Home / ಕಥೆ / ಕಾದಂಬರಿ / ಮಲ್ಲಿ – ೪೭

ಮಲ್ಲಿ – ೪೭

ಬರೆದವರು: Thomas Hardy / Tess of the d’Urbervilles

ಗಾಂಧಿಯವರು ಬೆಂಗಳೂರಿನಲ್ಲಿ ಇದ್ದಷ್ಟು ದಿನವೂ ನಾಯಕನು ಸಪತ್ನೀಪುತ್ರನಾಗಿ ಅಲ್ಲಿಯೇ ಇದ್ದನು. ದಿನವೂ ಅವರೆಲ್ಲರೂ ಭಜನೆಗೆ ಹೋಗುವರು. ನರಸಿಂಹಯ್ಯನು ಆ ಹೊತ್ತಿನಲ್ಲಿ ಮಾತ್ರ ಅವರ ಜೊತೆಯಲ್ಲಿ ಇರುವನು. ಮಿಕ್ಕ ಹೊತ್ತು ಅವನೆಲ್ಲಿಯೋ ಹೋಗಿರುವನು.

ಒಂದು ದಿನ ನರಸಿಂಹಯ್ಯನನ್ನು ನಾಯಕನು ಬಲವಂತವಾಗಿ ಹಿಡಿದುಕೊಂಡು ಬಂದನು : ಆತನು ಬಂದುದನ್ನು ನೋಡಿ ಎಲ್ಲರೂ ಸಂತೋಷಪಡುವವರೇ ! “ನೋಡಿದೆಯಾ ಮಲ್ಲಿ ನಿಮ್ಮ ಗುರುಗಳು ಬನ್ನಿ ಅಂದರೆ ಬರುವುದಿಲ್ಲ ಎಂದು ಖಂಡಿತವಾಗಿ ಹೇಳಿಬಿಟ್ಟರು. ಕೊನೆಗೆ ನಿನ್ನ ಹೆಸರು ಹೇಳಿ ಅವಳು ‘ಸಂತೋಷಸಡುತ್ತಾಳೆ’ ಅಂದ ಮೇಲೆ ಬಂದಿದ್ದಾರೆ.” ನಾಯಕನು ಮಲ್ಲೀಗೆ ದೂರು ಹೇಳಿದನು.

“ಅವರು ಮಾಡುವುದು ಸರಿ ಬುದ್ದಿ, ನಾವು ದಿನವೂ ಗಾಂಧಿ ಯವರನ್ನು ನೋಡುವುದಕ್ಕೆ ಹೋಗುತ್ತೇವೆ. ಅದರೆ ನಾವು ಶುದ್ಧ ಕೃತ್ರಿಮಿಗಳು. ಅದಕ್ಕೋಸ್ಳರ ಅವರು ಬರುವುದಿಲ್ಲ. ಅಷ್ಟೇ !”

“ಅದೇನು ಹಂಗಂದೀಯೆ ? ಅದೇನು ನಾವು ಕೃತ್ರಿಮ ಮಾಡಿ ರೋದು ??

“ಅವರು ದರಿದ್ರನಾರಾಯಣನ ಪ್ರತಿನಿಧಿಗಳು. ಅಹಿಂಸಾ ವಾದಿಗಳು. ನಾವು ಲಕ್ಷ್ಮೀದೇವಿಯ ಭಕ್ತರು, ಶ್ರೀಮಂತರು. ದಿನ ದಿನ ಕುರಿ ಕೋಳಿ ತಿನ್ನೋರು. ಇದು ಕೃತಿಮವಲ್ಲದೆ ಇನ್ನೇನು?”

“ಏನೋ ಹೇಳತೀ ಅಂತಿದ್ದೆ. ಇಷ್ಟೇನಾ? ನಮ್ಮ. ವಂಶಪಾರಂಪರ್ಯವಾಗಿ ಬಂದದ್ದು” ನಾವೇನೂ ತಲೆ ಒಡೆದು ತಂದದ್ದಲ್ಲ. ಇದನ್ನು ಈಗ ಬಿಡೋದು ಅಂದರೆ ಯಾರಿಗೆ ಕೊಡ ಬೇಕು ? ಏನು ಮೇಷ್ಟ್ರೆ, ನೀವು ಹೇಳಿ. ನೀನು ಮಾಡಬೇಕು ಅಂದದ್ದೆಲ್ಲ ಮಾಡಿದೇವೋ ಇಲ್ಲವೋ? ಇನ್ನೂ ಎರಡು ಹೇಳಿ- ಮಾಡೋವಾ ನೀನು ಹೇಳಿದೆ ಮಕ್ಕಳ ಆಸ್ಪತ್ರೆ ಒಂದು, ಹೆರಿಗೆ ಆಸ್ಪತ್ರೆ ಒಂದು ಕಟ್ಟಿಸಿ ಅಂತ. ಅದಕಾಗಿ ಒಂದೊಂದು ಲಕ್ಷ ಕೊಟ್ಟೆವೋ ಇಲ್ಲವೋ ? ಇನ್ನೇನು ಮಾಡಬೇಕು ಹೇಳು.”

