(ಜಾನಪದ ಶೈಲಿ)

ಕಂಡೆನವ್ವಾ ಕ೦ಡೆ ಗ೦ಡನ
ಖಡಕ ಗಂಡಾ ಕಾಡಿದಾ
ಬೇಡವೆಂದೆ ಖೋಡಿಯೆಂದೆ
ಮೋಡಿ ಮಾಡಿ ಓಡಿದಾ

ತ೦ದಿ ಗುರುವು ಮುಂದೆ ಬಂದಾ
ಕಾಡುಲಿಂಗನ ಕಟ್ಟಿದಾ
ಕಾಣಲಾರದ ಪತಿಯ ಕಾಣಿಸಿ
ನಾಡ ಮದುವಿಯ ಮಾಡಿದಾ

ಮಿಲನವಿಲ್ಲಾ ಮಾತು ಇಲ್ಲಾ
ಮಂಚವಿಲ್ಲಾ ಶಿವಶಿವಾ
ಬೇಕು ಇಲ್ಲಾ ಬೇಡ ಇಲ್ಲಾ
ಬೋಳುಲಿಂಗನು ಬರಿಶಿವಾ

ದೇಹ ಹರಿದೆ ದಾಹ ಮುರಿದೆ
ನನ್ನ ನಿಗಿನಿಗಿ ಸುಟ್ಟೆನೆ
ಹೌದು ಸುಟ್ಟೆ ಅಲ್ಲ ಸುಟ್ಟೆ
ಸುಟ್ಟ ಮೇಲೆ ಕೆಟ್ಟೆನೆ
*****