ರೊಟ್ಟಿ ಹಸಿವು ಸೇರಿ
ಒಂದರೊಳಗೊಂದಾಗಿ
ಪರಿಪೂರ್ಣತೆಯ ಅನುಭವ.
ಹಸಿವು ಮತ್ತೆ ಆವಿಯಾಗಿ
ಪರಿತಪಿಸಿ ರೊಟ್ಟಿಗಾಗಿ
ರೊಟ್ಟಿಯೇ ಆಗುವುದು
ಅನುಭಾವ.