ನರಸಿಂಹಯ್ಯನು ಬಾಯಿ ಹಾಕಿದನು: “ಗಾಂಧಿಯವರು ಹೇಳುವುದು ಐಶ್ವರ್ಯವನ್ನು ಟ್ರಸ್ಟ್ ಆಗಿ ಉಪಯೋಗಿಸಬೇಕು ಅಂತ. ನೀವು ಹೆಚ್ಚು ಕಡಿಮೆ ಹಾಗೆ ಉಪಯೋಗಿಸುತ್ತೀರಿ. ಮುಖ್ಯವಾಗಿ ಈ ಮಾತು ರಾಜ ಮಹಾರಾಜರ ವಿಷಯವಾಗಿ ಹೇಳಿರೋದು. ಅವರೆಲ್ಲ ಅನೇಕರು ತಮ್ಮ ಆಸ್ತಿಯನ್ನು ದುರುಪಯೋಗಪಡಿಸುತ್ತಿದ್ದಾರೆ. ಅವರು ಮೈಸೂರು ಮಹಾರಾಜರ ಹಾಗೆ ಟ್ರಸ್ಟಿಗಳಾಗಬೇಕು ಅಂತ ಅವರ ಮನಸ್ಸಿನಲ್ಲಿದೆ.”

“ಹಾಗಂದರೆ? ಸ್ವಲ್ಪ ವಿಚಾರವಾಗಿ ಹೇಳಿ.”

“ಈಗ ಶ್ರೀಮಂತರು ಖರ್ಚಿನ ಕಡೆ ದೃಷ್ಟಿಯಿಟ್ಟುಕೊಂಡು ಆದಾಯ ಬೆಳೆಸುವುದಕ್ಕೆ ಪ್ರಯತ್ನಪಡುತ್ತಿದ್ದಾರೆ. ಇದು ತಪ್ಪು. ಅವರಿಗೆ ಇರುವ ಪ್ರಭಾವವೆಲ್ಲ ಹಣಸಂಪಾದಿಸುವುದಕ್ಕೆ ಖರ್ಚಾಗು ತ್ತದೆ. ತಿಂಗಳಿಗೆ ೨೦೦೦ ರೂ. ಖರ್ಚುಮಾಡದಿದ್ದರೆ ನಾನೆಂತಹ ಶ್ರೀಮಂತ ಎಂದು ೧೨೦೦ ರೂ ವರಮಾನದವನು ಅಂದುಕೊಂಡು ಉಳಿದ ಎಂಟುನೂರು ರೂಪಾಯಿ ಹೇಗಾದರೂ ಸಂಪಾದಿಸಬೇಕು ಅಂತ ಹೊರಬರುವ ಶ್ರೀಮಂತರ ತಂಡವೊಂದು. ನಿಮ್ಮ ಹಾಗೆ ಆಗರ್ಭ ಶ್ರೀಮಂತರ ತಂಡ ಇನ್ನೊಂದು. ನಿಮಗೆ ಲಕ್ಷರೂಪಾಯಿ ವರಮಾನ ಅದನ್ನು ಖರ್ಚುಮಾಡುವುದು ಹೇಗೆ ಎಂದು ನಿಮ್ಮ ಸಂಕಟ. ನಿಮ್ಮಂತಹವರು ಟ್ರಿಸ್ಟಿಗಳಾಗುವುದು ಎಂದರೆ, ಮಹಾರಾಜರ ಹಾಗೇ ಮೈಸೂರು ರಾಜ್ಯದ ಉತ್ಪತ್ತಿ ಒಂದೂವರೆ ಕೋಟಿ ಇದ್ದಾಗ ಅವರ ಅರಮನೆಗೆ ಸರಕಾರ ಇಪ್ಪತ್ತು ಇಪ್ಪತ್ತೈದು ಲಕ್ಷ ಕೊಡುವುದು ಎಂದಾಯಿತು. ಈಗಲೂ ಅದು ಹಾಗೇ ನಡೆಯುತ್ತಿದೆ. ಉಳಿದ ಹಣವೆಲ್ಲ ದೇಶಕ್ಕೆ ಉಪಯೋಗವಾಗುತ್ತಿದೆ. ಉಳಿದ ರಾಜ್ಯಗಳಲ್ಲಿ ಹಾಗಿಲ್ಲ. ಅನೇಕ ರಾಜರು ತಮ್ಮ ರಾಜ್ಯ ತಮ್ಮ ಆಸ್ತಿ ಎನ್ನುವಂತೆ ವರ್ತಿಸುತ್ತಿದ್ದಾರೆ. ಅಲ್ಲಿ ದೇಶೋಪಕಾರಿ ಕಾರ್ಯಗಳೇ ನಡೆಯುತ್ತಿಲ್ಲ. ಅಂತಹವರನ್ನು ಗಾಂಧಿಯವರು ಟ್ರಸ್ಟಿಗಳಾಗಿ ಎನ್ನುತ್ತಾರೆ. ಈ ಮಾತು ಎಲ್ಲ ಶ್ರೀಮಂತರಿಗೂ ಅನ್ನಯಿಸುತ್ತದೆ. ಅವರವರ ಖರ್ಚು ಇಷ್ಟು ಎಂದು ಗೊತ್ತುಮಾಡಿಕೊಂಡು ಉಳಿದುದನ್ನೆಲ್ಲ ಪ್ರಜೋಪ ಕಾರೀ ಕಾರ್ಯಗಳಿಗೆ ಉಸಯೋಗಿಸಬೇಕು ಎಂದು ಅವರ ಇಷ್ಟ.”

” ಈಗ ನಮ್ಮದು ಏನು ತಪ್ಪು ?”

” ಆದಿನ ನಿಮ್ಮೆದುರಿಗೇ ಅವರೇ ಹೇಳಿದರಲ್ಲ! ಅದರಂತೆ ನಡೆ ಯಿರಿ. ನಿಮ್ಮ ವಂಶದ ಆಸ್ತಿ: ಇದನ್ನು ಯಾರೂ ಖಲಲು ಮಾಡು ವಂತಿಲ್ಲ ಎಂದು ಒಂದು ನಿರ್ಧರಮಾಡಿ- ಉಳಿದುದರಲ್ಲಿ ನಿಮ್ಮ ಖರ್ಚಿಗೆ ಇಷ್ಟು, ಎಂದು ಇಟ್ಟುಕೊಳ್ಳಿ. ಮಿಕ್ಕುದನ್ನು ಬಡಬಗ್ಗರಿಗೆ ಕೊಡಿ.”

