Home / ಕವನ / ಕವಿತೆ

ಕವಿತೆ

ಮಳೆ ಬರುವ ಕಾಲಕ್ಕ ಒಳಗ್ಯಾಕ ಕೂತೇವೊ ಇಳೆಯೊಡನೆ ಜಳಕ ಮಾಡೋಣ ನಾವೂನು, ಮೋಡಗಳ ಆಟ, ನೋಡೋಣ. ಮರಿಗುಡುಗು ಕೆಲೆವಾಗ ಮಳೆಗಾಳಿ ಸೆಳೆವಾಗ ಮರಗಿಡಗಳನ್ನು ಎಳೆವಾಗ ನಾವ್ಯಾಕ, ಮನೆಯಲ್ಲಿ ಅವಿತು ಕೂತೇವೊ. ಕೋಲ್ಮಿಂಚು ಇಣಿಕಿಣಿಕಿ ಕಣ್ಕುಣಿಸಿ ಕೆಣಕೆಣಕಿ ಬ...

ಬರಬೇಕು ನಾ ನನ್ನೂರಿಗೆ ಹಾಳೂರೊ ಮಾಳೂರೊ ಏನಾದ್ರೂ ನನ್ನೂರೆ ಮುರುಕು ಛಾವಣಿಗಳೊ ಕೊರಕು ಕಲ್ಲೋಣಿಗಳೋ ಏನಾದ್ರೂ ನನ್ನೂರೆ ಅಲ್ಲೆಲ್ಲೋ ನನ್ನ ಜೀವ ಅಲ್ಲೆಲ್ಲೋ ತುಸು ತೇವ ನೆನಪಿನಂತೇನೊ ಯಾವ ಇನ್ನೂ ಕಾಡುವ ಒಂದು ಭಾವ ಗುಡ್ಡ ಬೆಟ್ಟವ ದಾಟಿ ಇಳಿದು ಕಡ...

ಬೆರೆದರೂ ಬೇರೆಂದೆ ಸಮದೂರದೊಳು ಸರಿವ ವಿಷಯಾತ್ಮಸಂಗಮಿಸುವಾನಂತ್ಯವೇ, ಸೋ೦ಕಲರಿವೇ ಕರಗಿ ನೆನವೆಂಬ ನೆರಳುಳಿಯೆ ಪ್ರತ್ಯಕ್ಷವೆನಲಾಗದಾನಂದವೇ, ಪಡಲಿಲ್ಲವೆನಲಾಗದಪರೋಕ್ಷದನುಭವವೆ, ಅರಿತಿಲ್ಲವೆನಲಾಗದಂದದರುಳೇ, ಒಲಿವಂದಮೆನ್ನೆಸಗಿ ಒಲವ ಕೊಳೆ ಕೈತೆರೆಯು...

ಬುದ್ಧನ ಹುಡುಕಿದೆ. ಉಸಿರುಗಟ್ಟಿಸುವ ನಾಗರೀಕ ತಾಣಗಳಲ್ಲಿ ಚಿತ್ರಹಿಂಸೆಯ ಗ್ಯಾಸ್ ಛೇಂಬರ್‌ಗಳಲ್ಲಿ ತೊಟ್ಟಿಲಲ್ಲಿ ಮಲಗಿದ ಮುದ್ದು ಕಂದನ ಮುಗ್ಧ ಮುಗುಳು ನಗೆಯ ಬೆಳಕಲ್ಲಿ ದ್ವೇಷವಿಲ್ಲ, ಮಗುವಿನ ಮುಗ್ಧತೆಯಲ್ಲಿ. ಬುದ್ಧನ ಹುಡುಕಿದೆ. ಬೆಳಗು ಮುಂಜಾವ...

೧ ನಾ ಕಂಡ ಜೀವಿಯನು ಭೂಖಂಡವೆಲ್ಲ ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ ಬಾಲ್ಯದಲಿ ಪಶುಗಳನು ಸಲಹುತ್ತ ಬೆಳೆದೆ ಬಳಿಕೆಯಾಗಿಹ ಪ್ರಾಣಿಒಳಗಂಗಳರಿದೆ ವನಮೃಗಖಗಂಗಳನು ನೋಡುತ್ತ ನಲಿದೆ ಜನಪದಂಗಳನೆಲ್ಲ ಬಳಸುತ್ತ ತಿಳಿದೆ ನಾ ಕಂಡ ಜೀವಿಯನು ಭೂಖಂಡವೆಲ್ಲ...

