾ ಕೇಳಿ ನನ್ನ ಮಂಡೆ ಬಿಸಿಯಾಯ್ತು.’ ‘ಇನ್ನೂ ಒಂದು ಮಾತಿದೆ ಕೇಳು. ನೀನು ಕುರುಬನಲ್ಲ ಅಂತ ಈಗ ಸಂಶಯ ಶೋಧಕರು ತಕರಾರು ತೆಗೆದವರಲ್ಲೋ’ ನಿಂತಲ್ಲೇ ಕನಕ ಬೆವರೊಡೆದ. ‘ಕುಲ ಕುಲ ಕುಲವೆಂದು ಹೊಡೆದಾಡದಿರಿ ಎಂದ ನನ್ನ ಕುಲದ ಬಗ್ಗೆಯೇ ಪ್ರಶ್ನೆಯನ್ನು ಎತ್ತುವ ಕನಿಷ್ಠರನ್ನು ನಾನು ಸಹಿಸೆನು ದೇವ. ಇಂತಹ ಜಾತಿ ಪ್ರೇತಗಳೇ ತುಂಬಿರುವ ಲೋಕದಲ್ಲಿ ನನ್ನಂತವನಿಗೇನು ಕೆಲ್ಸ. ಕೂಡಲೆ ನಿನ್ನ ಒಡಲಲ್ಲಿ ಸೇರಿಸಿಕೋ ಪರಮಾತ್ಮ’ ಕಣ್ಣೀರಿಡಲಾರಂಭಿಸಿದ
ಕನಕ. ‘ಆಯಿತು ಬಾ ಕಂದ’ ಇಷ್ಟಗಲ ಬಾಯಿ ತೆರೆದ ಕೃಷ್ಣ ದೇವೇಗೋಡ್ರ ಪರಿ ಆಕಳಿಸುವ ಫೋಜ್ ಕೊಟ್ಟ.
*****
( ದಿ.೧೪-೦೮-೨೦೦೫)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವರದಾನ
Next post ಕರ್ಣಬಂದು ಕರ್ಬಲದಲಿ ಪಾರ್ಥಾ

ಸಣ್ಣ ಕತೆ

 • ಕೇರೀಜಂ…

  ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

 • ಮನೆಮನೆಯ ಸಮಾಚಾರ

  ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

 • ಹುಟ್ಟು

  ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

 • ವಿಷಚಕ್ರ

  "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

 • ಉಪ್ಪು

  ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

cheap jordans|wholesale air max|wholesale jordans|wholesale jewelry|wholesale jerseys