
ಹಸಿವೆಗೆಷ್ಟು ಮಾತಿತ್ತೋ ಕೇಳಲಾರಿಗೆ ಪುರುಸೊತ್ತು? ವ್ಯರ್ಥ ಮಾತು ಯಾರಿಗೆ ಬೇಕು? ರೊಟ್ಟಿ ಏತಕ್ಕೆ ಕಾದಿತ್ತೋ? ಕಾಯುವ ತಪ ಕಾದವರಿಗೇ ಗೊತ್ತು. ಮುಟ್ಟಲಾಗದ ಗುಟ್ಟುಗಳು ಮುಖವ ಕೊಲ್ಲುತ್ತವೆ....
ಬಚ್ಚಲ ಮನೆಯ ಗೊಡೆಯಲಿ ಸ್ಟಿಕ್ಕರ್ ಬೊಟ್ಟುಗಳು ಸಾರುತಿವೆ ಸಿಂಧೂತೀರದ ನಾಗರೀಕತೆ ಬಿಂದಿಗಳು ಮ್ಯೂಸಿಯಂನ ಜಾಗರೂಕತೆ!! *****...
ಹಸಿವು ತೀರಿಹೋದರೂ ಹಸಿ ಆರುವುದಿಲ್ಲ ರೊಟ್ಟಿ ಹಸಿವಿನೊಡಲಲ್ಲಿ ಕರಗಿಹೋದರೂ ರುಚಿ ತೀರುವುದಿಲ್ಲ. ಹಸಿವು ರೊಟ್ಟಿಗಳ ಆರದ ತೀರದ ನಿರಂತರ ಪಯಣಕೆ ಮೂಲ ಈ ಪರಸ್ಪರ ಸೆಳೆತ....
ಯಾರೋ ಬಂದು ಬಾಗಿಲು ತಟ್ಟಿದಾಗ ತನ್ನಷ್ಟಕ್ಕೆ ಮುದಗೊಂಡು ಬಾಗಿಲು ತೆರೆಯಿತು. ಆಗ ನನಗನ್ನಿಸಿತು ಕದ ಬಾಗಿಲಲ್ಲಿಲ್ಲ ಅದನ್ನು ತಟ್ಟುವ ಕೈಗಳ ಹದದಲ್ಲಿದೆ. *****...