” ಆಯಿತು. ನಾವು ಕೊಟ್ಟರೆ ತಾನೇ ಬಡವರ ಬಡತನ ತೀರೀತಾ ?”

“ಹನಿಗೂಡಿದರೆ ಹಳ್ಳವಾಗುವುದು. ದೇಶದಲ್ಲಿರುವ ಬಡವರ- ನ್ನೆಲ್ಲ ನೀವು ಉದ್ಧಾರಮಾಡುವುದಕ್ಕಾಗುವುದಿಲ್ಲ. ನಿಜ. ಆದರೆ ನಿಮಗಾದಷ್ಟು ನೀವು ಮಾಡಿ. ಕೈ ನೋವು, ಕಾಲುನೋವು, ತಲೆ ನೋವು ಹೊಟ್ಟೆ ನೋವು ಇರುವ ಮನುಷ್ಯನಿಗೆ ಒಂದು ನೋವು ಕಡಿಮೆಯಾದರೆ ಅಷ್ಟು ಮಟ್ಟಿಗೆ ಆ ಕೃತಾರ್ಥ. ಹಾಗೆ ಇದು ಇಂಡಿಯಾದಲ್ಲಿ ಎಂದಾದರೂ ಒಂದು ದಿನ ಆಗಲೇ ಬೇಕು. ಈಗ ಇಂಗ್ಲೆಂಡಿನಲ್ಲಿ ಓಂದು ಶಾಸನವಿದೆ. ಅದರ ಪ್ರಕಾರ ಅರಮನೆ ಆಸಿ ಬಿಟ್ಟು ಉಳಿದ ಆಸ್ತಿಗಳನ್ನು ಪಡೆದುಕೊಳ್ಳುವ ಪ್ರತಿಯೊಬ್ಬನೂ ಸರಕಾರಕ್ಕೆ ಅಷ್ಟು ಕೊಡಬೇಕು. ಹಾಗೆ ಇಲ್ಲಿಯೂ ಬಂದರೆ ಆಗೇನು ಮಾಡುತ್ತೀರಿ? ಅದನ್ನು ಈಗಲೇ ಮಾಡಿ.”

“ಆಯಿತು. ಅದನ್ನು ಗಮನಿಸಬೇಕು, ನಿಜ. ಆಯಿತು. ಮಲ್ಲೀಗೆ ಏನು ಮಾಡಿದ್ದೀರಿ?”

“ನಾನೇನು ಮಾಡಲಿ?”

“ಅವಳೀಗ ಗಾಂಧಿಯವರ ಶಿಷ್ಯಳಾಗಿ ಆಶ್ರಮಕ್ಕೆ ಹೊರಟು ಹೋಗಬೇಕಂತೆ! ನಮ್ಮ ಪ್ರಾಣ ತೆಗೀತಿದ್ದಾಳೆ.”

” ಅದಕ್ಕೆ ನಾನು ಆಗಲೇ ಹೇಳಿದ್ದೀನಲ್ಲ? ”

” ಏನು? ?”

“ನೀವು ಭೋಗಪ್ರಾಣಿಗಳು. ಭೋಗಬಿಟ್ಟು ಬದುಕಲಾರಿರಿ. ಗಾಂಧಿಯವರ ಶಿಷ್ಯರಾಗಬೇಕಾದರೆ ಶುದ್ಧ ತಪಸ್ವಿಗಳಾಗಬೇಕು. ಅದು ನಿಮ್ಮಿಂದ ಸಾಧ್ಯವಿಲ್ಲ. ಆದು ಆದಮೇಲೆ ಆ ಮಾತು.”

“ಹೆಂಗೆ ಆಗೋದು ಸಾಧ್ಯವಾ? ಮೇಷ್ಟರೆ ?

