ಸಂಗಪ್ಪನೇನೋ ರಾಜೇಂದ್ರ ಬರೆದ ಪದ್ಯಗಳನ್ನು ಸುಟ್ಟ; ಆದರೆ ರಾಜೇಂದ್ರನಂಥ ಜನರ ಮನಸ್ಸಿನಲ್ಲಿರೊ ಆ ಸತ್ವವನ್ನು ಸುಡೋದು ಅವನಿಂದ ಹೇಗೆ ಸಾಧ್ಯ? ಪ್ರತಿಭಟನೆಯ ಶಕ್ತಿ ಅದು ನಿಜಕ್ಕೂ ಪ್ರಾಮಾಣಿಕವಾಗಿದ್ದರೆ ಇಂಥ ದಬ್ಬಾಳಿಕೆಗಳನ್ನು ಎದುರಿಸುವ ಮತ್ತಷ್ಟ...

“ಗುರುಗಳೇ! ನಾ ಪರಮ ಭಾಗ್ಯವಂತ.” ಎಂದು ಅತ್ಯಂತ ಸಂತೋಷದಿಂದ ಶಿಷ್ಯ ಮೇಲು ಧ್ವನಿಯಲ್ಲಿ ಹೇಳಿದ. “ನಿನ್ನ ಸಂತೋಷಕ್ಕೆ ಕಾರಣವೇನು? ಶಿಷ್ಯಾ” ಎಂದು ಕೇಳಿದರು. “ನಾನು ಬುದ್ಧನನ್ನು ಹುಡುಕಿ ಹೋದದ್ದು ನಿಮಗೆ ಗೊತ್ತಿದೆಯಲ್ಲವೇ.” “ಅಹುದ...

ಅಧ್ಯಾಯ ಹನ್ನೆರಡು ಮಧ್ಯಾಹ್ನ ಸುಮಾರು ಮೂರನೆಯ ಝಾವದ ಕೊನೆಯಿರಬಹುದು. ದರ್ಬಾರು ಭಕ್ಷಿಯವರು ಆಚಾರ್ಯರನ್ನು ಕಾಣಲು ಬಂದಿದ್ದಾರೆ. ಆಚಾರ್ಯರಿಗೆ ಆದಿನ ಉಸವಾಸ. ಸಾಮಾನ್ಯವಾಗಿ ಆವರ ಶಿಷ್ಯರಲ್ಲದೆ ಇನ್ನು ಯಾರೂ ಆದಿನ ಅವರನ್ನು ನೋಡುವಂತಿಲ್ಲ. ಆದರಿಂದ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದ...

ಹಿಂದಿನ ಘಟನೇನೆ ಮುಂದುವರಿಸಿ ಸೀನಣ್ಣನ ವಿಚಾರಕ್ಕೆ ಬರಬಹುದು ಅಂತ ನೀವು ಭಾವಿಸಿದ್ದರೆ ನಿರಾಶೆಯಾಗುತ್ತೆ. ಇಷ್ಟಕ್ಕೂ ನೀವು ಹಾಗೆ ಭಾವಿಸಿದ್ದೀರಿ ಅಂತ ನಾನ್ಯಾಕೆ ಭಾವಿಸಲಿ ? ಯಾವುದೋ ಬರವಣಿಗೆಗೆ ತನ್ನದೇ ಆದ ಒಂದು ಚೌಕಟ್ಟು ಇರುತ್ತೆ ಮತ್ತು ಅದರ...

ತೆಂಗಿನ ತೋಪಿನಲ್ಲಿ ಬೀಡು ಬಿಟ್ಟಿದ್ದ ಗುರುಗಳ ಬಳಿ ಹಲವಾರು ಶಿಷ್ಯರು ಇದ್ದರು. ಒಬ್ಬರಿಗಿಂತ ಒಬ್ಬರು ವಾಚಾಳಿಗಳು, ಗುರುಗಳ ಬಳಿ ಬಂದು ಒಬ್ಬ ಶಿಷ್ಯ ಒಂದು ಪ್ರಶ್ನೆ ಕೇಳಿದ. “ಗುರುಗಳೇ! ಇದೇಕೆ, ತೆಂಗಿನಮರ ಇಷ್ಟು ಎತ್ತರ ಬೆಳದಿದೆ? ಇದು ಅ...

