ಕರ್ಣಬಂದು ಕರ್ಬಲದಲಿ ಪಾರ್ಥಾ

ಕರ್ಣಬಂದು ಕರ್ಬಲದಲಿ ಪಾರ್ಥಾ
ವರ್ನಕಂಡು ಕದನಕ ನಿಂತ ಸು-       ||ಪ||
ವರ್ಣಪೀಠ ಮದೀನ ಶಾರದಿ
ಪರ್ವ ಅಶ್ವನೇರಿದನೆಂತು             ||ಅ.ಪ.||

ಭಾಪುರೆ ಅರ್ಜುನ ತಪ್ಪಿಸಿ ಹರಿತ
ವರ್ನ ಕೋಪ ತಿಳಿ ಕುರುಕ್ಷೇತ್ರದಲಿ
ಭಾಪುರೆ ನಿನ್ನನು ಹುಡಕುತ ಬಂದೆನು
ಛೇತಕಿ ಪಾತಕಿ ಕ್ಷತ್ರಿಯರಲ್ಲಿ            ||೧||

ಹಸೇನಿ ಹುಸೇನಿ ಎರಡರ ಮಧ್ಯದಿ
ಬಂದು ಸಿಕ್ಕಿಯೋ ಸಮರದಲಿ
ಸಮ್ಮುಖದಿ ಕೇಶವನ ಸಹಾಯಕೆ
ಬಂದನು ಏಕಕಾಲದಲ್ಲಿ                || ೨ ||

ಹ್ಯಾಂಗ ಮರಣ ತರಬೇಕೆನುತಲಿ ಹರಿ
ಬ್ಯಾಗ ಬ್ರಾಹ್ಮಣನ ರೂಪಾಗಿ
ಆಗ ಬಾಕಿಲಿಂದ ಬಗಿದು ಚಲ್ಲಿದನು
ಆರ್ಜುನ ಶರದಿ                     || ೩ ||

ವಸುಧಿಯೊಳಗ ಹೊಸದಾದ ರಿವಾಯತ
ಕರ್ಣಪರ್ವ ಐಸುರದಿ
ರಸಿಕರೆಲ್ಲರು ಕರ್ಬಲದಾಟಕ
ದಶದಿನ ಹಾಡಿರಿ ಸಂತೋಷದಿ
ಉಸುರಿದ ಮೊಹರಮ್ಮ ಹಬ್ಬದೊಳಗೆ
ಶಿಶುನಾಳಧೀಶನ ಹೆಸರುಗೊಂಡು ಪೇಳರಿ ಮುದದಿ ||೪|

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುರುಬರು ನಿನ್ನ ಮರೆತೇಬಿಟ್ರಲ್ಲೋ ಕನಕ…!
Next post ನಗೆ ಡಂಗುರ – ೫೮

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…