“ಸರ್, ನಮ್ಮನ್ನು ಕೇಳಬೇಡಿ. ಸೇಲಂ ರಾಜಗೋಪಾಲಾ ಚಾರ್ರನ್ನು ಕೇಳಿ. ಕಲಕತ್ತೈಯ ಸಿ. ಆರ್. ದಾಸರನ್ನು ಕೇಳಿ. ಅವರು ತಮ್ಮ ಗಾಡಿಯ ಮುಂದೆ ಕರ್ಜನ್‌ ಗಾಡಿ ಬಿಡದೆ ಹೋದವರಂತೆ. ಕಲಕತ್ತೆಯಲ್ಲಿ ಸಿ. ಆರ್. ದಾಸರ ವರಮಾನ ವೈಸ್ರಾಯ್ ಸಂಬಳ ಕ್ಕಿಂತ ಹೆಚ್ಚಂತೆ. ಅಲಹಾಬಾದಿನ ಪಂಡಿತ ಮೋತೀಲಾಲ್‌ನೆಹ್ರೂ ಅವರನ್ನು ಕೇಳಿ. ಅವರು ತಮ್ಮ ಬಟ್ಟೆಗಳನ್ನು ಇಸ್ತ್ರಿಗೆಂದು ಪ್ಯಾರಿಸ್ಸಿಗೆ ಕಳುಹಿಸುತ್ತಿದ್ದರಂತೆ. ಇವರಿಗೆಲ್ಲ ಸಾಧ್ಯವಾಯಿತು. ಅಷ್ಟೇ ಅಲ್ಲ. ನಾಯಕರೆ, ಈ ಗಾಂಧಿಯುಗದಲ್ಲಿ ಸ್ವಾತಂತ್ರ್ಯ ಬರುತ್ತದೆ ಎಂದು ನಮ್ಮ ನಂಬಿಕೆ. ಆಗ ಈ ರಾಜಮಹಾರಾಜರುಗಳು ಎಷ್ಟು ರಕ್ತಪಾತ ಮಾಡುವರೋ ಹೇಳಲಾಗುವುದಿಲ್ಲ. ನಿಮ್ಮ ಮಾತಿನಲ್ಲಿ ಹೇಳಬೇಕು ಅಂದರೆ ಏಟುತಿಂದ ಹೆಬ್ಬುಲಿಗಿಂತ ಹೆಚ್ಚಾಗಿ ಕಾದಾರು. ಸಾಲದು ದಕ್ಕೆ ಈಗ ಹಿಂದೂ ಮುಸ್ಲಿಂ ಗಲಾಟೆಗಳು ಹೆಚ್ಚಾಗುತ್ತಿವೆ. ಬ್ರಿಟಷ್ ಸರಕಾರದ ಅಧಿಕಾರಿಗಳು ಬೇಕೆಂದು ಗಲಭೆಗಳನ್ನು ಮಾಡಿಸಿ, ಜನ ರನ್ನು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ. ಅಂತೂ ಎರಡೂ ತಪ್ಪು ವಂತಿಲ್ಲ. ಸ್ವಾತಂತ್ರ್ಯ ಬಂದರೆ, ಈ ರಾಜಮಹಾರಾಜರು ಇರು ವಂತಿಲ್ಲ: ಈಗಿರುವಂತೆ ಈ ಜಗಳದ ಮನೋಭಾವ ಇದ್ದರೆ ರಕ್ತಪಾತ ತಪ್ಪುವುದಿಲ್ಲ.”

“ಕೇಳಿದೆಯಾ ಮಲ್ಲಿ?”

“ಬುದ್ಧಿ, ನಾನು ಹುಟ್ಟದುದು ತಿಪ್ಪೆಯಲ್ಲಿ: ಬೆಳೆದುದು ಗುಡಿಸಲಿ ನಲ್ಲಿ. ಯಾನ ಅದೃಷ್ಟವೋ ತಮ್ಮ ಕೈಹಿಡಿದು ಮೆರೆದೆ. ಬಿಡು ಅಂದರೆ ನನಗೆ ಸುಲಭ. ಆದರೆ ಹುಟ್ಟುತ್ತಲೇ ಚಿನ್ನದ ಚಮಚ ಕಟ್ಟಿಕೊಂಡೇ ಹುಟ್ಟಕೋ ತಮಗೆ ಬಿಡುವುದು ಸಾಧ್ಯವೇ? ನಾನೇನು ಹೇಳಲಿ?”

“ಬಿಡೋದು ಕಷ್ಟ. ಸಾಯುವಾಗ ಹೆಂಗೋ ಬಿಡುತ್ತೇವೆ:

ಬಿಟ್ಟು ನಡೆಯುತ್ತೇವೆ. ಬಹುಶಃ ಇರುವಾಗಲೇ ಬಿಟ್ಟು ದಾನ ಅಂದರೆ ಒಳ್ಳೆಯದೇನೋ? ಹೇಗೂ ಬಿಡಬೇಕು: ಈಗಲೇ ಬಿಡಬಾರದೇಕೆ? ಆಯಿತು ಮೇಷ್ತ್ರೇ? ಗಾಂಧಿಯವರು ಗೆದ್ದರೆ ನಮ್ಮ ಮಹಾರಾಜರೂ ರಾಜ್ಯ ಬಿಡಬೇಕಾದೀತು ಅಂತೀರಾ ?”

“ರಾಜ್ಯನಾದರೂ ಬಿಡಬೇಕು: ಇಲ್ಲದಿದ್ದರೆ ಪ್ರಾಣನಾದರೂ ಬಿಡ ಬೇಕು. ಗೊತ್ತೆ ಈ ರಾಜರ ಹಾವಳಿ ಎಷ್ಟು ಎಂದು? ರೆಸಿಡೆಂಟನನ್ನು ಒಲಿಸಿ ಕೊಂಡರೆ ಆಯಿತು ರಾಜ್ಯದಲ್ಲಿ ಲಾಕ್‌ಲೇಕ್ ಮಾಡಬಹುದು. ರಾಜ್ಯದಲ್ಲಿರುವ ಪ್ರಜೆಗಳ ಪ್ರಾಣಗಳೆಲ್ಲ ಅವರ ಕೈಯಲ್ಲಿ. ದೇಶೀಯ ಸಂಸ್ಥಾನಗಳಲ್ಲಿರುವವರಿಗೆ ಡಬ್ಬಲ್ ಗುಲಾಮಗಿರಿ. ನಮ್ಮ ಮಹಾ ರಾಜರು ಎಂದಿರಿ. ಅವರು ನಿಜವಾಗಿಯೂ ರಾಜರ್ಷಿಗಳು. ಆದರೂ ಬ್ರಿಟಿಷ್ ಪಿಶಾಚಿಗಳ ದಾಸರಲ್ಲ! ಬಹುಶಃ ಇವರ ಒಳ್ಳೆಯತನದಿಂದ ಅವರ ಕೆಟ್ಟತನ ಸಹ್ಯವಾಗಿ ನಮಗೆ ಅಪರಾಧವಾಗುತ್ತಿದೆಯೇನೋ! ಏನಾದರೂ ಆಗಲಿ. ಅದನ್ನೆಲ್ಲ ಬಿಡೋಣ. ನಾನು ಬರದಿರುವ ಕಾರಣ ಮಲ್ಲಮ್ಮಣಿಯವರಿಗೆ ಗೊತ್ತಿದೆ ಎಂದು ನಾನು ತಿಳಿದಿರಲಿಲ್ಲ. ಆಕೆಯು ತಿಳಿದುದೂ ಒಳ್ಳೆಯದಾಯಿತು. ತಾವು ಆಕೆಯ ಚಿತ್ತವೃತ್ತಿ ಯನ್ನು ಅರ್ಥಮಾಡಿಕೊಂಡಾಗ ನನಗೆ ಹೇಳಿಕಳುಹಿಸಿ. ಆಕೆ ಹೇಳಿ ದಾರೆ. ನಮ್ಮ ಬುದ್ಧಿಯವರಿಗೆ ಅರವತ್ತು ವರ್ಷದ ಶಾಂತಿಯಾಗುವ ನರೆಗೂ ನಾನು ಗಾಂಧಿಯವರನ್ನು ದೂರದಿಂದ ಪೂಜೆಮಾಡುತ್ತೇನೆ.”