ಅಧ್ಯಾಯ ಹನ್ನೊಂದು ಯಥಾಕಾಲದಲ್ಲಿ ಭರತಾಚಾರ್ಯರು ಸಶಿಷ್ಯರೂ, ಸಮಿತ್ರರೂ ಆಗಿಬಂದು ಸುಲ್ತಾನರನ್ನು ಕಂಡರು. ಸುಲ್ತಾನರು ಅವರುಗಳಿಗೆಲ್ಲ ಪರಮಪ್ರೀತಿಯಿಂದ ಬೇಕಾದ ಉಪಚಾರಗಳನ್ನು ಮಾಡಿ ಬರಮಾಡಿಕೊಂಡರು. “ನಾವು ತಮ್ಮ ಖ್ಯಾತಿಯನ್ನು ಕೇಳಿದ್ದೆವು. ತಮ್ಮ...

ಶೋಭಾ, ನಿನ್ನ ಎಲ್ಲಾ ಕಾಗದಗಳೂ ತಲುಪಿವೆ. ಓದುತ್ತಲೂ ಇದ್ದೇನೆ. ‘ತಂಪೆರೆಯುವ ನಿನ್ನ ಕಾಗದಗಳನ್ನು ದಿನಾ ಎದುರು ನೋಡುತ್ತಿರುತ್ತೇನೆ. ಅಬ್ಬಾ! ಎಷ್ಟು ಪ್ರಶ್ನೆಗಳನ್ನು ಕೇಳಿದ್ದೀಯಾ? ಬರೆಯುವ ಶಕ್ತಿ ಬರಲೀಂತ ಕಾಯ್ತಾ ಇದ್ದೆ. ಮಾನಸಿಕ ವಿಪ್ಲವದಲ್ಲ...

ಚತುರ ಸಿಂಹ ಸಾಹಸಿ ಸಂಗಪ್ಪನಿಗೆ ಊರ ಹತ್ತಾರು ಜನರ ಎದುರು ಹೀಗೆ ಅವಮಾನವಾದ ಮೇಲೆ ಮುಂದಿನ ಕಾರ್ಯಾಚರಣೆ ಏನಿರಬಹುದು ಅಂತ ನಿಮಗೆಲ್ಲ ಕುತೂಹಲ ಬಂದಿದ್ದೀತು; ಅಧ್ವಾನದ ಆಂಗ್ಲ ಬಯ್ಗಳಿಗೇ ಸಂಗಪ್ಪನ ಸಾಹಸವನ್ನು ಸೀಮಿತಗೊಳಿಸಿದರಲ್ಲ ಅಂತ ನಿರಾಶೆಯೂ ಆಗ...

ಒಂದು ಕಂಬಳಿ ಹುಳು ತೆವಳಿಕೊಂಡು ಬಂದು ಬುದ್ಧನ ಪಾದ ಪದ್ಮದಲ್ಲಿ ಬಂದು ನಿಂತಿತು. “ಬುದ್ಧ ದೇವ! ಈ ಕರಿ ಕಂಬಳಿ ನನ್ನ ಬಾಳಿಗೆ ಮುಸಿಕಿನ ತೆರೆಯಾಗಿದೆ. ಇದರ ಬಂಧನದಿಂದ ನನ್ನ ಮುಕ್ತನಾಗಿ ಮಾಡು” ಎಂದು ಆರ್ತವಾಗಿ ಬೇಡಿಕೊಂಡಿತು. ಬುದ್ದ ಮುಗು...

1...1112131415...144

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...