ಕಣ್ಣೆದುರೇ ಕಣ್ ಮರೆಯಾಗುತಿದೆ ಮಾತು ಕಲಿಸಿದ ಕನ್ನಡವು ನಿಂತ ನೆಲವು ಪರದೇಶಿಯಾಗುತಿದೆ ಜನ್ಮ ಕೊಟ್ಟು ಕರ್ನಾಟಕವು || ಪಲ್ಲವಿ || ಇಲ್ಲಿ ಹುಟ್ಟಿ ನದಿಯಾಗಿ ಹರಿದ ನಮ್ಮ ಕಾವೇರಮ್ಮ ಮುನಿದಿಹಳು ಕನ್ನಡಿಗರ ಅಭಿಮಾನ ಶೂನ್ಯಕೆ ಅನ್ಯರ ಮನೆಯನು ಸೇರಿಹಳ...

ದಾರಿಹೋಕನೆ! ಕೇಳು! ನಾನಿರುವೆನೇಕಾಂಗಿ! ರಾಜನೀಧಿಯಲಲೆಯುತಿರುವೆ ನಾನನುದಿನವು. ಕಾಯುವೆನು ಮಂದಿರದ ಒಳಹೊರಗು, ಜನಮನವು ಒಲಿಯಬಹುದೇನೆಂದು. ಒಂದು ಮರದಡಿ ತಂಗಿ ನೋಂತಿಹೆನು ಚಾತಕವ್ರತದಿ ದುಃಖವ ನುಂಗಿ! ಆರೋಗಣೆಯು ಇಲ್ಲ; ಇಲ್ಲದಾಗಿದೆ ತನುವು! ಕೊರ...

ಮಲಯ ಪರ್ವತ ಮಧುರ ಬನದಲಿ ಯಾರು ನಿನ್ನನು ಕರೆದರು ಕಣ್ಣು ಕಾ೦ಚನ ಶಿವನ ಲಾಂಛನ ದೇವ ಗುರುಗಳು ಬಂದರು ಕಾಡು ಕಂದರ ಶಿಖರ ಸುಂದರ ಹಸಿರು ಹೂವಿನ ದೇವರು ಮೇಲೆ ಗಗನದ ಹನಿಯು ತೋರಣ ಕಾಯ ಹರುಷವ ತಂದರು ಹೊನ್ನ ಮುಕುಟಾ ಹಸಿರು ಬಾವುಟಾ ವೀರಪೀಠದಿ ಮರೆವರು ...

ಬೂಮೀಗ್ ಗೋಂದ್ ಆಕ್ ಅಂಟೀಸ್ದಂಗೆ ಅತ್ತಾಗ್ ಇತ್ತಾಗ್ ಅಳ್ಳಾಡ್ದಂಗೆ | ಕೋಳದಾಗ್ ನಿಂತಿತ್ ನೀರು. ಗಂಡನ್ ತುಟೀಗ್ ಯೆಡ್ತಿ ಮುತ್ತು ಕುಂತಂಗ್ ಕೊಳದಾಗ್ ಕುಂತ್ಕೊಂಡಿತ್ತು ಒಂದ್ ಚಿಕ್ ಬೆಂಡಿನ್ ಚೂರು. ೧ ಪಡಕಾನೇಗೆ ತಗದ್ ಗೇಟಿಂದ ಕುಡಕರ್ ನುಗ್ದಂಗ್...

ಇಂದರ ಹೂ ಚಂದರ ಹೂ ಚೆಂದ ಚೆಂದದ ಹೂ ತಂದು ಇಟ್ಟೇನೀಗ ನಿನಗಂತ, ಸುಂದರಿ. ಕಣ್ಣು ಸೋತ್ಯು ಹಾದೀ ನೋಡಿ; ಮನ ಸೋತ್ಯು ಚಿಂತೀಮಾಡಿ; ನಾಲ್ಗಿ ಸೋತ್ಯು ಹಾಡಿಹಾಡಿ; ನಿನ ಹಾಡು, ಸುಂದರಿ ಚಿಗರಿ ಸಂಗಾತ ಆಟ ಎಡಕ ಬಲಕ್ಕ ನೋಟ ಬರಬ್ಯಾಡ ಮಾಡುತ ಬ್ಯಾಟಾ ಬೇಗ ...

1...3637383940...578

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...