“ಇನ್ನೇನು ಶಾಂತಿ ಬಂತು. ಇನ್ನೆರಡು ವರ್ಷ.”

“ಆಗಲಿ. ಇನ್ನೆರಡು ವರ್ಷ ಆದ ಮೇಲೆ ನಾನೂ ಬರುತ್ತೇನೆ. ಅದುವರೆಗೆ ನಾನು ದೂರದಲ್ಲಿರುವುದಕ್ಕೆ ಅಪ್ಪಣೆಕೊಡಿ.?

“ನಾವು ಹಿಂಗಂತೀವಿ ಅಂದುಕೋಬೇಡಿ. ನೀವು ನಮ್ಮ ಮನೆಗೆ ಸೇರಿದವರು. ನೀವು ಊಟಕ್ಕೇನು ಮಾಡುತ್ತೀರಿ? ಹೆಂಗೆ?”

ಮಲ್ಲಿಯು ಉತ್ತರ ಕೊಟ್ಟಳು: “ಬುದ್ಧಿ ಅವರು ನಮ್ಮ ಮನೆ ಯವರು ನಿಜ. ಆದರೆ ಅವರ ದೇವರಿಲ್ಲನೆ? ಅವರ ಒಳ್ಳೆಯದು ಕೆಟ್ಟದು ಎಲ್ಲ ಅವನು ನೋಡಿಕೊಳ್ಳುತ್ತಾನೆ. ನಮ್ಮ ಗುರುಗಳನ್ನು ಕಟ್ಟುವ ರೀತಿ ಅದಲ್ಲ. ಒಂದು ಗಳಿಗೆ ತಡೆಯಿರಿ. ತೋರಿಸುತ್ತೀನಿ.? ಎಂದು ಒಳಗೆ ಹೋಗಿ ಆರುನೂರು ರೂಪಾಯಿ ತಟ್ಟೆಯಲ್ಲಿ ತಂದಳು; ಮುಂದಿಟ್ಟಳು: ನಮಸ್ಕರಿಸಿದಳು : ಹೇಳಿದಳು : “ಗುರುವೇ, ಇದೋ ಆರುನೂರು ರೂಪಾಯಿ. ಇನ್ನು ಇಪ್ಪತ್ತು ನಾಲ್ಕು ತಿಂಗಳು ತಾವು ಯಾರನ್ನೂ ನೋಡುವುದಕ್ಕೆ ಹೋಗಕೂಡದು. ತಮಗೆ ತೋರಿದ ರೀತಿಯಲ್ಲಿ ದೇಶಸೇವೆ ಮಾಡಿಕೊಂಡಿರಿ. ಇಲ್ಲಿಂದ ಎರಡುವರ್ಷ ವಾದಮೇಲೆ ನನಗೆ ದರ್ಶನ ಕೊಡಿ. ಆ ವೇಳೆಗೆ ನಮ್ಮ ಬುದ್ಧಿಯ ವರಿಂದ, ನಮ್ಮ ಪುಟ್ಟಬುದ್ಧಿಯವರಿಂದ, ನಮ್ಮ ದೊಡ್ಡಮ್ಮನವರಿಂದ, ಕೊನೆಗೆ ನಮ್ಮ ಆನಂದಮ್ಮನನರಿಂದ ಶಂಭುರಾಮಯ್ಯನವರಿಂದ ಎಲ್ಲ ರಿಂದಲೂ ಸೋಗಲಕ್ಕಿ ಇಡಿಸಿಕೊಂಡ ಗೌರಮ್ಮನ ಹಂಗೆ ನಿಮ್ಮ ಹಿಂದೆ ಬಂದ ಬಿಡುತೇನಿ. ನನ್ನ ಕರಕೊಂಡು ಹೋಗಿ ಆ ಮಹಾತ್ಮರಿಗೆ ಒಪ್ಪಿಸಿ ಬಿಡಿ.” ಆಮಾತು ಆಡುವಾಗ ಮಲ್ಲಿಯ ಕೈಮುಗಿದಿತ್ತು : ಕಣ್ಣು ಮಗಿದಿತ್ತು. ಹೃದಯದಲ್ಲಿ ತುಂಬಿರುವ ಏನೋ ಭಾವವನ್ನು ಮುಖವು ಕನ್ನಡಿ ಹಿಡಿದಂತೆ ತೋರಿಸುತ್ತಿತ್ತು.

