ಎಳೆದೂ, ಎಳೆದೂ ಇರುಳು, ತೂಗಿ ತಡೆದೂ ಬೆಳಗು, ನನ್ನೀ ಕೈಹಿಡಿದವಳು ಹಾಸಿಗೆ ಹಿಡಿದಿರಲು. ಓಡಿಸಲಳವೇ ಚಿಂತೆ, ಬಿಡುವೇ ಬಳಲಿಕೆಗೆ, ನನ್ನೀ ಜೀವದ ಕಣ್ಣು ಹಾಸಿಗೆ ಹಿಡಿದಿರಲು? ಎಳೆದೂ, ಎಳೆದೂ…. ಭರವಸೆ ಒಂದೂ ಇಲ್ಲ; ಅಂಜಿಕೆ ಭಯವೇ ಎಲ್ಲ. ಕಣ್...

ಪಡುವಣ ದಿಗಂತದಲಿ ಅಗ್ನಿದೇವನ ಒಂದು ಕಾಲ್ಚೆಂಡು ಮೇಲ್ಹಾರಿ ಕೆಳಬೀಳ್ವುದೊ! ಬ್ರಹ್ಮಗಿರಿ ಎಂದೆಂಬ ಬೆಟ್ಟದಾ ಅರುಗಾಗಿ ದಿನಕರನು ಇಣಿಕಿಣಿಕಿ ಮರೆಸೇರ್ವನೊ! ಎಲ್ಲಿಂದ ಯಾವೆಡೆಗೆ?  ಯಾವೂರು ಪೋಗ್ವನೊ ಅಗ್ನಿಯಾ ಚಂಡು ಈ ಕೆಂಬಣ್ಣದೀ; ಪಡುವಣದ ಪ್ರಾಂತದ...

ನಾನೊಂದು ಹಾಳೂರಿಗೆ ಹೋದರೆ, ಅಲ್ಲಿ ನಾಯಿಗಳು ಅಟ್ಟಿಕೊಂಡು ಬಂದವು. ಹುಲಿಕರಡಿ ಅಡ್ಡಲಾದವು. ಇವ ಕಂಡು ನಾ ಹೆದರಿಕೊಂಡು, ನನ್ನ ಕೈಗೊಂದು ಕಲ್ಲು ತಕ್ಕೊಂಡು ನೋಡುತ್ತ ಬರುತಿರಲು, ಆ ನಾಯಿಗಳು ಓಡಿದವು. ಹುಲಿಕರಡಿಗಳೂ ಅಲ್ಲಿಯೇ ಬಯಲಾದವು. ಆ ಊರು ನಿ...

ಮೋಡ ಬಸಿರಿನೊಳಗೆ ಹೂತಿಟ್ಟ ಬಯಕೆಗಳು ಒಂದೊಂದಾಗಿ ಸುಡುತ್ತ ಬೂದಿಯಾಗುವಾಗ ಫಳಾರನೆ ಹೊಡೆಯುವ ಸಿಡಿಲಿನ ಶಬ್ದಕ್ಕೆ ಹೊಟ್ಟೆಯೊಡೆದು ಹನಿ ಹನಿಗುಡುತ್ತ ಸುರಿಯುತ್ತಿದ್ದಂತೆಯೇ ತೊಳೆಯುತ್ತದೆ ಹಕ್ಕೆ ಗಟ್ಟಿದ ಮನಸನ್ನು ಮಳೆ ಎಂದರೆ ಪ್ರೀತಿ ನನಗೆ &#821...

ನೆರಳನರಸುವ ಕೂಸು ತನ್ನ ಎಳೆ ಕೈಗಳಲಿ ಅದ ಹಿಡಿದು ತನ್ನೊಡನೆ ಆಟಕುಪಯೋಗಿಸುವ ಎಳೆ ಚಪಲಕೀಡಾಗಿ-ಹಿಗ್ಗಿನಲಿ ಓಡುತಲಿ ಅದರೆಡೆಗೆ ನಡೆದಾಗ, ನೆರಳು ಕೈಗಳ ಹಿಡಿತ ತಪ್ಪಿಸುತ ಜಾರಿರಲು, ಕಣ್ಣೀರ ಕರೆಯುತ್ತ ತಾಯ ಮಡಿಲಲಿ ತನ್ನ ದುಗುಡ ಹರಿಸುವ ಹಾಗೆ, ಸಂತ...

