
ಕ್ಷಣಕ್ಷಣದ ಆವರಣದಲ್ಲಿ ಕಣವಾಗುವ ರೊಟ್ಟಿ ಅಪಾರ ಲಭ್ಯತೆಗಳಲಿ ಅಧಿಕವಾಗುವ ಹಸಿವು ಪೂರ್ಣತೆ ಶೂನ್ಯತೆಗಳು ಏಕಕಾಲಕ್ಕೆ ರೊಟ್ಟಿಯ ಎರಡು ಮುಖಗಳು ಹಸಿವಿನೆರಡು ಆಶಯಗಳು. *****...
ತನ್ನಂತೆಯೇ ರೂಪಿಸಲು ರೊಟ್ಟಿಯನ್ನು ಬಡಿಬಡಿದು ಅದೆಷ್ಟು ಚೆಂದಗೆ ಹದಗೊಳಿಸುತ್ತದೆ ಹಸಿವು. ರೊಟ್ಟಿಯೀಗ ಹೊರನೋಟಕ್ಕೆ ಹಸಿವಿನದೇ ಪ್ರತಿಬಿಂಬ ಒಳಗು ಮಾತ್ರ ಆತ್ಮಪ್ರತ್ಯಯದಲಿ ಜ್ವಲಿಸುವ ಮೂಲ ಬಿಂಬ. *****...
ಮೋಡ ಕವಿದ ಮನಸಿಗೆಲ್ಲ ಬಿಸಿ ಉಸಿರುಗಳ ಭರ ಸಿಡಿಲು ಸಿಡಿದಾಗ ಚಿಮ್ಮಿತ್ತು ಮಳೆ ಶಾಂತವಾಗಿತ್ತು ಪ್ರಕೃತಿ ಮತ್ತೆ ಚಿಗುರೊಡದಿತ್ತು ಒಡಲು. *****...