ನರಸಿಂಹಯ್ಯನು ಬಹು ಸಮಾಧಾನವಾಗಿ ಆಕೆಯ ಮಾತು ಗಳನ್ನು ಕೇಳಿ ಎಲ್ಲವೂ ಮುಗಿದ ಮೇಲೆ, ಸಣ್ಣಗೆ, ಸಣ್ಣಗೆಂದರೆ ಸಣ್ಣಗೆ ನಗುತ್ತಾ “ತಾಯಿ, ಆಕಾಶ ನೋಡುವುದಕ್ಕೆ “ನೂಕು ನುಗ್ಗಲೇ? ಗಾಂಧಿಯವರ ಆಶ್ರಮಕ್ಕೆ ಹೋಗಿ ಶಿಷ್ಯಳಾಗಲು ನಾನು ಬೇಕೆ ? ಕೆರೆಯ ನೀರಿಗೆ ದೊಣೇ ನಾಯಕನ ಅಪ್ಪಣೆಯೇ ?” ಎಂದು ಕೇಳಿದನು.

ಮಲ್ಲಿಯು ಅದೇ ನಿಶ್ಚಲ ಭಾವದಿಂದ, ದೃಢವಾಗಿ, ಸ್ಪಷ್ಟವಾಗಿ, ಏನೂ ಆವೇಶವಿಲ್ಲದೆ, ಸಮಾಧಾನವಾಗಿ ನುಡಿದಳು: “ನನ್ನ ಮೊದಲ ನೆಯ ಗುರು ತಾವು. ತಮ್ಮ ಅನಂತರ ತಾವು ತೋರಿಸಿದ ಗುರು ಗಾಂಧಿ. ತಮ್ಮನ್ನು ಆಶ್ರಯಿಸಲು ಇವರೆಲ್ಲ ಒಪ್ಪಬೇಕು. ಆವರನ್ನು ಆಶ್ರಯಿಸಲು ತಾವು ಬೇಕು. ”

” ಅದುವರೆಗೂ ?”

” ಅದುವರೆಗೂ ದೇವರು ಅನುಗ್ರಹ ಮಾಡಿ ಕೊಟ್ಟಿರುವ ಈ ನನ್ನ ಬುದ್ದಿಯವರ ಪಾದಸೇವೆ.”

“ಅದುವರೆಗೂ ನಾನೇನು ಮಾಡಬೇಕು ?”

” ತಾವೇನು ಮಾಡಬೇಕು ಎಂದು ಗೊತ್ತು ಮಾಡುವವಳು ನಾನಲ್ಲ. ತಮಗೆ ಊಟ ಬಟ್ಟೆ ಇವುಗಳ ಚಿಂತೆ ಅಡ್ಡ ಬರಬಾರದು ಎಂದು ಅವಕ್ಕಾಗಿ ತಮ್ಮ ಮಗಳು, ತಮ್ಮ ಶಿಷ್ಯಳು ತಮಗೊಪ್ಪಿಸಿದ ಕಾಣಿಕೆ ಇದು. ತಮಗೆ ನನ್ನ ಹತ್ತಿರ ಇರುವ ಹಣವೆಲ್ಲ ಕೊಡಲು ನಾನು ಸಿದ್ಧ. ಆದರೆ ಅದನ್ನು ತಾವು ತೆಗೆದು ಕೊಳುವುದಿಲ್ಲ. ತಮ್ಮ ಹತ್ತಿರ ಇದ್ದ ಹಣವೆಲ್ಲ ತಾವು ದಾನ ಮಾಡಿರುವುದು ನನಗೆ ಗೊತ್ತು ಅದರಿಂದ ಇದನ್ನು ಒಪ್ಪಿಸಿದ್ದೇನೆ. ತಾವು ಬೇಡವೆಂದರೆ ನನ್ನ ಎದೆ ಯು ಒಡೆದು ಹೊಗುವುದು. ನಾನು ಹೋದರೆ, ನನ್ನಲ್ಲಿ ಅಭಿಮಾನ ವಿಟ್ಟು ಕೊಂಡಿರುವ ಇವರೆಲ್ಲ ಒದ್ದಾಡುವರು. ಅಷ್ಟು ನೋಯಿಸುವುದು ಅಹಿಂಸಾವ್ರತದ ತಮಗೆ ಹಿತವೆ? ಅದರಿಂದ ಒಪ್ಪಿಕೊಳ್ಳಿ. ಹೊಟ್ಟೆ ಬಟ್ಟೆ ಯೋಚನೆಯಿಲ್ಲದೆ ಇರಿ: ಬಾಯಾರಿದವರು ಹೋಗಿ ನೀರು ಕುಡಿದರೆ ಕೆರೆಯು ಬತ್ತುವುದೆ? ಅದಕ್ಕೆ ಲಕ್ಷ್ಯವೇ. ಹಂಗೆ ನಮ್ಮ ಬುದ್ಧಿಯವರಿಗೆ ಇದು ಲಕ್ಷ್ಯವಲ್ಲ – ಅಲ್ಲದೆ ಅಭಿಮಾನ ದೊಡ್ಡದು. ನನಗೆ ಬೇಕಾದ್ದು ಕೊಟ್ಟಿದ್ದಾರೆ ಅದರಲ್ಲಿಯೂ ಇದು ಬಲು ಸಣ್ಣ ಪಾಲು. ದಯಮಾಡಿ. ಒಪ್ಪಿಕೊಳ್ಳಿ. ನನ್ನ ಮನಸ್ಸಿ ನಲ್ಲಿರುವುದು ಫಲವಾಗಲೆಂದು ಹರಸಿ.”