ಪ್ರಿಯ ಸಖಿ, ನನ್ನಿಂದೇನು ಸಾಧ್ಯ ? “ನಾನು ಅತ್ಯಂತ ನಿಕೃಷ್ಟ ಜೀವಿ” ‘ನನ್ನಿಂದ ಯಾರಿಗೂ ಏನೂ ಪ್ರಯೋಜನವಿಲ್ಲ’ ಎಂದು ಹಲುಬುವ ನಿರಾಶಾವಾದಿಗಳನ್ನು ನಮ್ಮ ಸುತ್ತಮುತ್ತ ಕಾಣುತ್ತಲೇ ಇರುತ್ತೇವೆ. ಇಂತಹವರನ್ನು ಕಂಡೇ ಇರಬೇಕು ಕವಿ ಎಸ್....

ಅಪ್ಪ ಅಮ್ಮ ಎಲ್ಲಾರ್‍ಗಿಂತ ಅಜ್ಜಿ ನಂಗೆ ಇಷ್ಟ ಅಜ್ಜಿಗೂನು ಅಷ್ಟೆ ನಾನು ಇಲ್ದೆ ಹೋದ್ರೆ ಕಷ್ಟ. ಗಲ್ಲ ಹಿಂಡಿ ಮುದ್ದು ಮಾಡಿ ಚುಕ್ಕು ಬಡಿದು ತೊಡೇಲಿ, ನಿದ್ದೆ ಬರ್‍ಲೇ ಬಿಡ್ತಾಳಜ್ಜಿ ಕಥೆ ಹೇಳ್ತಾ ಕಡೇಲಿ! ನನ್ ಗೊಂಬೇಗೂ ಸ್ನಾನ ಮಾಡ್ಸಿ ಬಟ್ಟ ತೊಡ...

“ಗಂಡಯ್ಯ, ಗಂಡಯ್ಯ, ಬಿಡು ನಿನ್ನ ಚಿಂತೇಯ? ಪರದಾಟ ಸಾಕಿನ್ನು, ಮಹರಾಯ! ನಾ ನಿನ್ನ ಕೈಹಿಡಿದ ಹೆಂಡತಿಯೆ ಆಗಿರಲಿ,- ನಿನ್ನ ಮನೆಯಾಳಲ್ಲ ಸ್ವಾಮಿ !” ಎರಡರಲಿ ಒಂದೇನೊ ಆಳಾಗಿ ಇರಬೇಕು, ನನ್ನ ಚಿನ್ನಾ, ಓ ನನ್ನ ಚಿನ್ನಾ! ಆ ಆಳು ಗಂಡಿರಲ...

ಕರ್ಮದ ಬಾಳಿಗೆ ಮಣ್ಣಿಟ್ಟು ನೋಡಿದೆ ಜೀವದ ಒಳಗುಟ್ಟು! ಧರ್ಮಕೆ ಕಸಿಯನು ನಾ ಮಾಡಿ ತಿಂದೆನೊ ಪಾಪದ ಹಣ್ಣು ಇಡಿ; ಮೂಡಲ ಸೂರ್ಯನು ಅಲ್ಲಿರನು ಮನುಜನು ಬುದ್ದಿಯ ತಾಳಿರನು! ಗಂಟೆಯ ಮುಳ್ಳದು ತಿರುಗಾಡಿ ಲೋಕಕೆ ಕಲಿಪುದು ಬಲುಮೋಡಿ. ಸುತ್ತಲು ಮಂಜಿನ ನೆನ...

ಬೈಲು ಬಯಲಲ್ಲಿ ಒಂದು ಮೃಗವು ಹುಟ್ಟಿತ್ತು. ಅದ ಕಂಡಹೆನೆಂಬರಿಗೆ ಕಾಣಬಾರದು. ಹೆಳಿಹೆನೆಂಬರಿಗೆ ಹೇಳಬಾರದು. ಅದು ಚಿದ್ರೂಪ ಚಿನ್ಮಯವು. ಅದು ಗೊತ್ತ ಮೆಟ್ಟಿ ಆಡುವದನರಿಯದೆ, ಕತ್ತಲೆಯಲ್ಲಿ ಮುಳುಗಿ ಕಾಮನ ಬಾಧೆಗೆ ಶಿಲ್ಕಿ ಎತ್ತಲೆಂದರಿಯದೆ, ಭವಬಂದನದ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....