ವರನನ್ನು ಗೊತ್ತು ಮಾಡಿ ಮದುವೆ ಮಾಡಿದರು ಮಗಳಿಗೆ. ಪುರೋಹಿತರು ಲಗ್ನ ನಿಶ್ಚಿತವಾಗುವಾಗ ಈ ವರನಿಗೆ ೩೬ ಗುಣಗಳಲ್ಲಿ ೩೪ ಗುಣಗಳು ಉತ್ತಮವಾಗಿವೆ. ಇನ್ನು ಎರಡು ಏನು ಮಹಾ ಲೆಕ್ಕ? ಎಂದು ಮದುವೆ ಕುದುರಿಸಿದರು. ಲಗ್ನ ಸಮಾರಂಭವೆಲ್ಲಾ ಮುಗಿದ ಮೇಲೆ ಪುರೋಹಿತರನ್ನು ಮಗಳ ತಂದೆ “ಆ ಎರಡು ಅವಗುಣಗಳು ಯಾವುವು ಎಂದು ತಿಳಿಯಬಹುದೆ? ಎಂದು ಕೇಳಿದರು.”
ಪುರೋಹಿತರು: “ಒಂದು ಗುಣ ಕಿವಿಕೇಳಿಸದಿರುವುದು; ಇನ್ನೊಂದು ಗುಣ, ಮಾತನಾಡಲು ಬರದೇ ಇರುವುದು.”
ತಂದೆ: “ಹಾಂ:!”
***