ಅವರು ಕೆಮಿಸ್ಟ್ರಿ ಪ್ರೊಫೆಸರ್. ಅವರ ಶಿಷ್ಯನೊಬ್ಬ ಓಡೋಡಿ ಬಂದು `ಸಾರ್ ನಿಮ್ಮ ಪತ್ನಿ ಬಾವಿಯಲ್ಲಿ ಬಿದ್ದು ಬಿಟ್ಟಿದ್ದಾರೆ. ಎಲ್ಲರೂ ಬಾವಿಯ ಬಳಿ ಗುಂಪುಗಟ್ಟಿದ್ದಾರೆ, ತಕ್ಷಣ ಬನ್ನಿ ಸಾರ್’ ಎಂದ. ಅವರು ಹೇಳಿದರು- `ಯಾವುದೇ ಶರೀರ ನೀರಿನಲ್...

ಮರೆಯಲಾರೆ ನಿನ್ನ ನೀರೆ ಮರೆಯಲಾರೆ ಜನ್ಮಕೆ ಮರೆತು ಹೇಗೆ ಬಾಳಬಹುದೆ ಆತ್ಮ ಮರೆತು ಅನ್ನಕೆ? ದೊರವಾದರೇನು ನೀನು ದೂರ ತಾನೆ ಸೂರ್ಯನು? ಭಾವನೆಯಲಿ ಕೂಡುವೆ ನೀ ಕಿರಣದಂತೆ ನನ್ನನು ಯಾರು ಜರಿದರೇನು ನೀನೆ ಸಾರ ನನ್ನ ಜೀವಕೆ ಕನಸಿನಲೆಯ ಏರಿ ಬಂದು ಉಣಿಸ...

ಈಗಷ್ಟೇ ನಡುರಾತ್ರಿ ಬಿ.ಪಿ. ಸದ್ದುಗಳೆಲ್ಲ ಒಂದೊಂದಾಗಿ ಅಡಗುತ್ತಿವೆ ಬ್ರೇನ್ ಹೆಮರೇಜಕ್ಕೆ ಹತ್ತಿರವಿದ್ದ ಉದ್ಯಮಿಗಳು ಇನ್ನೂ ಲೆಕ್ಕಾಚಾರದಲ್ಲಿದ್ದಾರೆ ಇರಲಿ ನಾಳಿನ ಜಗಳಕ್ಕೆಂದು ಹೊಸಪದಗಳಿಗೆ ಹುಡುಕಾಡುವ ಬುದ್ದಿ ಜೀವಿಗಳು ನೆತ್ತಿಯೊಳಗೆ ಕಣ್ಣಿಟ...

ಮಡಿವಂತ ಆರೆಸೆಸ್ಸು ಮುಂದಾಳುಗಳ ಮೂಗುಬೊಟ್ಟಿನ ಪ್ರಕರಣಗಳಂತೂ ಕಂಡೊ ಕಾಣದಂತೆ ಆಗಾಗ ಸ್ಫೋಟಗೊಂಡು ಸ್ತಬ್ಧವಾಗೋದು ಮಾಮೂಲಿ ವಿಷಯಬಿಡ್ರಿ. ಶ್ರೀರಾಮಚಂದ್ರನ ಡೂಪ್ಲಿಕೇಟ್ ಎಂದೇ ಹೆಸರಾದ ವಾಜಪೇಯಿಯೇ ನಾನು ಬಹ್ಮಚಾರಿ ಅಲ್ಲಃ ಅವಿವಾಹಿತ ಎಂದು ಬೋಲ್ಡ್ ...

ಪುರುಷೋತ್ತಮ ಯಶವಂತ ಚಿತ್ತಾಲರು ಇನ್ನಿಲ್ಲ. ಇಂದಿನ ಪ್ರಜಾವಣಿಯ ಮುಖಪುಟದಲ್ಲಿ ಅವರ ನಿರ್ಗಮನದ ಸುದ್ದಿಯನ್ನು ಓದಿ ಮನಸ್ಸು ನೆನಪಿನ ಸುರುಳಿ ಬಿಚ್ಚಿ ೨೦೦೬ನೆ ಇಸವಿಯ ಡಿಸೆಂಬರ್ ಮಾಹೆಯ ಒಂದು ಇಳಿಸಂಜೆಯ ಮೆಲುಕು ಹಾಕಲಾರಂಭಿಸಿತು. ಅಂದು ನಾನು ಇಂದು...