“ತಾಯಿ ನೀವು ಮಕ್ಕಳು ಪಡೆದು ಸುಖವಾಗಿರೆಬೇಕಾದ ವರು – ನಿಮಗೇಕೆ ಆ ಗಾಂಧಿಯಾಶ್ರಮದ ಚಿಂತೆ?”

” ಗುರುದೇವಾ, ಬಾಲ ಶಂಕರನಂತೆ ನೀವು ಹೇಳಿಕೊಟ್ಟಿರಿ. ನೀವು ನಮ್ಮ ದೇಶದ ಪರಮಶತ್ರುಗಳಾದ ಬ್ರಿಟಿಷರನ್ನೂ ಶತ್ರುಗಳೆಂದು ದ್ವೇಷಿಸುವುದಿಲ್ಲ ಎಂಬ ಮಹನೀಯರ ಅನುಯಾಯಿಗಳು ತಾವು. ಇನ್ನು ನಮ್ಮ ಮೇಲೆ ಕೋಪಗೊಳ್ಳುವಿರಾ ? ಹೇಳಿಕೊಟ್ಟದ್ದನೆಲ್ಲ ಕಲಿತೆ, ಗೀತೆಯನ್ನು ಕಲಿಸಿದಿರಿ. ಎಲ್ಲವನ್ನೂ ಕೃಷ್ಣಾರ್ಪಣವೆಂದು ದೇವರ ದೇವನಿಗೆ ಒಪ್ಪಿಸಿ ನಿಶ್ಚಿಂತೆಯಾಗಿರುವುದೇ ಎಲ್ಲದಕ್ಕಿಂತ ಹೆಚ್ಚು ಎಂದು ಹೇಳಿದಿರಿ. ನೀವು ಅದರಂತೆ ಇರುವಿರಿ. ನಿಮಗಿಂತ ಹೆಚ್ಚಾಗಿ ಆ ಹಾದಿ ಹಿಡಿದಿರುವನರನ್ನು ತೋರಿಸಿದಿರಿ. ಈ ಮೆಟ್ಟಿಲು ಹಿಡಿದು ಅಲ್ಲಿಗೆ ಹೋಗಲು ಅಪ್ಪಣೆಕೊಡಿ.? ”

ನಾಯಕನು ಹೇಳಿದನು: “ಅಲ್ಲ, ಮಲ್ಲೀ, ಇಲ್ಲೇ ಇರು. ನಿನಗೊಂದು ಆಶ್ರಮಮಾಡಿ ಕೊಡುವಾ! ಕಾವೇರೀ ತೀರದಲ್ಲಿ ಬಂದು ಗಾಂಧೀ ಆಶ್ರಮ ಮಾಡಿಕೊಂಡು ಇರು. ಆಗೋಕಿಲ್ದಾ ?”

” ಬುದ್ಧಿ, ಎಲ್ಲರೂ ನಮ್ಮವರು: ಹಿಂಗಂತೀನಿ ಅಂದುಕೋ ಬೇಡಿ. ತಾವು ಪುಣ್ಯವಂತರು. ತಮ್ಮನ್ನು ಕಂಡರೆ ತಾವು ಸಾಕಿರೊ ದನಗಳು ಕೂಡ ಓಡಿ ಬಂದು ಅಂಬಾ ಎಂದು ತಮ್ಮ ಕೈಕಾಲು ನೆಕ್ಕು ತ್ತವೆ. ನಾನು ಅದಕ್ಕಿಂತ ಕಡೆಯಾ? ನಾನು ತಮ್ಮ ಪಾದದಲ್ಲಿರೋ ತನಕ ತಮ್ಮ ಸೂಳೆ. ಅದಕ್ಕೇ ಹೊರಟು ಹೋಗಬೇಕು.”

ರಾಣಿಯು ಹೇಳಿದಳು: “ಹೋಗಲವ್ವಾ ! ನನ್ನ ತಂಗಿಯಾಗಿ ನನ್ನ ಜೊತೇಲಿ ಇದ್ದು ಬಿಡು.”

ಮಲ್ಲಿಯು ಓಡಿ ಹೋಗಿ ರಾಣಿಯ ಕಾಲು ಕಟ್ಟಿಕೊಂಡಳು : “ತಿಪ್ಪೇಲಿದ್ದವಳ ತಂದು ತಲೆಗೇರಿಸಿಕೊಂಡ ನನ್ನವ್ವ! ನನ್ನ ಒದ್ದು ಬಿಡಿ. ನನ್ನ ಮರೆತು ಬಿಡಿ. ನಿಮ್ಮರಮನೆಯ ನಂದಾದೀಪವಾಗಿ ಸುಖವಾಗಿ ಇದ್ದು ಬಿಡಿ.”

ಆಳು ಬಂದು ಹಕೀಂ ಬಂದಿದ್ದಾನೆ ಎಂದು ಅರಿಕೆ ಮಾಡಿದನು. ನಾಯಕನು ಮಲ್ಲಿಯ ಮಾತಿನ ಬಿಗಿಯಾದರೂ ಸಡಿಲವಾಗಲೆಂದು ಅವನನ್ನು ಬರ ಹೇಳಿದನು: ಅವನು ಬಂದನು. ಅವನ ಮುಖದಲ್ಲಿ ಅಶಾಂತಿ ತಾನೇ ತಾನಾಗಿದೆ.

“ಏನು ಹಕೀಂ?”

“ಖಾವಂದ್ ” ಮುಂದೆ ಹಕೀಂನ ಮಾತು ಹೊರಡಲಿಲ್ಲ.

