ಕೋಲು ಕೋಲಣಿ ಕೋಲೇ ರಣ್ಣದಾ ಕೋಲು ಮೇ ಲಣಿರೋ || ಪಲ್ಲವಿ ||
ಗದ್ಯ || ನಿನಗೆ ಯೆಲ್ಲಾಯ್ತೊ ಬಾವಾ, ನಮ್ಗ್ ಕಂಟ್ರ ಕೋಣಾಯ್ತೊ ಬಾವಾ
ಯೆಂತಾ ಬಂದ್ರೋ ಗುಮಟಿಸಬ್ದಾಗಿ ಬಂದ್ರು
ಗುಮಟೆನಾದ್ರೂ ಹೊಡಿರೋ
ಹಕ್ಕೀಗೆ ಹಣ್ಣಿನಾಸೆ ನುಕ್ಕಿಗದ್ದೆಗೆ ನೀರಾಸೆ
ಕೋಲು……………. || ೧ ||
ಹಕ್ಕೀಗೆ ಹೆಗೆಯಾಕೋ ಕೋಡಗೆ ನೆಗೆಯಾಕೋ?
ಕೋಡನ ಕಯ್ಯೀಗೆ ಬಳೆಯಾಕೊ ರಣ್ಣದಾ
ಕೋಲು ……………. || ೨ ||
ಹಕ್ಕೀಗೆ ಹಲ್ಲಿಲ್ಲ ಕೆಪ್ಪೇಗೆ ಕೆಮಿಯಿಲ್ಲ
ಹತ್ತೂ, ಕಾಲೆಸಡೀಗೆ ತಲೆವಿಲ್ಲ ರಣ್ಣದಾ
ಕೋಲು …………….. || ೩ ||
ಬಾಳೆಯ ಸುಳಿ ಚೆಂದ ಸೂಳೇರ ತಲೆಚೆಂದ
ಕಂಚೂಗಾರ ಹುಡುಗೀ ಮೊಲೆ ಚೆಂದ ರಣ್ಣದಾ
ಕೋಲು …………….. || ೪ ||
ಬಸಳೇಗೆ ಮುಳ್ಳಿಲ್ಲ ಬಾಳೇಗೆ ಕೆಂಚಿಲ್ಲ
ಬಾಳೆಗೆ ಮುಂಚಿನ್ನಾಗೆ ಹೆಡೆವಿಲ್ಲ ರಣ್ಣದಾ || ೫ ||
ಕೋಲು ಕೋಲಣಿ ಕೋಲೇ ರಣ್ಣದಾ
ಕೋಲು ಮೇಲಣಿರೋ || ೬ ||
*****
ಹೇಳಿದವರು: ಕೋಡಿಗದ್ದೆ ಕುವರಿ ಮರಾಟಿಗಳು, ಕೋಡಿಗದ್ದೆ ಶ್ರೀ ರಾಮಭಟ್ಟರ ಸಂಗಡ ಅವರ ಕೇರಿಗೆ ಹೋಗಿ ಬರೆದು ಕೊಂಡಿದ್ದು.
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.
