ರೆಕ್ಕೆ ಬಲಿಯುವ ಮೊದಲೇ ಕತ್ತರಿಸಿ ಉಗುರು ಕೊಯ್ದು ಕೊಕ್ಕ ಬಂಡೆಗೆ ಕುಕ್ಕಿಸಿ ಮೊಂಡಾಗಿಸಿ ಹೀಗೆ ಬೆಳೆಸಿ ಬಿಟ್ಟರು-ಬೆಳೆಯ ಬಿಟ್ಟರು ಕಣ್ಣು ಕಟ್ಟಿ ಕಾರಡವಿಯಲ್ಲಟ್ಟಿ ಬಿಟ್ಟರು ಹೂಮಾಂಸವನರಳಿಸಿಕೋ ಎಂದು ಹದ್ದುಗಳಿಗಿಟ್ಟರು ಹುಲ್ಲಂತೆ ಬಾಗೆಂದು ಬೆನ...

ಹಾಗೆ ನೋಡಿದರೆ ಅವರೆಲ್ಲ ಕೊಲ್ಲಿದೇಶಗಳಿಗೆ ಹೋಗಿ ಸಾಕಷ್ಟು ಹಣಗಳಿಸಬೇಕೆಂದು ಕನಸು ಕಂಡವರೇ ಅಲ್ಲ. ತುತ್ತು ಅನ್ನಕ್ಕಾಗಿ ಚೂರು ರೊಟ್ಟಿಗಾಗಿ ಎಲ್ಲೆಲ್ಲಿಯೋ ಮುಸುರೆ ತೊಳೆಯುವ ಹಮೀದಾ, ಅವಳ ಮಗಳು ಸಾರಾ ದಿನನಿತ್ಯ ದುಡಿದು ಒದ್ದೆ ಬಟ್ಟೆಗಳಿಂದ ಕಾಲು...

ಜಗದ ಜನಶಕ್ತಿಗೆ ನಮೋ ನಮೋ || ಬಣ್ಣದಾಟದ ನೆಲೆಗೆ ನಮೋ ನಮೋ || ಕಲಾ ಸ್ವಾದಕನಿಗೆ ನಮೋ ನಮೋ || ಕಲಾ ಪ್ರೋತ್ಸಾಹಕನಿಗೆ ನಮೋ ನಮೋ || ಧನ್ಯತೆಯಿಂ ಕೈಮುಗಿವೆ ಎನ್ನೆದುರಿನ ಜನಶಕ್ತಿಗೆ ನಮೋ ನಮೋ ಎನ್ನುವೆ ಎನ್ನೆದುರಿನ ಮನಶಕ್ತಿಗೆ ನಮೋ ನಮೋ ನಮೋ ನಮೋ...

ಎಂಥ ಚೆಲುವೆ ನನ್ನ ಹುಡುಗಿ ಹೇಗೆ ಅದನು ಹೇಳಲಿ? ಮಾತಿನಾಚೆ ನಗುವ ಮಿಂಚ ಹೇಗೆ ಹಿಡಿದು ತೋರಲಿ? ಕಾಲಿಗೊಂದು ಗಜ್ಜೆ ಕಟ್ಟಿ ಹೊರಟಂತೆ ಪ್ರೀತಿ, ಝಲ್ಲೆನಿಸಿ ಎದೆಯನು ಬೆರಗಲ್ಲಿ ಕಣ್ಣನು ಸೆರೆಹಿಡಿವ ರೀತಿ. ಬೆಳಕೊಂದು ಸೀರೆಯುಟ್ಟು ತೇಲಿನಡೆವ ರೂಪ, ಗ...

ನೆತ್ತಿಗೆ ಹರಳೆಣ್ಣೆಯ ಹಬ್ಬವೆ? ಅಮವಾಸೆಯ ಕಗ್ಗತ್ತಲು ನಮಗೆ ನಾವೇ ಕಾಣಿಸಲಾರೆವು ಕಣ್ಣು ಮುಚ್ಚದೇ ಇದ್ದರೂ ಮುಚ್ಚಿದಂತೆ ಅಡ್ಡಾಡದಿದ್ದರೂ ಎಡುವಿದಂತೆ ತಂಗಾಳಿ ಇರದಿದ್ದರೂ ಚಳಿಹತ್ತಿದಂತೆ ಶಾಂತವಾಗಿದ್ದರೂ ಎಲ್ಲೋ ಸದ್ದಾಗುತ್ತಿದ್ದಂತೆ ಯಾರೂ ಮಾತನ...

1...1314151617...37

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...