-೧-

ಬಿಚ್ಚಿದ ಮುಡಿಗೆ ಮುತ್ತಿಟ್ಟಾಗ
ಪರಿಮಳ ನನಗೆ
ನೀನೇಕೆ ಕಣ್ಣು ಮುಚ್ಚಿದೆ
ಹಿತವಾಗಿ ಕಿವಿಯ ಮಚ್ಚೆಗೆ ಮುತ್ತಿಟ್ಟೆ
ಹಿತವಾಗಿ ಕಿವಿ ಕಚ್ಚುತ್ತಾ
ರೋಮಾಂಚನಗೊಳ್ಳಲು
ನೀ ಆಡಿದ ಪಿಸುಮಾತು
ಹೃದಯ ತಲುಪಿದೆ
ಬಿಗಿದ ಎದೆ ಕಂಪಿಸಿದೆ
****

-೨-

ಮಳೆ ಭೂಮಿಯ ಮಿಲನ
ಮುಂದುವರಿದಿದೆ
ಇಡೀ ಪ್ರಕೃತಿ ಸಂಭ್ರಮಿಸುತಿದೆ
ನಾವು ಎದುರು ಬದುರಾಗುವ
ಸಮಯಕ್ಕೆ ಭುವಿ ಕಾದಿದೆ
****

-೩-

ನೀ ಕರೆಯುವುದು ಹೆಚ್ಚೂ
ನಾ ಬರುವುದು ಹೆಚ್ಚು
ನದಿ ಸಮುದ್ರ ಮಿಲನಕೆ
ಓಡೋಡಿ ಬರುವಂತೆ ಬರುವೆ
ದಂಡೆಯ ಮೀರದೇ
ಒಲವು ಸಿಗದು ಚೆಲುವೆ
****

-೪-
ಪಾದಗಳ ಚುಂಬಿಸುವ
ಮನಸಾಗಿದೆ
ಅಲ್ಲಿಂದಲೇ ನಿನ್ನ ಹೃದಯಕೆ
ಲಗ್ಗೆ ಇಡುವೆ
ಒಲವ ರಾಗವ ಬೆರೆಸಿ
ನೆಲ ಮುಗಿಲು ಒಂದಾಗುವ ಹಾಗೆ ಚುಂಬಿಸುವೆ
ಅನುಮತಿಸು ಒಲವೇ
*****