ನಾಯಕನು ಅವನನ್ನು ಕೂರಿಸಿ ಎಷ್ಟೋ ಸಮಾಧಾನ ಹೇಳಿದ ಮೇಲೆ, ಹಕೀಂ ಹೇಳಿದ: “ಖಾವಂದ್, ಎಲ್ಲಾ ಹರಾಂ ಆಗಿ ಹೋಯಿತು. ಈ ಹುಡುಗರ ಬುದ್ಧಿ ಕೆಟ್ಟು ಹೋಯಿತು- ನಮ್ಮವರ ನೆಲ್ಲಾ ಬಿಳೀಜನ ಕೊಂಡುಕೊಂಡು ಬುಟ್ಟವ್ರೆ. ಅದು ಯಾಕೋ ಬಂದು ಹೇಳ್ತವ್ರೆ ಹಿಂದೂ ಜನಾನ ಮುಸಲ್ಮಾನ್‌ ಮಾಡಬೇಕಂತೆ, ಅವರ ಆಸ್ತಿ, ಹೆಣ್ಣು ಮಕ್ಕಳು, ಎಲ್ಲಾ ಹೊಡಕೊಂಡು ಬರಬೇಕಂತೆ ಅರೇ ಅಲ್ಲಾ! ಇದುವರೆಗೆ ಭಾಯಿಭಾಯಿ ಆಗಿದ್ದು ಇನ್ನು ಮೇಲೆ ದುಷ್ಮಾನ್ ಆಗೋದಾ ? ನನಗೆ ಅದು ಕೇಳಿ ಬಹಳಾ ಕೋಪ ಬಂತು. ಮನೆ ಬಾಗಿಲು ಬಿಟ್ಟು ಹಾಳಾಗಿ ಹೋಗ್ಲಿ ಅಂತ ಹೊರಟು ಬಂದೆ. ನನಗೆ ಅಪ್ಪಣೆ ಕೊಡಿ. ಖಾವಂದ್, ನಾನು ಮಕ್ಕಾ ಮದೀನಾ ಹೊರಟು ಹೋಯ್ತೇನೆ.?

“ತಿರುಗಿ ಬರೋಲ್ಲವಾ ಹಕೀಂ 1?

“ಯಾಕೆ ಬರಲಿ ಬುದ್ಧಿ, ನನಗೂ ಎಪ್ಪತ್ತು ಎಪ್ಪತ್ತೈದು ವಯಸಾ ಆಯಿತು. ಗಟ್ಟಿಯಾಗಿರೋ ತನಕ ತಮ್ಮ ಗುಲಾಮನಾಗಿ ದುಡಿದೆ. ತಾವು ನನ್ನ ಒಂದು ವಸ್ತಾ ಅಂತ ಮೊಹಬತ್‌ನಿಂದ ಕಾಪಾ ಡಿದ್ರಿ. ಇನ್ನು ಕೆಟ್ಟ ದಿನ ಬಂದು ಕೆಟ್ಟೋರಾಗೋಕಿಂತ ಮುಂಚೆ ಮಕ್ಕಾಮಜೀದ್ ಹೆೊಂಟೋಯ್ತೇನೆ ಖಾವಂದ್

” ಹುಚ್ಚ. ಹೋಗಿ ಹಾಜಿ ಆಗಿಬಾ. ನಮ್ಮ ಪುಟ್ಟಬುದ್ಧಿಗೆ ನಿನ್ನ ಬುಟ್ಟರೆ ಕುದುರೆ ಸವಾರಿ ಕಲಿಸೋರು ಯಾರು? ಎಲ್ರಿ, ಕೊಡ್ರಿ, ಪುಟ್ಟ ಬುದ್ಧೀನ ಅವನ ಕೈಗೆ!

“ಆರೇ ಅಲ್ಲಾ? ಹೊಟ್ಟೀಲಿ ಹುಟ್ಟಿದ ಮಗನ್ನ ಬುಟ್ಟು ಬಂದೆ. ಖಾವಂದ್, ಈ ಪುಟ್ಟಬುದ್ದಿ ಬಿಡಲಾರೆನಲ್ಲ. ಕ್ಯಾಕರೂಂ ?”

“ನೀನು ಹೋಗಿ ಬಾ. ಹಾಜ್ ಮಾಡಿಕೊಂಡು ಬಂದರೆ ನಿನಗೂ ಅಲ್ಲಾನ ಸಾಲ ತೀರಲಿ. ಇರೋತನಕ ನಮ್ಮ ಜೊತೇಲಿ ಇದ್ದು ಬುಡು.”

“ಹಂಗೂ ಆಗಲಿ, ಖಾವಂದ್, ತಮ್ಮ ಉಪ್ಪು ತಿಂದಿದೀನಿ. ತಮ್ಮ ಜಮೀನ್ನಲ್ಲೆ ಮಲಗಿ ಬುಡುತೀನಿ.”

ನಾಯಕನ ಹೃದಯ ತನ್ನ ಪಾಡಿಗೆ ತಾನು ಹೇಳಿಕೊಂಡಿತು : ‘ ಮಲ್ಲಿಯೂ ಇವನಂದ ಹಾಗೆ ಅಂದು ಬಿಟ್ಟರೆ! ಎಲ್ಲಿ ಬಂತು; ಅದು ಸಾಧ್ಯವಿಲ್ಲ: ಹಕೀಂ ನನ್ನ ಗುಲಾಮ. ನಾನು ಮಲ್ಲಿಯ ಗುಲಾಮ. ನಾನು ಹೇಳಿದ ಹಂಗೆ ಹಕೀಂ ಕೇಳುತ್ತಾನೆ: ಅದರಿಂದಲೇ ಅವಳು ಹೇಳಿದ ಹಂಗೆ ನಾನು ಕೇಳಬೇಕು.’
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...