ಹೊಸತು ಹೊಸತು ಬರಲಿ
ಹೊಸತಾದ ಚಿಗುರು ಬರಲಿ||

ಹೊಸತಾದ ಬಂಧ ಇರಲಿ
ಹೊಸತಾಗಿ ನಾಳೆಯು ಬರಲಿ||

ನೆನ್ನೆಯ ಚಿಂತೆ ನೆನ್ನೆಗೆ
ಕಳೆಯಲಿ ಇಂದಿನ
ಚಿಂತೆ ಇಂದಿಗೆ ಕರಗಲಿ||

ಮನಸ್ಸು ಮನಸ್ಸು ಹೊಸತಾದ
ಕನಸು ನನಸಾದ ಬಾಳು
ಸೋಲೆಂದು ಗೆಲುವ ಕಾಣಲಿ||

ಮನದ ಮಾತಿದು ನಿಜದ ಮಾತಿದು
ಸುಪ್ತ ಸೆಲೆಯು ಲೋಕದ ಬದುಕಿದು

ಬಣ್ಣದ ಗಾಳಿಪಟವು
ಚಿತ್ತಾರ ಬರೆದ ನೋಟವು
ಹೊಸತಾದ ಗೀತೆಗೆ ನಾಂದಿ ಹಾಡಲಿ||
*****