
ಕೈಯಲ್ಲಿ ಕೋವಿ ಹಿಡಿದವರು ನನ್ನ ಜನಗಳಲ್ಲ ಸ್ವಾಮಿ ಭತ್ತದ ಗದ್ದೆಯಲಿ ನಡು ಬಗ್ಗಿಸಿ ಕುಡುಗೋಲು ಹಿಡಿದವರು ಅವರು. ನನ್ನವರ ಎದೆಯಲ್ಲಿ ಕಾವ್ಯವಿದೆ ಎತ್ತಿನ ಗೆಜ್ಜೆನಾದ, ಹಂತಿ ಹಾಡುಗಳಿವೆ ನೋವು ಮರೆತು ಹಾಡುತ್ತಾರೆ. ಸಂಘರ್ಷದ ಬದುಕು ಬದುಕುತ್ತಾರ...
ಕುಣಿಯುವ ನವಿಲಿನ ಸುಂದರ ತಾಣ ಕರುನಾಡಲ್ಲದೆ ಇನ್ನೇನು ಹಾಡುವ ಕೋಗಿಲೆ ಕೊರಳಿನ ಗಾನ ಕನ್ನಡವಲ್ಲದೆ ಮತ್ತೇನು? ಹರಿಯುವ ಹೊಳೆಗಳ ಜುಳುಜುಳು ರವದಲಿ ಸಿರಿಗನ್ನಡದ ಮಾರ್ದನಿಯು ತುಳುಕುವ ಕಡಲಿನ ಅಲೆಮೊರೆತದಲಿ ಸವಿಗನ್ನಡದ ನುಣ್ದನಿಯು ಗಿಳಿ ಕಾಜಾಣ ಉಲಿ...
ಹಾಡ ಕೇಳ ನೋಡ ಹಾಡಿನೊಳಗಣ ಭಾಷೆ ಕಟ್ಟಿ ಹಾಡ ಭಾಷೆ ಕೇಳ ನೋಡ ಭಾಷೆಯೊಳಗಣ ರೂಪ ಕಟ್ಟಿ ಹಾಡ ರೂಪ ಕೇಳಿ ನೋಡಿ ರೂಪದೊಳಗಣ ಭಾವ ಕಟ್ಟಿ ಹಾಡ ಭಾವ ಕೇಳ ನೋಡ ಭಾವದೊಳಗಣ ಗೆಳೆತನ ಕಟ್ಟಿ ಹಾಡ ಗೆಳೆತನ ಕೇಳಿ ನೋಡ ಗೆಳೆತನದೊಳಗಣ ಐಕ್ಯತೆ ಕಟ್ಟಿ ಹಾಡ ಐಕ್ಯತೆ...
ವಾಗ್ದೇವಿ ಭಾಂಡಾರ ಮುದ್ರೆಯೊಡೆದಿಹ ರನ್ನ ನಾನಲ್ಲ. ಹೇಳಿದರೆ ನಾನೆ ಹೇಳುವದೆಂದು ಯಾವ ಮಹರಾಯನೂ ಹೇಳಿಲ್ಲ. ನಾನಿಂದು ತಿಳಿದಿಲ್ಲವಹುದೆಂದು ಸಕಲಗುಣಸಂಪನ್ನ. ಇಲ್ಲಿರದು ಬಹುರೀತಿ, ದಂಗುವಡಿಸುವ ಶಬ್ದ ಬಿರುದುಬಿದ್ದಣವಿರದೆ ಬರೆಯುವುದ್ಯಮಕಿಂತು ಅಣಿ...
ಮೌನ ವಿಶ್ವವು ಗಾನ ತುಂಬಿತು ಶೂನ್ಯ ಸಕ್ಕರೆಯಾಯಿತು ಬಯಲು ಆಲಯವಾಗಿ ಅರಳಿತು ಜೀವ ತೇರನು ಎಳೆಯಿತು. ಬೆಳಕಿನದ್ಭುತ ನಾಟ್ಯ ನಡೆದಿದೆ ನೋಡ ಬಾರೊ ಗೆಳೆಯನೆ ಬಿಸಿಲ ಕೋಲ್ಗಳು ಬಣ್ಣ ಬೀಸಿವೆ ಇತ್ತ ನೋಡೊ ಅರಮನೆ ಅಲ್ಲಿ ಬಿಸಿಲು ಇಲ್ಲಿ ಗಾಳಿ ಕಡಲು ಭೂಮಿ...
ಹುಲ್ಲ ಪ್ರೀತಿಸದವ ಹೊಲವ ಪ್ರೀತಿಸುವನೆ ಹುಲ್ಲ ಪ್ರೀತಿಸಲು ಕಲಿ ಮೊದಲು ಶಿಲೆಯ ಪ್ರೀತಿಸದವ ಶಿಲ್ಪ ಪ್ರೀತಿಸುವನೆ ಶಿಲೆಯ ಪ್ರೀತಿಸಲು ಕಲಿ ಮೊದಲು ಗುಡ್ಡವ ಪ್ರೀತಿಸದವ ಬೆಟ್ಟವ ಪ್ರೀತಿಸುವನೆ ಗುಡ್ಡವ ಪ್ರೀತಿಸಲು ಕಲಿ ಮೊದಲು ಹನಿಯ ಪ್ರೀತಿಸದವ ಹೊಳ...
“ಮಾತಾ ಸರ್ವಸ್ಯ ಲೋಕಸ್ಯ ಮಧುಸೂಧನಮಾನಿನೀ ದರ್ವೀಮಾದಾಯ ಬಾಲಸ್ಯ ದದೌ ಭಿಕ್ಷಾಂ ಗೃಹೇ ಗೃಹೇ” (ಯಾದವಗಿರಿ ಮಾಹಾತ್ಮ್ಯ) “ಭವತಿ ಬಿಚಾಂದೇವಿ”ಯೆಂದು ನಮ್ಮ ಮನೆಯ ಹೊಸಿಲ ಮುಂದು ದಂಡಕೋಲುಛತ್ರಿ ಹಿಡಿದು ಮನೆಯೊಡತಿಯ ತೊದಲಿ ಕರೆದು ಕಾಡಿಗ...
ಇಲ್ಲಿ ಬುದ್ಧಿಯಿದೆ ನಿಜ ಹೃದಯವೇ ಮಾಯವಾಗಿದೆಯಲ್ಲ? ಬದುಕಿನ ಅನೇಕ ತಿರುವುಗಳಲ್ಲಿ ಪೆಟ್ಟು ತಿಂದರೂ ನಾನೇ ಬದಲಾಗಲಿಲ್ಲವಲ್ಲ? ಆಕಾಶದ ಬಟ್ಟೆಯಲಿ ತೂತುಗಳೇ ಇಲ್ಲ ಆದರೆ ಹೃದಯದಲ್ಲಿ ತೂತು ಬಿದ್ದಿದೆ. ಸರಿಪಡಿಸಿ, ಕೃತಕ ಉಸಿರಾಟಕ್ಕೆ ನಳಿಕೆ ಅಳವಡಿಸಿ...













