ನಾಸ್ತಿಕರು ದೇವರಂಗಳಕೆ ಬಂದಿದ್ದಾರೆ ಪರೀಕ್ಷಿಸಲು ಎಲ್ಲೆಲ್ಲೂ ಧೂಪ ದೀಪ ಹೂವು ಹಣ್ಣು ಅನಾಮಿಕರ ದೈವ ಕಳೆ ನೋಡಿ ಕದ್ದು ಪ್ರಸಾದ ತಿಂದು ಹೊರ ಬೀಳುತ್ತಾರೆ ಆಸ್ತಿಕರಾಗಿ. *****...

ಬಾರಿನಲ್ಲಿ ಅರ್ಧತುಂಬಿದ ಗ್ಲಾಸಿನ ಮೂಲಕ ಹಾದುಬರುವ ವಿದ್ಯುದ್ದೀಪದ ಅಪೂರ್ವ ಹೊಂಬಣ್ಣದ ಬಗ್ಗೆ ಹೇಳುತ್ತಿಲ್ಲ ನಾನು.  ಅಥವ ಮಾಗಿಯ ಹಣ್ಣಾದ ಭತ್ತದ ತೆನೆಗಳ ಮೇಲೆ ಬೀಳುವ ಮುಸ್ಸಂಜೆಯ ಬಗ್ಗೆಯೂ ಅಲ್ಲ.  ನಾನು ಸುವ್ಯವಸ್ಥಿತವಾದ ಹಳದಿ ಬಣ್ಣದ ಬಗ್ಗೆ ...

ಎಷ್ಟು ದಿನ ಕಳೆದರೂ ಅಷ್ಟೇ ಕರೆದಿಟ್ಟ ನೊರೆ ಹಾಲಿನಂತೆ ಹೊಚ್ಚ ಹೊಸದೆನಿಸುತ್ತದೆ ಮೈತುಂಬಿ ಹರಿವ ಹೊಳೆಮೇಲೆ ಹೊಳೆ ಹೊಳೆವ ಈ ಹುಣ್ಣಿಮೆಯ ಬೆಳದಿಂಗಳು; ಕೊಳೆಯುತ್ತಾ, ಸವೆಯುತ್ತಾ ಮುದಿಯಾಗಿ ಮಸಣದೆಡೆಗೆ ಹೆಜ್ಜೆಯಿಡುತ್ತಾ ಹೋಗುತ್ತೇವೆ ನಾವು ಕಳೆದಂ...

ಹೊಲಿಗೆ ಯಂತ್ರವನ್ನು ತುಳಿಯುತ್ತಾ ಜಲಜ ಯೋಚಿಸತೊಡಗಿದಳು. ಯೋಚನೆಗಿಳಿದರೆ ಅವಳಿಗೆ ಹೊಲಿಗೆ ಯಂತ್ರದ ಸದ್ದು ಪಕ್ಕವಾದ್ಯದ ಹಾಗೆ ಕೇಳಿಸುತ್ತಿತ್ತು. ಒಮ್ಮೊಮ್ಮೆ ಲಹರಿ ಬಂದರೆ ಸಣ್ಣದಾಗಿ ಅವಳು ಹಾಡಿಕೊಳ್ಳುವುದಿತ್ತು. ಆಗ ಯಾರಾದರೂ ಗಿರಾಕಿಗಳು ಬಂದರ...

“ರಾತ್ರಿ ಹಗಲು ಎರಡೂನೂ ಒಂದರ ಹಿಂದೆ ಮತ್ತೊಂದು ಬರ್‍ತಾನೇ ಇರ್‍ತಾವೆ, ಯಾತಕ್ ಆ ಥರ ಮಾಡ್ತಾವೆ?” “ರಾತ್ರಿ ಹಗಲು ಮಾತ್ರಾನೇ ಆ ಥರ ಸುತ್ತೋದಲ್ಲಣ್ಣ, ಇಡೀ ಜಗತ್ತೇ ಆ ರೀತಿ ಸುತ್ತು ಹಾಕ್ತಾ ಇದೆಯಣ್ಣ! ಬೇಸಿಗೆಯಾಯ್ತೋ ಮಳೆಗಾ...

ಕಾರು ತುಂಬಾ ವೇಗವಾಗಿ ಅಂದರೆ ೬೦ಕಿಮಿಗೂ ಹೆಚ್ಚು ವೇಗವಾಗಿ ಓಡುತ್ತಿತ್ತು. ಪೋಲೀಸಿನವ ಬೆನ್ನಟ್ಟಿ ಆ ಕಾರನ್ನು ನಿಲ್ಲಿಸಿ ದ್ರೈವರ್‍ನನ್ನು ತರಾಟೆಗೆ ತೆಗೆದುಕೊಂಡರು. “ನಿಮ್ಮ ಮೇಲೆ ಅತಿವೇಗದ ಕಾರಣ ಕೇಸ್‍ಹಾಕುತ್ತಿದ್ದೇನೆ. ನಿಮ್ಮಹೆಸರು ಹ...

ಬಚ್ಚಬರಿಯ ಬೆಳಗ ನೋಡಿಹೆನೆಂದು, ಮನೆಯಾತನ ಮಂಕು ಮಾಡಿದೆ. ಭಾವನ ಬಯಲು ಮಾಡಿದೆ. ಕಂದನ ಕಣ್ಣು ಮುಚ್ಚಿದೆ. ನಿಂದೆ ಕುಂದುಗಳ ಮರೆದೆ. ಜಗದ ಹಂಗ ಹರಿದೆ. ಜಂಗಮದ ಪಾದೋದಕ ಪ್ರಸಾದವ ಕೊಂಡ ಕಾರಣದಿಂದ ಮಂಗಳದ ಮಹಾಬೆಳಗಿನಲ್ಲಿ ಓಲಾಡಿ ಸುಖಿಯಾದೆನೈಯ್ಯ ಅಪ...

ಸೃಷ್ಟಿಯಲಿ ಚೆಲುವು ದೃಷ್ಟಿಯಲಿ ಚೆಲುವು ಕಳೆಯಲ್ಲಿ ಚೆಲುವು ಬೆಳೆಯಲ್ಲಿ ಚೆಲುವು ಮರಮರವು ಚಿಗುರು ನಗುತಿರುವ ಚೆಲುವು ಮೈತುಂಬ ಸೀರೆಯಂತೆ ಬಿಳಿಹಳದಿ ಕೆಂಪು ತರತರದ ಕಂಪು ಮುಖವರಳಿ ನಗುವಳಂತೆ ಆಕಾಶದಲ್ಲಿ ನೀರನ್ನು ಹೊತ್ತು ಮೋಡಗಳು ಸಾಗುತಿಹವು ತಲ...

ಇಂತಹ ಸಂದಿಗ್ಧ ಪರಿಸ್ಥಿತಿ ಎದುರಾದೀತೆಂದು ಸ್ವತಃ ಶಿವಮೂರ್ತಿ ಶರಣರೇ ಊಹಿಸಿರಲಿಕ್ಕಿಲ್ಲ. ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ಬಸವವಾಣಿ ಅದೆಷ್ಟು ತೂಕವುಳ್ಳದ್ದು ಎಂಬ ಸತ್ಯ ಗೋಚರವಾಗಿರಲಿಕ್ಕೂ ಸಾಕು. ಹಾವೇರಿ ಮಠದಲ್ಲಿ ಹಾಯಾಗಿದ್ದ ಶರಣರು ೧...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....