ನಡೆದೆ ನಾನು ಗುರುವಿನ ಪಥದೆಡೆಗೆ
ಸತ್ಯವನ್ನು ಅರೆಸುತ್ತ ದೇವರೆಡೆಗೆ
ಜ್ಞಾನದಿಂದ ಅರಳುತ್ತಿದೆ ಈ ಜೀವನ
ಚೈತನ್ಯ ತುಂಬಿದೆ ಈ ತನುಮನ
ಭವ್ಯ ಬಾಳಿಗೆ ನಾನು ನಾಂದಿಹಾಡಲೆ
ನಿಮ್ಮೊಲವು ನನ್ನ ಪದರಲಿ ತುಂಬಿಕೊಳ್ಳಲೆ
ನಿಮ್ಮ ಧನ್ಯ ನೋಟ ಎನ್ನ ಪಾವಿತ್ಯ ಗೊಳಿಸಿದೆ
ಎನ್ನ ಜನುಮ ಜನುಮ ಸಾರ್ಥಕ ಗೊಳಿಸಿದೆ
ಕ್ಷಣಿಕ ಆನಂದವೇ ಅಂದು ಸುಖವೆಂದೆ
ಅದು ಬರೀ ಭ್ರಮಯೆಂಬುದು ಈಗ ಕಂಡೆ
ಶಾಶ್ವತ ಸತ್ಯ ನನ್ನ ಶುಭಕೋರಲಿ
ದೇವನತ್ತ ಭಾವಿಸಿ ಭ್ರಮಾಲೋಕ ಮೀರಲಿ
ಇನ್ನೇನು ನಾನು ನಿಮ್ಮಲಿ ಬೇಡಲಿ
ಮತ್ತೊಂದು ಇನ್ನು ನಾನೇನು ಹಾಡಲಿ
ಬೆಳಕುಗಳಿಂದ ನಾನು ಹೃದಯ ತುಂಬಿರುವೆ
ಮಾಣಿಕ್ಯ ವಿಠಲನಾಗಲು ಕೋರಿರುವೆ
*****
















